ಬಹುಮುಖ ಪ್ರತಿಭೆಗಳೊಂದಿಗೆ ಪ್ರಜ್ವಲಿಸುತ್ತಿರುವ ರಾಷ್ಟ್ರಮಟ್ಟದ ಯೋಗಾ ಪಟು |ಪ್ರತೀಕ್ಷಾ ಶೆಟ್ಟಿ ನಿಡ್ಲೆ


ಪ್ರತಿಭಾ_ವಿಶೇಷ
: ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಜೀವತ್ಮಾ ಅನಂತಾತೀತ ದೈವತ್ವದ ಜತೆ ಸಮ್ಮಿಳಿತಗೊಳ್ಳುವುದೇ ಯೋಗ  .ಹೀಗೆ ಯೋಗದ ಜತೆಗೆ ರಾಷ್ಟ್ರ ಮಟ್ಟದಲ್ಲಿ ಭಾಗಿಯಾಗುವ ಭಾಗ್ಯ ದೊರಕಿದ ಅದ್ಬುತ ಯಶಸ್ವಿ ಮಹಿಳಾ ಪ್ರತಿಭೆಯೇ ಪ್ರತಿಕ್ಷಾ ಶೆಟ್ಟಿ. 


"ಯೋಗದಿಂದ ರೋಗ ದೂರ, "ಯೋಗ ಮಾಡಿ ಆರೋಗ್ಯ ಪಡೆಯಿರಿ" ಎಂಬಂತೆ ಇಲ್ಲೋರ್ವ ರಾಷ್ಷ್ಟ್ರ ಮಟ್ಟದ ಯೋಗಪಟು,ಯಕ್ಷಗಾನ ಕಲಾವಿದೆ ನೃತ್ಯ, ಕ್ರೀಡೆ,ಹಾಡುವುದು ಮೊದಲಾದ ಬಹುಮುಖ ಪ್ರತಿಭೆ ಪ್ರತೀಕ್ಷಾಶೆಟ್ಟಿ ಬಿ.ನನ್ನ ಪ್ರೀತಿಯ ವಿದ್ಯಾರ್ಥಿನಿ ಅನ್ನೋದು ನನಗೆ ಹಾಗೂ ನಮ್ಮೂರಿಗೆ ಹೆಮ್ಮೆಯ ವಿಚಾರ.


ನಿಡ್ಲೆ ಗ್ರಾಮದ ಬೂಡು ಜಾಲು ನಿವಾಸಿ ಶ್ರೀ ಜಯಂತ ಶೆಟ್ಟಿ ಮತ್ತು ವಸಂತಿ ಶೆಟ್ಟಿ ದಂಪತಿಯ ಪುತ್ರಿ. ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಬೂಡುಜಾಲಿನಲ್ಲಿ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆ ಇಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ,ಸರಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದರು.


ಶ್ರೀ ಧರ್ಮಸ್ಥಳ  ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಉಜಿರೆ ಇಲ್ಲಿ ಪದವಿಪೂರ್ವ ಶಿಕ್ಷಣವನ್ನು ಮತ್ತು ವಾಣಿಜ್ಯ ವಿಭಾಗದಲ್ಲಿ ಪದವಿಯನ್ನು ಶ್ರೀ ಮಂಜುನಾಥೇಶ್ವರ ಪದವಿ ಕಾಲೇಜು ಉಜಿರೆ ಇಲ್ಲಿ ಪೂರೈಸಿರುತ್ತಾರೆ. ಮಾತ್ರವಲ್ಲಶ್ರೀ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜಿನಲ್ಲಿ ಎಂ. ಎಸ್. ಡಬ್ಲ್ಯೂ ಸ್ನಾತಕೋತ್ತರಪದವಿ ಪೂರೈಸಿ ಪ್ರಸ್ತುತ ಬೆಂಗಳೂರಿನ ಗೋಕುಲ್ದಾಸ್ ಎಕ್ಸ್ಪೋರ್ಟ್ಸ್ ನಲ್ಲಿ ವೆಲ್ಫೇರ್ ಆಫೀಸರ್  ಆಗಿ ಉದ್ಯೋಗದಲ್ಲಿದ್ದಾರೆ.

