ಯು.ಎ.ಇ.: Air Chateau International ಸಂಸ್ಥೆಯ ಅತಿ ನೂತನವಾದ ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿದ ಹೆಲಿಕಾಪ್ಟರ್ ಸೇವಾ ಸಂಸ್ಥೆ " HELIPARK " ಲೋಕಾರ್ಪಣೆಗೊಂಡಿತು.
ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡು ಹಲವಾರು ಹೆಲಿಕಾಪ್ಟರ್ ಗಳು ಪಾರ್ಕ್ ಮಾಡಲು ಸಾಧ್ಯವಾಗುವಂತೆ ವಿಶಾಲವಾದ ಹೆಲಿಕಾಪ್ಟರ್ ನಿಲ್ದಾಣವನ್ನು ಹೊಂದಿರುವ ಈ ತಂಗುದಾಣವು UAEಯ ಎಲ್ಲ ನಗರಗಳು, ವ್ಯಾಪಾರ ಕೇಂದ್ರಗಳು, ಯಾತ್ರಾ ಕೇಂದ್ರಗಳು ಮತ್ತು ಇತರ ಸ್ಥಳಗಳಿಗೆ ಉತ್ತಮ ಸಂಪರ್ಕ ಒದಗಿಸುವ, ಅತ್ಯುತ್ತಮ ಗುಣಮಟ್ಟದ ಹೆಲಿಕಾಪ್ಟರ್ ಸೇವಾ ಸೌಲಭ್ಯವನ್ನು ಹೊಂದಿರುವ ಪರಿಸರದ ಏಕಮೇವ ಕೇಂದ್ರವಾಗಿ ಆರಂಭಗೊಂಡ ಹೆಲಿಕಾಪ್ಟರ್ ಕೇಂದ್ರವನ್ನು H H Sheikh Ahmed Bin Saeed Al Maktoum ರವರ ದಿವ್ಯ ಹಸ್ತದಿಂದ H.H.Sheikh Mohammed Bin Rashid Aerospace Hub ಸಹಭಾಗಿತ್ವದಲ್ಲಿ ನೆರೆವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು:
Mr Khalifa Al Zaffin , (Executive Chairman of Dubai Aviation City Corporation) , Mr Tahnoon Saif ( CEO of Mohammed Bin Rashid Aerospace Hub) , Dr B K Yusuf ( Executive Chairman of Air Chateau International ), Dr Samir Yusuf BK ( Chairman & Founder Of Air Chateau International ) , Mr Shilton Tony Irudayaraj , (Co – Founder of Air Chateau International), Mr Mojmir Bocek ( Partner of Air Chateau International ) ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
Dr Kaup Mohammed (Gen Secretory-BCF , ( Mr M E Moolur-Vice President-BCF) Mr Abdul Latif Mulky (Vice President, ಬಿಸಿಫ್) ಮೊದಲಾದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎರಡು ಹಂತದ ಕಾಮಗಾರಿ:
Dubai South VIP Terminal ಗೆ ತಾಗಿ ಕೊಂಡು ಸುಮಾರು 42, 800 ಚದರ ಮೀಟರ್ ವಿಸ್ತಾರವಾಗಿ ಹರಡಿದ ಈ ಸಂಸ್ಥೆಯ ಮುಖ್ಯ ಕಾರ್ಯಾಗಾರದ ಕಾಮಗಾರಿಯು ಎರಡು ಹಂತದಲ್ಲಿ ನಡೆಯುತ್ತಲಿದ್ದು ಹಂತದ ಕಾಮಗಾರಿ ಬಹು ಬೇಗ ಪೂರ್ಣ ಗೊಳ್ಳಲಿದ್ದ, ಎರಡನೇ ಹಂತದ ಕಾಮಗಾರಿಯು 2023 ರಲ್ಲಿ ಪೂರ್ಣ ಗೊಳ್ಳಲಿದೆ.
