ಬಂಟ ಮನೆತನದ ಕುಡಿ ಮನೋಜ್ ಶೆಟ್ಟಿ ಪಡುಬಿದ್ರೆಗೆ "ಮಿಸ್ಟರ್ ಯುಎಇ" ಅಂತರಾಷ್ಟ್ರೀಯ ಕೀರಿಟ

 ಯುಎಇ: ತುಳುನಾಡಿನ ಬಂಟ ಮನೆತನದ ಕುಡಿ ಮನೋಜ್ ಶೆಟ್ಟಿ ಪಡುಬಿದ್ರೆಗೆ ಗಲ್ಫ್ ರಾಷ್ಟ್ರದಲ್ಲಿ ನಡೆದ 2021- 22ನೇ ವರ್ಷದ "ಅಂತರಾಷ್ಟ್ರೀಯ ಮಿಸ್ಟರ್ ಯುಎಇ" ಕೀರಿಟ ಲಭಿಸಿದೆ. 

2021 ಡಿಸೆಂಬರ್ 11ರಂದು ದುಬೈನ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಬೀಯಿಂಗ್ ಮುಸ್ಕಾನ್ ಸಂಸ್ಥಾಪಕಿ, ಮೀನಾ ಅಸ್ರಾಣಿ ಅವರು  "ಯುಎಇ ಇಂಟರ್‌ನ್ಯಾಶನಲ್ 2021" ಪ್ರಶಸ್ತಿ ಪ್ರದಾನಗೈದರು.

ಮಾಡೆಲ್ , ಕ್ರೀಡಾಪಟು, ಫ್ಯಾಷನ್ ಟ್ರೆಂಡ್‌ಸೆಟರ್ ಮತ್ತು ನಟರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾ ಸಾಧಕ  ಮನೋಜ್ ಶೆಟ್ಟಿ ಅವರು ಈ ಬಾರಿಯ ಮಿಸ್ಟರ್ UAE ಇಂಟರ್ನ್ಯಾಷನಲ್  ಪ್ರಶಸ್ತಿಯನ್ನು ಗೆದ್ದಿರುವುದು ತುಳುನಾಡ ಜನತೆಗೆ ಅಭಿಮಾನ ಮೂಡಿಸಿದೆ.  

ವಿವಿಧ ರಾಷ್ಟ್ರಗಳಿಂದ ಆಗಮಿಸಿದ "ಮಿಸ್ಟರ್ ಯುಎಇ" ಸ್ಪರ್ಧಾರ್ಥಿಗಳಲ್ಲಿ ಮನುಷ್ಯನ ಎಲ್ಲಾ ಗುಣಗಳನ್ನು ಪರೀಕ್ಷಿಸಿ ಮೌಲ್ಯ ಮಾಪನ ಮಾಡಿ ಮಿಸ್ಟರ್ ಯುಎಇ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.  ಮನೋಜ್ ಶೆಟ್ಟಿ ಅವರು ಎಲ್ಲಾ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿ ಬಹು ಪ್ರತಿಭೆಯನ್ನು ಪ್ರದರ್ಶಿಸಿದ ಕಾರಣ   ಮಿಸ್ಟರ್ ಯುಎಇ ಇಂಟರ್ನ್ಯಾಷನಲ್ 2021 ಪ್ರಶಸ್ತಿಯನ್ನು ಗೆದ್ದರು.ಫ್ಯಾಷನ್ ಮತ್ತು ಮಾಡೆಲ್ ರಂಗದ  ಹೆಸರಾಂತ ತೀರ್ಪುಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತರನ್ನು ಆಯ್ಕೆ ಮಾಡಿದ್ದರು.

