ಪುತ್ತೂರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ವತಿಯಿಂದ 2021 ಡಿಸೆಂಬರ್ 18 ರಂದು ಶ್ರವಣಬೆಳಗೊಳದ ಜೈನಮಠದಲ್ಲಿ ನಡೆಯಲಿರುವ 12ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಪುತ್ತೂರಿನ ಅಂತರಾಷ್ಟ್ರೀಯ ಚಿತ್ರಕಲಾವಿದ ರಾಮಕೃಷ್ಣ ಸವಣೂರು ಅವರಿಗೆ ಕರ್ನಾಟಕರತ್ನ ಗೌರವ ಪ್ರಶಸ್ತಿ ಪ್ರದಾನ ಜರಗಲಿದೆ.
ಮೂಲತಃ ಕಾಸರಗೋಡು ಜಿಲ್ಲೆಯ ಪೆರಡಾಲದ ಸುಬ್ಬ -ಲಕ್ಷ್ಮಿ ದಂಪತಿಗಳ ಪುತ್ರನಾದ ಇವರು ಟೈಲರಿಂಗ್ ವೃತ್ತಿ ನಡುವೆ ಚಿತ್ರ ಕಲಾವಿದನಾಗಿ ಪ್ರವೃತ್ತಿ ನಿರತರಾದವರು.
ಡಿಪೈನ್ ಆರ್ಟ್ಸ್ ಕರಗತ ಮಾಡಿಕೊಂಡ ಇವರು ಬಳಿಕದ ದಿನಗಳಲ್ಲಿ ಚಿತ್ರ ಕಲೆಯನ್ನೆ ಜೀವಾಳವನ್ನಾಗಿಸಿದವರು. ಸಿಮೆಂಟ್, ಫೈಬರ್, ಆರ್ಟ್ ವರ್ಕ್ ಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ಕೊಲ್ಕತ್ತ, ನಾಗಲ್ಯಾಂಡ್, ಮೇಘಾಲಯ,ನೇಪಾಳ,ರಾಜಸ್ತಾನ್,ಜೋಧಪುರ್ ಮೊದಲಾದೆಡೆ ತನ್ನ ಕಲಾ ಚಾತುರ್ಯವನ್ನು ಪ್ರದರ್ಶಿಸಿದ್ದಾರೆ. ಊರಿಗೆ ಮರಳಿದ ಇವರು ಕಾಣಿಯೂರು ಪ್ರಗತಿ ಶಾಲೆಯಲ್ಲಿ ಚಿತ್ರ ಕಲಾ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರು. ಈ ನಡುವೆ ಸವಣೂರಿನಲ್ಲಿ ವರುಣ್ ಆರ್ಟ್ ಗ್ಯಾಲರಿ ಎಂಬ ಸ್ವಂತ ಚಿತ್ರಕಲಾ ಸಂಸ್ಥೆ ಸ್ಥಾಪಿಸಿದರು. ಸಾಹಿತ್ಯ ಪ್ರೋತ್ಸಾಹಕರಾದ ಇವರು ಸಂಘಟನಾತ್ಮಕ ಕೆಲಸ ಕಾರ್ಯಗಳ ನಡುವೆ ಸವಣೂರಿನಲ್ಲಿ ಎರಡು ಬಾರಿ ಅಂತರ್ ಜಿಲ್ಲಾ ಮಟ್ಟದ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಧಕರಿಗೆ ಸನ್ಮಾನ, ಪ್ರತಿಭಾ ಪ್ರೋತ್ಸಾಹ ನೀಡಿದವರಾಗಿದ್ದಾರೆ. ವಿವಿದೆಡೆಯ ಕವಿ-ಕವಯತ್ರಿಯರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಇವರು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲೂ ಸಾಹಿತ್ಯ ಸಂಘಟನೆ ನಡೆಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿರುವ ರಾಮಕೃಷ್ಣ ಸವಣೂರು ಅವರ ಸಮಗ್ರ ಸಾಧನೆಯನ್ನು ಗುರುತಿಸಿ " ಕರ್ನಾಟಕ ಯುವ ರತ್ನ" ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಬಂಧಪಟ್ಡವರು ತಿಳಿಸಿದ್ದಾರೆ
ವಿಶೇಷ ಚಾನೆಲ್ ಗೆ ಸುದ್ದಿ ಹಾಗೂ ಜಾಹೀರಾತು ನೀಡಲು ವಿಶೇಷ ಚಾನೆಲ್ ಡಿಜಿಟಲ್ ಮೀಡಿಯಾ +919895769288 ಗೆ ಸಂಪರ್ಕಿಸಿ .
ಆರ್ಥಿಕ ಸಹಕಾರಕ್ಕೆ ಗೂಗಲ್ ಫೇ ನಂ; +919895769288

0 Comments