ಶಾರ್ಜಾದಲ್ಲಿ ತುಳುನಾಡಿಗರನ್ನು ಸೆಳೆಯುವ ಫ್ಯಾಮಿಲಿ ಫುಡ್ಸ್ ಸ್ವೀಟ್ಸ್ ಮಿಠಾಯಿ |ಉದ್ಯಮ ವಿಶೇಷ


                        ಉದ್ಯಮ_ವಿಶೇಷ

ಶಾರ್ಜಾ: ತುಳುನಾಡಿನ ಜನತೆ ಸಹಜವಾಗಿಯೇ  ಖಾದ್ಯ ಪ್ರಿಯರು. ರುಚಿರುಚಿಯಾದ ತಿಂಡಿ-  ತಿನಸುಗಳನ್ನು ತಿನ್ನುವುದು ಹಾಗೂ ತಯಾರಿಸುವುದು ಎಂದರೆ ತುಳುನಾಡಿಗರಿಗೆ ಬಲು ಅಚ್ಚುಮೆಚ್ಚು.  ಆದ್ದರಿಂದಲೇ  ತುಳುನಾಡಿನ ತಿನುಸುಗಳು ದೇಶ-ವಿದೇಶದಲ್ಲಿ ಜನ ಪ್ರೀತಿಯನ್ನು ಗಳಿಸಿಕೊಂಡಿದೆ. 

ಜಗತ್ತಿನ ಎಲ್ಲೆಡೆ ಹೋದರು ತುಳುನಾಡಿಗರು ತಮ್ಮ ನಾಡಿನ  ಸ್ವರುಚಿಗೆ ಮೊರೆ ಹೋಗುವುದನ್ನು ಕಾಣಬಹುದಾಗಿದೆ.  ಅಂತಹ ಜನತೆಯ ಸ್ವಾದಿಷ್ಟತೆಯನ್ನು ತಣಿಸಲು ಕೊಲ್ಲಿ ರಾಷ್ಟ್ರದ ಶಾರ್ಜಾದಲ್ಲಿ ತುಳುನಾಡಿಗರೇ ಸ್ವತಃ ಬೇಕರಿ ಉದ್ಯಮವೊಂದನ್ನು ತೆರೆಯುವ ಮೂಲಕ ಗಲ್ಫ್ ರಾಷ್ಟ್ರದ ತುಳುನಾಡಿಗರಿಗೆ ನಮ್ಮ ನಾಡಿನ ಸ್ವಾದಿಷ್ಟತೆಯ ಸವಿಯನ್ನು ಉಣಬಡಿಸುತ್ತಿದ್ದಾರೆ.

ಸ್ವತಃ ದಕ್ಷಿಣ ಕನ್ನಡ ಜಿಲ್ಲೆಯ  ತುಳುನಾಡಿಗರಿಂದಲೇ ನಿರ್ಮಿಸಿದ ಖಾದ್ಯ ತಿಂಡಿ ತಿನಿಸುಗಳ "ಫ್ಯಾಮಿಲಿ ಫುಡ್ಸ್ ಸ್ವೀಟ್ಸ್"ಎಂಬ ಬೃಹತ್ ಮಳಿಗೆಯೊಂದು ಇಲ್ಲಿ ಗಮನ ಸೆಳೆಯುತ್ತದೆ.  


ಶಾರ್ಜಾ ಅಲ್ ಮತಹ್  ಎಂಬಲ್ಲಿ ದುಬೈ ಲೈಬ್ರೆರಿ ಹಾಗೂ ಆಡ್ನೋಕ್  ಪೆಟ್ರೋಲ್ ಸ್ಟೇಷನ್ ಮುಂಭಾಗದಲ್ಲಿ ತೆರೆದುಕೊಂಡಿರುವ ಫ್ಯಾಮಿಲಿ ಫುಡ್ಸ್ ಅಂಡ್ ಸ್ವೀಟ್ಸ್ ಮಿಠಾಯಿ (confectionery) ಉದ್ಯಮ ಅನಿವಾಸಿ ತುಳು ನಾಡಿಗರಿಗೆ ಸ್ವಾದಿಷ್ಟಕರವಾದ ಬೇಕರಿ ತಿನಸುಗಳನ್ನು ಒದಗಿಸುವಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. 