ಮಿಸ್ಟರ್ ಯುಎಇ ವಿಡಿಯೋ ಇಲ್ಲಿದೆ ವೀಕ್ಷಿಸಿ...
ಈ ಸಂದರ್ಭದಲ್ಲಿ ನೆರೆದ  ಹಲವಾರು ಪ್ರಸಿದ್ಧ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಮೂಲತಃ  ಮಂಗಳೂರಿನ ಶಾರದಾ ಶೆಟ್ಟಿ ಮತ್ತು ಪಡುಬಿದ್ರಿ ರಮೇಶ್ ಶೆಟ್ಟಿಯವರ ಪುತ್ರನಾದ ಮನೋಜ್ ಶೆಟ್ಟಿ ಪೇಟೆಮನೆ ಪಟ್ಲೇರ್ ಸಂಜೀವ ಶೆಟ್ಟಿಯವರ ಮೊಮ್ಮಗರಾಗಿದ್ದಾರೆ. 


ಕಳೆದ 24 ವರ್ಷಗಳಿಂದ ಅನಿವಾಸಿ ಭಾರತೀಯರಾಗಿ ದುಬೈಯ ಮಲ್ಟಿನೇಶನ್ ಕಂಪೆನಿಯೊಂದರ ಬಿಸಿನೆಸ್ ಡೆವಲಪರ್ ಆಗಿ ಉದ್ಯೋಗ ನಿರತರಾಗಿರುವ ಮನೋಜ್ ಶೆಟ್ಟಿ ದೇಹ ದಾರ್ಢ್ಯತೆ,ಫ್ಯಾಷನ್ ರಂಗದ ಬಗ್ಗೆ ಅಭಿರುಚಿ ಬೆಳೆಸಿಕೊಂಡ ಸಾಧಕ.

ಅಥ್ಲೀಟ್ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಮನೋಜ್ ಶೆಟ್ಟಿ ಈ ಹಿಂದೆ 2013ರಲ್ಲಿ "ಮಿಸ್ಟರ್ ದುಬಾಯಿ"  ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿಕೊಂಡಿದ್ದರು. ಇದೀಗ ಏಳೆಂಟು ವರ್ಷಗಳ ಬಳಿಕ ಮತ್ತೆ ಸ್ಪರ್ಧೆಯಲ್ಲಿ ಪಾಲ್ಗೊಂಡು ವಯಸ್ಸು ಪ್ರತಿಭಾ ಸಾಧನೆಗೆ ಬಾಧಕವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪಾಶ್ಚತ್ಯ ಫ್ಯಾಶನ್ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದ ಇವರು ಭಾರತೀಯ ಸಂಸ್ಕೃತಿಯ ಫ್ಯಾಷನ್ ನ್ನು ಟ್ರೆಂಡ್ ಸೆಟರ್ ಆಗಿ ಜಗತ್ತಿಗೆ ಪರಿಚಯಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ.

