ಮಂಗಲ್ಪಾಡಿಯಲ್ಲಿ ನೇಮೋತ್ಸವ ಕಳೆದು ಎರಡನೇ ದಿನಕ್ಕೆ ಗಂಧ ಪ್ರಸಾಧದ ಎಲೆಯಲ್ಲಿ ಮೂಡಿ ಬಂತು ತ್ರಿಶೂಲಾಕೃತಿಯ ಅನುಗ್ರಹ ವಿಸ್ಮಯ


ಉಪ್ಪಳ: ತುಳುನಾಡಿನ ದೈವಗಳು ನಂಬಿದವರನ್ನು ಯಾವತ್ತು ಕೈ ಬಿಡುವುದಿಲ್ಲ ಎಂಬ ದೈವಿಕ ನಂಬಿಕೆಗೆ ಇಂಬು ನೀಡುವ ರೀತಿಯಲ್ಲಿ ಗಂಧ ಪ್ರಸಾದ ಎಲೆಯ ಮಧ್ಯದಲ್ಲಿ ದೈವದ ತ್ರಿಶೂಲಾಕೃತಿ ಕಾಣುವ ಮೂಲಕ  ಆಶ್ಚರ್ಯ ಎನಿಸಿದರೂ ಸತ್ಯ ಎನ್ನುವಂತಹ ಘಟನೆಯೊಂದು ಮಂಗಲ್ಪಾಡಿ ಸಮೀಪದ ಅಡ್ಕ ಎಂಬಲ್ಲಿ ನಡೆದಿದೆ. 


ಘಟನೆಯ ವಿವರ:
ಉಪ್ಪಳ ಸಮೀಪದ ಮಂಗಲ್ಪಾಡಿಯ ಚೌಡಿ ಚಾಮುಂಡಿಶ್ವರೀ ಕ್ಷೇತ್ರದಲ್ಲಿ ಮೊನ್ನೆ ಡಿ.26ರಂದು ಶ್ರೀಚಾಮುಂಡಿ ಮತ್ತು ಗುಳಿಗ ದೈವದ ನೇಮೋತ್ಸವವು ಕ್ಷೇತ್ರದ ವಿಜಯ ಪಂಡಿತ್ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು. 


ಶ್ರೀದೈವಗಳ ಸೇವೆಯನ್ನು ಬಹಳ ವೈಭವಯುತವಾಗಿ ನಡೆಸಿದುದಲ್ಲದೆ ಊರ ಪರವೂರ ಭಕ್ತ ಜನತೆಗೆ ದೈವಗಳಿಂದ ಅನುಗ್ರಹ ಪ್ರಸಾದವನ್ನು ಕೊಡಿಸಲಾಗಿತ್ತು. ಇದರಂತೆ ಅಡ್ಕ ಎಂಬಲ್ಲಿರುವ ಲತೀಶ್ ಎಂಬವರು ಸಂಸಾರ ಸಮೇತರಾಗಿ ಶ್ರೀ ಸನ್ನಿಧಿಗೆ ಆಗಮಿಸಿ ಪ್ರಾರ್ಥಿಸಿ ಶ್ರಿದೈವಗಳ ಕೈಯಿಂದ ಪ್ರಸಾದ ಸ್ವೀಕರಿಸಿದ್ದರು. 


ಬಹಳ ಭಕ್ತಿಪೂರ್ವಕವಾಗಿ ಸ್ವೀಕರಿಸಿದ ಪ್ರಸಾದವನ್ನು ತಮ್ಮ ಮನೆಗೆ ಕೊಂಡೋಗಿ ದೇವರ ಕೋಣೆಯಲ್ಲಿರಿಸಿ ಬೆಳಿಗ್ಗೆ ಹಾಗೂ ಸಂಜೆ ಅದನ್ನು ಧರಿಸುತ್ತಿದ್ದರು. ಹೀಗಿರಲು ಮಂಗಳವಾರ ಸಂಜೆ ದಿನ ಮನೆಯ ಯಜಮಾನನ ಮಗ ಮಿಂದು ಶುಚೀರ್ಭೂತನಾಗಿ ಶ್ರೀದೈವದ ಪ್ರಸಾದ ಸ್ವೀಕರಿಸಲು ಅದನ್ನು ತೆಗೆದಾಗ ಅಲ್ಲೊಂದು ಅಚ್ಚರಿ ಮೂಡಿಸಿತು. ಸಾಕ್ಷತ್ ದೈವದ ಆಯುಧವಾದ ತ್ರಿಶೂಲಾಕೃತಿಯೊಂದು ಗಂಧ ಪ್ರಸಾದದ ಎಲೆಯಲ್ಲಿ ಆಕಸ್ಮಿಕವಾಗಿ ಮೂಡಿರುವುದು ಕಂಡು ಬಂದಿತ್ತು.


ಇದರಿಂದ ಆಶ್ಚರ್ಯ ಚಕಿತರಾದ ಅವರು ಕ್ಷೇತ್ರ ಸಂಬಂಧಪಟ್ಟವರನ್ನು ಸಂಪರ್ಕಿಸಿದ್ದು ಈ ಬಗ್ಗೆ ನಡೆಸಿದ ಚಿಂತನೆಯ ಪರಾಮರ್ಶೆಯಲ್ಲಿ ಭಕ್ತರೋರ್ವರ ಕೈಯಲ್ಲಿ ಇದು ಗೋಚರಿಸಿರುವುದು ನೇಮೋತ್ಸವದ ಸಂತುಷ್ಠತೆಯಿಂದ ಎಂದು ಕಂಡು ಬಂದಿದೆ. ಭಕ್ತರ ನಿಷ್ಕಾಮ ಭಕ್ತಿಗೆ ತುಳುನಾಡಿನ ದೈವಗಳು ಒಲಿಯುತ್ತದೆ ಮಾತ್ರವಲ್ಲದೆ  ಇಂತಹ   ದೃಷ್ಟಾಂತಗಳು ಗೋಚರಿಸುತ್ತದೆ ಎಂಬುದು ಹಗಲಿನಷ್ಟೆ ಸತ್ಯದ ವಿಚಾರ ಎಂಬುದು ಇದರಿಂದ ಪ್ರತಿಯೊಬ್ಬ ದೈವ ವಿಶ್ವಾಸಿಗಳು ಮನವರಿಕೆ ಮಾಡಿಕೊಳ್ಳಬಹುದಾಗಿದೆ.


                               ಜಾಹೀರಾತು


Post a Comment

0 Comments