ವಿಶೇಷ ಸೌಕರ್ಯ- ಸೌಲಭ್ಯಗಳು :
ಜಗತ್ತಿನ ಎಲ್ಲ ಭಾಗದಿಂದ ಬರುವ ಉದ್ಯಮಿಗಳು, ರಾಷ್ಟ್ರ ನಾಯಕರುಗಳು, ಇತರ UAE (UHNWI), VVIP ಗಳಿಗೆ ಅನುಕೂಲವಾಗುವಂತೆ ಇಲ್ಲಿ ಒಂದು ಸುಸಜ್ಜಿತ VIP Launge ಅನ್ನು ಕೂಡ ತೆರೆಯಲಾಗಿದೆ. ಅದರೊಂದಿಗೆ ಅವರು ಸವಾರಿ ಮಾಡುವ ಹೆಲಿಕಾಪ್ಟರ್ ಗಳ maitenance , Repair ಮತ್ತು Overhaul ( MRO ) ಸೇವಾ ಸೌಲಭ್ಯವೂ ಲಭ್ಯವಿದೆ. ಹಾಗೂ ಹಲವಾರು ಜಗತ್ಪ್ರಸಿದ್ಧ ವಿಮಾನ ನಿರ್ಮಾಣ ಸಂಸ್ಥೆಗಳ ಹೆಲಿಕಾಪ್ಟರ್ ಗಳ ಒಂದು ಸುಸಜ್ಜಿತವಾದ ಶೋರೂಮ್ ಅನ್ನು ಕೂಡ ಸ್ಥಾಪಿಸಲಾಗಿದೆ.
ಖಾಸಗಿ ಹೆಲಿಕಾಪ್ಟರ್ ಮಾಲಕರಿಗೆ ಪಾರ್ಕಿಂಗ್ ಫೆಸಿಲಿಟಿ, maintanence ಸಹಿತ ತಮ್ಮ ಹೆಲಿಕಾಪ್ಟರ್ ಸಂಭಂದಿತ ಎಲ್ಲ ಸೇವಾ ಸೌಲಭ್ಯವೂ ಇಲ್ಲಿ ಒದಗಿಸಲಾಗುವುದು.
Air Chateau Internatiional - HELIPARK ಗೆ ಇಂಧನ ಪೂರೈಕೆಯ ಅಧಿಕೃತ ಒಡಂಬಡಿಕೆಯನ್ನು ENOC ಸಂಸ್ಥೆಯೊಂದಿಗೆ ಮಾಡಿ ಕೊಳ್ಳಲಾಗಿದೆ.
"ಗಣ್ಯರ ಅಭಿಮತ"
Mr Tahnoon Saif : EXPO 2020 ಕಾರಣ ದುಬೈ ಗೆ ಬರುತ್ತಿರುವ ಟೂರಿಸ್ಟ್ ಗಳ ಸಂಖ್ಯೆ ಗಣನೀಯ ಪ್ರಮಾದಲ್ಲಿ ಅಧಿಕವಾಗುತ್ತಿದ್ದು, HELIPARK ನ ಸ್ಥಾಪನೆ ಸಕಾಲಿಕವಾಗಿದೆ ಎಂದರು.
Dr SameerYusuf BK: "ನಮ್ಮ ಸಂಸ್ಥೆಯ ಸೇವೆಯನ್ನು ಪಡೆಯಲು ಈಗಾಗಲೇ ಹಲವಾರು ಉದ್ಯಮಿಗಳು, ಕಂಪನಿಗಳು ಉತ್ಸುಕರಾಗಿದ್ದುಸೇವೆಯಲ್ಲಿಉತ್ಕ್ರಷ್ಟತೆ, ಸೇವಾ ತತ್ಪರತೆಯನ್ನು ಕಾಯ್ದು ಕೊಂಡು ಬರುವುದು ನಮ್ಮ ಮೊದಲ ಗುರಿ" ಎಂದರು.
Mr Irudayaraaj : "ನಮ್ಮ ಮೊದಲ ಹಂತದ ಕಾಮಗಾರಿ ಪೂರ್ತಿಯಾದ ನಂತರ ಎರಡನೇ ಹಂತದ ಕೆಲಸ ಪ್ರಾರಂಭ ಮಾಡುವುದರೊಂದಿಗೆ, ನಮ್ಮ ಕಾರ್ಯ ಕ್ಷೇತ್ರವು ವಿಸ್ತರಿಸಲಿದ್ದು UAE ಗೆ ಆಗಮಿಸುವ ಟೂರಿಸ್ಟ್ ಗಳಿಗೆ UAEಯ ಸುಂದರ ಸ್ಕೈ ಲೈನ್ ವ್ಯೂ ಒದಗಿಸುವಂತಹ Heli -Service ಯೋಜನೆಯನ್ನೂ ಸ್ಥಾಪಿಸಲಾಗುವುದು" ಎಂದರು.

0 Comments