ದುಬಾಯಿಯಲ್ಲಿ ಐ.ಪಿ.ಎಫ್. ಯು.ಎ.ಇ. ಅನಿವಾಸಿ ಕನ್ನಡಿಗರ ವೇದಿಕೆಯ ರಥ ಸಪ್ತಮಿ ಯೋಗ ಶಿಬಿರ ಸಮಾರೋಪ


ಯುಎಇ : ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಇಂಡಿಯನ್ ಪೀಪಲ್ಸ್ ಫೋರಂ ನ ಆಶ್ರಯದಲ್ಲಿರುವ ಕರ್ನಾಟಕ ಕೌನ್ಸಿಲ್, ಅನಿವಾಸಿ ಕನ್ನಡಿಗರ ವೇದಿಕೆ 2022 ಫೆಬ್ರುವರಿ 17ನೇ ತಾರೀಕಿನಿಂದ 25ನೇ ತಾರೀಕಿನವರೆಗೆ ಹತ್ತು ದಿನಗಳ ಕಾಲ ಆಯೋಜಿಸಿದ್ದ ಉಚಿತ ಯೋಗ ತರಭೇತಿ ಶಿಬಿರ ಹಾಗೂ 26ನೇ ತಾರೀಕಿನಂದು ರಥ ಸಪ್ತಮಿ ಯೋಗ 108 ಸೂರ್ಯ ನಮಸ್ಕಾರಗಳು ಹಾಗೂ ಸಮಾರೋಪ ಸಮಾರಂಭ ದುಬಾಯಿ ಕರಾಮದಲ್ಲಿರುವ ಆಟ್ರಿಯಂ ಹೋಟೆಲ್ ಸಭಾಂಗಣದಲ್ಲಿ ಐ. ಪಿ. ಎಫ್ ಕೇಂದ್ರಿಯ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.


ಬೆಂಗಳೂರಿನಿಂದ ಆಗಮಿಸಿದ್ದ ಯೋಗ ಗುರು, ಗುರುಮಾ ಡಾ ಭಾಗೀರಥಿ ಕನ್ನಡತಿ ಇವರು ಯೋಗ 
ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಕೊನೆಯ ದಿನ ಬೆಳಿಗ್ಗೆ 10 ಗಂಟೆಯಿಂದ ಪ್ರಥಮ ಹಂತದಲ್ಲಿ ರಥ ಸಪ್ಥಮಿ ಯೋಗದ 108 ಸೂರ್ಯ ನಮಸ್ಕಾರಗಳನ್ನು ಶಿಸ್ತುಬದ್ಧವಾಗಿ ನಡೆಸಲಾಯಿತು. 

ಯೋಗ ಶಿಬಿರದ ಜವಬ್ಧಾರಿಯನ್ನು ವಹಿಸಿದ್ದ ಶ್ರೀ ನವೀನ್ ಭಾರದ್ವಜ್ ದ್ವಿತಿಯ ಹಂತದ ಸಮಾರೋಪ ಸಮಾರಂಭದ ಕಾರ್ಯಕ್ರಮ ನಿರೂಪಕರಾಗಿ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಶ್ರೀಮತಿ ಮಾಧವೀ ಪ್ರಸಾದ್ ರವರ ಪ್ರಾರ್ಥನೆ, ಐ.ಪಿ.ಎಫ್. ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಬಿ. ಕೆ. ಗಣೇಶ್ ರೈ ಯವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. 

ಐ.ಪಿ.ಎಫ್. ನಡೆದುಬಂದ ಹಾದಿಯ ಸಾಕ್ಷ್ಯಚಿತ್ರ ಪ್ರದರ್ಶನ ವೀಕ್ಷಿಸಲಾಯಿತು. ಐ.ಪಿ.ಎಫ್. ಯು. ಎ. ಇ. ಉಪಾಧ್ಯಕ್ಷರಾದ ಶ್ರೀ ಸುಚೀತ್ ಕುಮಾರ್ ರವರು ಐ.ಪಿ.ಎಫ್. ಕಾರ್ಯಯೋಜನೆಗಳ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದರು. ಐ.ಪಿ.ಎಫ್. ಆಶ್ರಯದಲ್ಲಿ ಬಿಡುಗಡೆ ಗೊಳ್ಳುತ್ತಿರುವ "ದೃಷ್ಠಿ" ವಾರ್ತಾ ಸಂಚಿಕೆಯ ಬಗ್ಗೆ ಪೂರ್ಣ ವಿವರಗಳನ್ನು ಶ್ರೀ ಗಣೇಶ್ ರೈಯವರು ಸಭೆಯ ಮುಂದಿಟ್ಟರು.