ಸೋಲೊ ಬ್ಯಾಕ್ ಪ್ರಾಕ್ಟ್ರ್ ಟ್ರಾವಲರ್ ಆಗಿ ವರ್ಷಂಪ್ರತಿ ಹಿಮಾಲಯ, ಋಷಿಕೇಶದಂತಹ ಗಿರಿಶೃಂಗ ಪ್ರದೇಶಗಳನ್ನು ಸಂದರ್ಶಿಸುವ ಹವ್ಯಾಸ ಇರಿಸಿಕೊಂಡಿರುವ ಮನೋಜ್ ಶೆಟ್ಟಿ ಕೊಲ್ಲಿ ರಾಷ್ಟ್ರದಲ್ಲಿದ್ದರೂ ಅಪ್ಪಟ ತುಳುನಾಡ ಸಂಸ್ಕೃತಿ ಆರಾಧಕರಾಗಿದ್ದಾರೆ. ತನ್ನ ತಂದೆ ತಾಯಿಯರ ಹುಟ್ಟುಹಬ್ಬ,ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ತಾಯ್ನಾಡಿನ ಸುರತ್ಕಲ್ ನ ವೃದ್ಧ ಸದನಗಳಲ್ಲಿ ಏರ್ಪಡಿಸುವುದಲ್ಲದೆ ತನ್ನ ಹಾಗೂ ಹೆಂಡತಿ, ಮಕ್ಕಳ ಹುಟ್ಟುಹಬ್ಬಗಳನ್ನು  ಕರ್ನಾಟಕದ ಅನಾಥ ಮಕ್ಕಳ ಜತೆ ನಡೆಸಿಕೊಂಡು ಮಾದರಿಯಾಗುತ್ತಿದ್ದಾರೆ. ಇಂತಹ ಕೆಲಸ ಕಾರ್ಯಗಳು ಪ್ರಚಾರಕ್ಕೆ ಬಳಸಿಕೊಳ್ಳುವುದಲ್ಲ ಬದಲಿಗೆ ಇಂತಹ ಕಾರ್ಯ ಚಟುವಟಿಕೆಗಳಿಂದ  ಇನ್ನೊಬ್ಬರಿಗೆ ಸ್ಪೂರ್ತಿಯಾಗಿ ಸಮಾಜದಲ್ಲಿ ಸಂಚಲನ ಉಂಟಾಗಬೇಕೆಂದು ಮನೋಜ್ ಶೆಟ್ಟಿ ಬಯಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೀಗ ಮಿಸ್ಟರ್ ಯುಎಇ ಯ ಬಳಿಕ ಬೇರೆ ಬೇರೆ ದೇಶದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕೆಂಬ ಬಯಕೆ ವ್ಯಕ್ತಪಡಿಸಿದ್ದಾರೆ. ಇವರು ಪತ್ನಿ ಕಲ್ಪನ ಶೆಟ್ಟಿ ಮಕ್ಕಳಾದ ಮನವ್ ,ಮನವಿಕ ಅವರೊಂದಿಗೆ ಯುಎಇಯಲ್ಲಿ ವಾಸಿಸುತ್ತಿದ್ದಾರೆ.
ತನ್ನ ಔದ್ಯೋಗಿಕ ನಿವೃತ್ತಿಯ ಬಳಿಕ ತಾಯ್ನಾಡಿಗೆ ಬಂದು ಕೃಷಿಕನಾಗಿ ಜೀವನ ಕಳೆಯಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ ಇವರ ಬಹು ಕಾಲದ ಕನಸಾಗಿ "ಗುರುಕುಲ" ಮಾದರಿಯಲ್ಲಿ ಉಚಿತ ಸಂಸ್ಕೃತ ಶಾಲೆಯೊಂದನ್ನು ತೆರೆಯಬೇಕೆಂಬ ಮಹಾದಾಸೆಯ ಜತೆಗೆ ಇದು ಮಕ್ಕಳಿಗೆ ನಮ್ಮ ವೇದ ಗ್ರಂಥಗಳನ್ನು ಓದಿ ತಿಳಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ದೂರದೃಷ್ಠಿತ್ವವನ್ನು ವಿಶೇಷ ಚಾನೆಲ್ ನೊಂದಿಗೆ ಹಂಚಿಕೊಂಡಿದ್ದಾರೆ.

ಏನೇ ಆಗಲಿ ತುಳುನಾಡಿನ ಪ್ರತಿಭೆಯೊಂದು ಕೊಲ್ಲಿ ರಾಷ್ಟ್ರದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಕೀರಿಟ ತೊಟ್ಟಿರುವುದು ತುಳುನಾಡ ಜನತೆಗೊಂದು ಅಭಿಮಾನ ಮೂಡಿಸಿದಂತಾಗಿದೆ "ಹ್ಯಾಟ್ಸ್ ಆಫ್ ಯೂ ಮನೋಜ್ ಶೆಟ್ಟಿ"ನಾವೆಲ್ಲರೂ ಅಭಿನಂದಿಸೋಣ, ಅಭಿಮಾನ ಪಡೋಣ.


https://www.instagram.com/invites/contact/?i=1cepo25dg20l1&utm_content=4t3lr5

ಮೇಲಿನ ಲಿಂಕ್ ಒತ್ತಿ ಇನ್ ಸ್ಟಾ ಗ್ರಾಂ ಮೂಲಕ ಮನೋಜ್ ಶೆಟ್ಟಿ ಅವರ ಸಾಧನೆಗಳನ್ನು ವೀಕ್ಷಿಸಬಹುದು.


Post a Comment

0 Comments