ಕೋರೋನ ಕಾರಣ ನಿಶ್ಚಲಗೊಂಡಿದ್ದ ಶೀ ಲೋನ್ಜ್ ಕೇಂದ್ರ ಕಾರ್ಯ ಚಟುವಟಿಕೆಗೆ ಎಣ್ಮಕಜೆ ಗ್ರಾ.ಪಂ.ನಿಂದ ಕ್ರಮ


ಪೆರ್ಲ: ಕೋರೊನ ಕಾರಣ ಕಳೆದ ಒಂದೂವರೆ ವರ್ಷಗಳಿಂದ ನಿಶ್ಚಲವಾಗಿದ್ದ ಪೆರ್ಲ ಪೇಟೆಯಲ್ಲಿನ " ಶೀ ಲೋನ್ಜ್ " ಕಟ್ಟಡವನ್ನು ಕಾರ್ಯ ಪ್ರವತ್ತಗೊಳಿಸುವ ಮೂಲಕ ಎಣ್ಮಕಜೆ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಮಾದರಿಯಾಗಿದೆ. ಜಿಲ್ಲೆಯಲ್ಲಿಯೇ ಅತೀ ವಿರಳವೆನಿಸಿದ ಈ ಮಹತ್ತರ ಪದ್ಧತಿಯು ನಗರಕ್ಕೆ ಆಗಮಿಸುವ ಮಹಿಳೆಯರ ವಿಶ್ರಾಂತಿ ಕೇಂದ್ರವಾಗಿ  (ವಿಶೇಷವಾಗಿ ಮಗುವಿಗೆ ಎದೆ ಹಾಲೂಣಿಸುವ ಮಾತೆಯಂದಿರಿಗೆ) ಫಲಪ್ರದವಾಗುವಂತೆ ರಾಜ್ಯದ ಗಡಿ ಪ್ರದೇಶವಾಗಿರುವ ಎಣ್ಮಕಜೆ ಪಂಚಾಯತ್ ನೇತೃತ್ವದಲ್ಲಿ ಪೆರ್ಲ ಪೇಟೆಯಲ್ಲಿ ಸಾಕಾರಗೊಳಿಸಲಾಗಿತ್ತು.ಈ ನಡುವೆ ಜಗತ್ತಿಗೆ ಬಾಧಿಸಿದ ಕೋರೊನ ನಿಗ್ರಹಕ್ಕಾಗಿ ಪಂಚಾಯತ್ ಸಮರೋಪಾದಿಯ ಕಾರ್ಯಗಳನ್ನು ಕೈಗೆತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಪೇಟೆ ವ್ಯಾಪ್ತಿಯಲ್ಲಿ ಜನ ಸಂದಣಿಗೆ ಕಡಿವಾಣವಿದ್ದ ಕಾರಣ ಇದರ ಕಾರ್ಯ ಚಟುವಟಿಕೆಯನ್ನು ಅಲ್ಪ ಕಾಲಕ್ಕೆ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಇದೀಗ ಪಂಚಾಯತ್ ಆಡಳಿತ ಸಮಿತಿಯು ಅಗತ್ಯ ಕ್ರಮಗಳನ್ನು ಕೈಗೊಂಡು ಸೀ ಲಾಂಚ್ ನ‌ ಕಾರ್ಯ ಪ್ರವೃತ್ತಿಗೆ ಗಮನ ಹರಿಸಿದ್ದು ಈ ಕಟ್ಟಡದೊಳಗೆ ಮಹಿಳೆಯರ  ಪ್ರಾಥಮಿಕ ಅಗತ್ಯಕ್ಕೆ ಬಳಸುವುದರೊಂದಿಗೆ ಶುಚಿತ್ವ ಕಾಪಾಡಬೇಕು.  ದಿನಂಪ್ರತಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕ  ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬಹುದು. 


ಪೇಟೆ ಅಭಿವೃದ್ದಿಗೆ ಅನುಸರಿಸಿ ಮುಂದೆ ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸಲು ಪಂಚಾಯತು ಆಡಳಿತ ಸಮಿತಿಯು ತೀರ್ಮಾನಿಸಿದೆ ಎಂದು ಗ್ರಾ.ಪಂ‌. ಅಧ್ಯಕ್ಷ ಸೋಮಶೇಖರ್ ಜೆ.ಎಸ್.ತಿಳಿಸಿದ್ದಾರೆ.


Add


Post a Comment

0 Comments