ಐ.ಪಿ. ಎಫ್. ಕರ್ನಾಟಕ ಕೌನ್ಸಿಲ್, ಅನಿವಾಸಿ ಕನ್ನಡಿಗರ ವೇದಿಕೆ ಯ ಮುಖ್ಯ ಸಂಯೋಜಕರಾದ ಶ್ರೀ ಶಶಿಧರ್ ನಾಗರಾಜಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಐ.ಪಿ.ಎಫ್. ನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಮೋಹನ್ ನರಸಿಂಹಮೂರ್ತಿ, ಯೋಗ ಗುರು, ಗುರುಮಾ ಡಾ ಭಾಗೀರಥಿ ಕನ್ನಡತಿ, ಐ.ಪಿ.ಎಫ್. ಯು.ಎ.ಇ. ಉಪಾಧ್ಯಕ್ಷರಾದ ಶ್ರೀ ಸುಚೀತ್ ಕುಮಾರ್, ಐ.ಪಿ.ಎಫ್. ಯು.ಎ.ಇ. ಉಪ ಕಾರ್ಯದರ್ಶಿ ಶ್ರೀ ರಂಜೀತ್ ಕೊಡತ್ ಭಾಗಿಗಳಾಗಿದ್ದರು.


ಯೋಗ ಶಿಬಿರದ ಬಗ್ಗೆ ಶ್ರೀ ಮೋಹನ್ ನರಸಿಂಹ ಮೂರ್ತಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 
ಸಭಾಧ್ಯಕ್ಷ ಸ್ಥಾನದಿಂದ ಶ್ರೀ ಶಶಿಧರ್ ನಾಗರಾಜಪ್ಪ ಅನಿವಾಸಿ ಕನ್ನಡಿಗರ ವೇದಿಕೆಯ ಧ್ಯೇಯೊದ್ಧೇಶಗಳನ್ನು ವಿವರಿಸಿದರು.

ಶಿಬಿರದ ಬಗ್ಗೆ ತಮ್ಮ ಅನುಭವಗಳನ್ನು ಶ್ರೀ ಉಮಾಕಾಂತ್, ಶ್ರೀ ಗಿರೀಶ್ ಕಲ್ಕುಂಡ್, ಶ್ರೀಮತಿ ದೀಪಿಕಾ ಭಟ್ ಸಭೆಯಲ್ಲಿ ಹಂಚಿಕೊಂಡರು.


ಯೋಗ ಗುರು, ಗುರುಮಾ ಡಾ ಭಾಗೀರಥಿ ಕನ್ನಡತಿ ಇವರನ್ನು ಐ.ಪಿ.ಎಫ್. ವತಿಯಿಂದ ಗೌರವ 
ಪೂರ್ವಕವಾಗಿ ಸನ್ಮಾನಿಸಲಾಯಿತು. 


ಶ್ರೀ ನಾಗರಾಜ್ ರಾವ್ ಸನ್ಮಾನಿತರ ಬಗ್ಗೆ ಪೂರ್ಣ 
ಪರಿಚಯವನ್ನು ನೀಡಿದರು. ಸನ್ಮಾನ ಪ್ರಕ್ರಿಯೆಯಲ್ಲಿ ವೇದಿಕೆಯ ಮೇಲಿದ್ದ ಗಣ್ಯ ಅತಿಥಿಗಳು ಹಾಗೂ ಶ್ರೀ ಆನಂದ್ ಬೈಲೂರು, ಶ್ರೀಮತಿ ರೂಪಾ ಶಶಿಧರ್ ಮತ್ತು ಮಹಿಳಾ ಸದಸ್ಯರುಗಳು ಭಾಗವಹಿಸಿದ್ಧರು. ಸನ್ಮಾನಕ್ಕೆ ಉತ್ತರವಾಗಿ ಡಾ. ಭಾಗೀರಥಿ ಕನ್ನಡತಿಯವರು ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ಶ್ರೀ ಶಶಿಧರ್ ಮುಂಡರಗಿಯವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು. 


ಜಾಹೀರಾತು


Post a Comment

0 Comments