ಮಂಗಳೂರು ಮೂಲದ ಯುಎಇ ಉದ್ಯಮಿಯೋರ್ವರು ಕಳೆದ 2020ರಲ್ಲಿ ಆರಂಭಿಸಿದ ಈ ಪ್ರತಿಷ್ಠಿತ ಉದ್ಯಮ ಸಂಸ್ಥೆಯಲ್ಲಿ ತುಳು ನಾಡಿಗರ ಅಚ್ಚುಮೆಚ್ಚಿನ ತಿಂಡಿಗಳನ್ನು ತಯಾರಿಸಲು ಸ್ವತಃ ತುಳುನಾಡಿನ ಬಾಣಸಿಗರನ್ನೇ ಕರೆದು ನಿರ್ಮಿಸುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ. 

ಬೇಕರಿ ಐಟಂ ಗಳಾದ ವಿವಿಧ ರೀತಿಯ ಕೇಕ್ ಗಳು, ಪಪ್ಸ್ ,ಚಕ್ಕುಲಿ ಕಾರೆಗಡ್ಡಿ,ರಸ್ಕ್,ತುಕುಡಿ, ಇನ್ನಿತರ ಕುರುಕಲು ತಿಂಡಿಗಳು,ಸ್ನಾಕ್ಸ್ ಐಟಂಗಳಾದ ಎಗ್ ಪಪ್ಸ್,ವೆಜ್ ಪಪ್ಸ್,ಚಿಕನ್ ಪಪ್ಸ್,ಫಿಝ,ರೋಲ್,ಟಿಕ್ಕಾ, ಬರ್ತ್ ಡೇ, ವಿವಾಹ,ಇನ್ನಿತರ ವಾರ್ಷಿಕೋತ್ಸವಕ್ಕೆ ಅಗತ್ಯವಿರುವ ವೈವಿಧ್ಯಮಯ ಕೇಕ್,ಪಾವು,ಮಂಗಳೂರು ಬನ್ಸ್, ಹೀಗೆ  ಊರಿನ ಎಲ್ಲಾ ಐಟಂಗಳು ಲಭಿಸುವ ಬೇಕರಿ ಇದೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 

ವಿಶೇಷ ದಿನಕ್ಕೆ ಅಗತ್ಯವಾದ ತುಳುನಾಡ ಅಡುಗೆ ಕ್ಯಾಟರಿಂಗ್ ವ್ಯವಸ್ಥೆಯು ಇಲ್ಲಿದೆ.ಹೀಗೆ ಮಕ್ಕಳನ್ನು ಮಹಿಳೆಯರನ್ನು ಮಹನೀಯರ ಜೊತೆ ಕೌಟುಂಬಿಕವಾಗಿ  ತನ್ನ ಬಳಿ  ಸೆಳೆಯುತ್ತದೆ. 


👆 ಮೇಲಿನ ವಿಡಿಯೋ ಲಿಂಕ್ ಒತ್ತಿ ಈ ಬೇಕರಿಯ ಬಗ್ಗೆ ಸಮಗ್ರ ವಿಷಯ ವೀಕ್ಷಿಸಿ.....


ವಿಶೇಷ ಚಾನೆಲ್ ನ ಈ ಉದ್ಯಮ_ವಿಶೇಷ ವೀಕ್ಷಿಸಿದ ನೀವು ಶಾರ್ಜದಲ್ಲಿ ಇದ್ದರೆ ಫ್ಯಾಮಿಲಿ ಪುಡ್ಸ್ ಸ್ವೀಟ್ಸ್ ಬೇಕರಿ ಉದ್ಯಮ ಸಂಸ್ಥೆಗೆ ಭೇಟಿ ನೀಡಿ...ತುಳುನಾಡಿನ ಕುಶಲೋಪರಿಯ ಜತೆಗೆ ಕುರುಕಲು, ಸ್ವಾದಮಯ ತಿಂಡಿ ತಿನಸುಗಳನ್ನು ಹಿತ ಮಿತ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.


Post a Comment

0 Comments