ರಾಷ್ಟ್ರಮಟ್ಟದ ಯೋಗ ಪಟು : 


ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಶರಣಪ್ಪ ಭಗಲಿ ಯೋಗದ ಬಗ್ಗೆ ಆಸಕ್ತಿ ಹುಟ್ಟಿಸಿದರೆ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಶ್ರೀಯುತ ಮರಿಯಪ್ಪ ಗೌಡ ಆಸಕ್ತಿಗೆ ತಕ್ಕಂತೆ ಯೋಗ ಹೇಳಿಕೊಟ್ಟ ಸಾಕಾರಮೂರ್ತಿ. ಅನೇಕ ವಿದ್ಯಾರ್ಥಿಗಳಿಗೆ ಯೋಗ ಹೇಳಿಕೊಟ್ಟು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು, ಈ ಸಂದರ್ಭದಲ್ಲಿ ಮರಿಯಪ್ಪ ಸರ್ ಅವರನ್ನು ವಿಶೇಷವಾಗಿ ನೆನೆಯುತ್ತಾರೆ, ಪ್ರತೀಕ್ಷಾರವರು.ಅಂದರೆ ಇಲ್ಲಿ ಮರಿಯಪ್ಪ ಗೌಡ ಅವರ ಪ್ರಯತ್ನಕ್ಕೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಪ್ರತಿಭೆಗಳು ರೂಪಗೊಂಡಿದ್ದು, ಇವರ ಮಹಾತ್ಕಾರ್ಯಎಂದರೆ ತಪ್ಪಗಳಾರದು.


ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕಿ ಶ್ರೀಮತಿ ಕಾತ್ಯಾಯಿನಿ ಮೇಡಂ ಅವರು, ಪದವಿಪೂರ್ವಕಾಲೇಜಿನಲ್ಲಿ ದೈಹಿಕ ಶಿಕ್ಷಕ ಶೀಯುತ ಸಂದೇಶ್ ಪೂಂಜ, ಪದವಿ/ ಸ್ನಾತಕೋತ್ತರ ಪದವಿಯಲ್ಲಿ ದೈಹಿಕ ಶಿಕ್ಷಕ ಶೀಯುತ ರಮೇಶ್ ಸರ್ ಅವರು ಯೋಗ ಕಲಿಕೆಗೆ ಸಾಥ್ ನೀಡಿದ್ದನ್ನು ಪ್ರೀತಿಪೂರ್ವಕ ನೆನಪಿಸುತ್ತಾರೆ ಪ್ರತೀಕ್ಷಾ ಶೆಟ್ಟಿ.

ಪಾರಿತೋಷಕಗಳು :



ಶ್ರೀ ವೀರಮೂರ್ತಿ ಸೇವಾ ಸಂಘ ಮೂಡಬಿದ್ರಿ ಏರ್ಪಡಿಸಿದ ಪ್ರಾಥಮಿಕ ವಿಭಾಗದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 4ನೇ ಸ್ಥಾನ.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆ ಬೆಳಾಲು ಇಲ್ಲಿ ನಡೆದ ತಾಲೂಕುಮಟ್ಟದ ಪ್ರೌಢಶಾಲಾ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ನಾಲ್ಕನೇ  ಸ್ಥಾನ. ಪದವಿಪೂರ್ವ ಶಿಕ್ಷಣ ಇಲಾಖೆವತಿಯಿಂದ ಶ್ರೀ ಧರ್ಮಸ್ಥಳ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಸನ ಸ್ಪರ್ಧೆಯಲ್ಲಿ ಐದನೇ ಸ್ಥಾನ.ಪದವಿಪೂರ್ವ ಶಿಕ್ಷಣ ಇಲಾಖೆ ಚಿಕ್ಕಮಂಗಳೂರಿಯಲ್ಲಿ ಏರ್ಪಡಿಸಿದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ, ಪದವಿಪೂರ್ವ ಶಿಕ್ಷಣ ಇಲಾಖೆ ಕಡೂರಿನಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ.ಮಂಗಳೂರು ವಿಶ್ವವಿದ್ಯಾನಿಲಯ,  ಅಂತರ್ ಕಾಲೇಜು ಮಟ್ಟದ ಪದವಿ ವಿದ್ಯಾರ್ಥಿನಿಯರಿಗೆ ಆಳ್ವಾಸ್ ಕಾಲೇಜು ಮೂಡಬಿದ್ರಿ ಇಲ್ಲಿ ಏರ್ಪಡಿಸಿದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ, ಚಾಂಪಿಯನ್ಶಿಪ್.ಮಂಗಳೂರು ವಿಶ್ವವಿದ್ಯಾನಿಲಯ,  ಅಂತರ್ ಕಾಲೇಜು ಮಟ್ಟದ ಪದವಿ ವಿದ್ಯಾರ್ಥಿನಿಯರಿಗೆ ಶ್ರೀ ರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇಲ್ಲಿ ಏರ್ಪಡಿಸಿದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ, ಚಾಂಪಿಯನ್ಶಿಪ್.ಪದವಿ ವಿದ್ಯಾರ್ಥಿಗಳಿಗೆ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ ರಾಷ್ಟ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸುವುದರೊಂದಿಗೆ ಚಾಂಪಿಯನ್ ಶಿಫ್.


ವಿಶ್ವ ಸಂಸ್ಕೃತಿ ಯೋಗ ಫೌಂಡೇಶನ್ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪದವಿಪೂರ್ವ ವಿದ್ಯಾರ್ಥಿನಿಯರಿಗೆ ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆರನೇ ಸ್ಥಾನದೊಂದಿಗೆ ಚಾಂಪಿಯನ್ ಶಿಫ್.ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಏರ್ಪಡಿಸಿದಅಂತರ್ ಕಾಲೇಜ್ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದಿರುತ್ತಾರೆ.ಇಷ್ಟಕ್ಕೆಲ್ಲ ಕಾರಣೀಭೂತರಾಗಿ ಜೀವನದ ತಿರುವನ್ನು ಬದಲಾಯಿಸಿದ ಶ್ರೀಯುತ ಮರಿಯಪ್ಪ ಗೌಡ ಸರ್ ಅವರನ್ನು ವಿಶೇಷವಾಗಿ ನೆನಪಿಸಿಕೊಳ್ಳುತ್ತಾರೆ ಪ್ರತೀಕ್ಷಾ ಶೆಟ್ಟಿ ಅವರು.ಮಾತ್ರವಲ್ಲ ಶ್ರೀ ಧರ್ಮಸ್ಥಳ ಮಜುನಾಥೇಶ್ವರ ವಿದ್ಯಾಸಂಸ್ಥೆ ಶಿಕ್ಷಣಕ್ಕೆ ಮತ್ತು ಯೋಗತುಂಬಾ ಸಹಕಾರ ನೀಡಿದೆ, ಎಂಬ ಅಭಿಮಾನದ ನುಡಿಗಳನ್ನಾಡುತ್ತಾರೆ ಪ್ರತೀಕ್ಷಾ ಶೆಟ್ಟಿಯವರು.

ಇತರ ಹವ್ಯಾಸಗಳು : ಕ್ರಾಫ್ಟ್ ತಯಾರಿ, ನೃತ್ಯ,ಕ್ರೀಡೆ,ಹಾಡುವುದು, ಇವರ ಇತರ ಹವ್ಯಾಸಗಳು. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲೂ, ವಿಠಲ ಹೆಬ್ಬಾರ್ ನಾವಳೆ ಮತ್ತು ವೆಂಕಟೇಶ್ ತುಳುಪುಲೆ ಸರ್ ಅವರಿಂದ ಯಕ್ಷಗಾನ ನಾಟ್ಯ ಅಭ್ಯಾಸ ಮಾಡಿ, ಪೌರಾನಿಕ ಪಾತ್ರಗಳಿಗೆ ಜೀವ ತುಂಬಿದವರು.ಮುಂದಿನ ದಿನಗಳಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಯೋಗ ಹೇಳಿ ಕೊಡುವ ಇರಾದೆಯನ್ನು ವ್ಯಕ್ತ ಪಡಿಸಿರುವ ಪ್ರತೀಕ್ಷಾ ಶೆಟ್ಟಿಯವರ ಉತ್ತಮಗುಣಕ್ಕೆ ನಾನು ಚಿರಋಣಿ.


ಇಷ್ಟೆಲ್ಲ ಸಾಧನೆ ಮಾಡಿದ ನನ್ನ ಪ್ರೀತಿಯ ವಿದ್ಯಾರ್ಥಿನಿ  ಎಲೆಮರೆಯ ಕಾಯಿಯಾಗಿದ್ದ ಪ್ರತೀಕ್ಷಾ ಶೆಟ್ಟಿ ಬಿ ಇವರನ್ನು ಗುರುತಿಸುವುದು ನನ್ನ ಆದ್ಯ ಕರ್ತವ್ಯ.ಒಂದು ದೀಪವು ಇತರ ದೀಪಗಳನ್ನು ಉರಿಸುವಂತೆ, ವಿದ್ಯೆ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಕೈಜೋಡಿಸುವುದರೊಂದಿಗೆ,ನನ್ನ ಶಿಷ್ಯೆಯನ್ನು ನಾನು ಗುರುತಿಸುವ ಪ್ರಯತ್ನ ಮಾಡಿದ್ದೇನೆ. ಮುಂದಿನ ಜೀವನ ಸುಖಕರವಾಗಿರಲಿ ಎಂಬ ಶುಭಹಾರೈಕೆಯೊಂದಿಗೆ, ಜ್ಞಾನದಾಯಿನಿಯ ಅನುಗ್ರಹ ಇರಲಿ ಎಂಬ ಹರಕೆ ನನ್ನದು.

Post a Comment

0 Comments