ಮುರತ್ತಣೆಯಲ್ಲಿ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ 15ನೇ ವಾರ್ಷಿಕೋತ್ಸವಚಾರಣೆ -ಸನ್ಮಾನ- ನಾಟಕ ಪ್ರದರ್ಶನ


ಮಂಜೇಶ್ವರ : ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಮುರತ್ತಣೆ ಇದರ 15ನೇ ವಾರ್ಷಿಕೋತ್ಸವವು  ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು. ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮೀಂಜ ಗ್ರಾ.ಪಂ.ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ  ಅಧ್ಯಕ್ಷತೆ ವಹಿಸಿದ್ದರು. ವರ್ಕಾಡಿ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಾಜ್ ಕುಮಾರ್ ಮುಟ್ಲ, ಸಾಹಿತಿ,ಶಿಕ್ಷಕ ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ್ ಸುಲಾಯ ಒಡ್ಬಂಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಲಬ್ಬಿನ ಗೌರವಾಧ್ಯಕ್ಷರಾದ ಕೃಷ್ಣ ಮೇಸ್ತ್ರಿ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ದಿನಕರ ಕೋಟ್ಯಾನ್ ಸುಳ್ಯಮೆ ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದಂಗವಾಗಿ ನಡೆದ ಸ್ಪರ್ಧಾ ಕಾರ್ಯಕ್ರಮದ ಬಹುಮಾನ ವಿತರಣೆಯನ್ನು ಆಶೋಕ್ ಬಟ್ಟಿಪದವು ನಿರ್ವಹಿಸಿದರು.ಕ್ಲಬ್ಬಿನ ಪ್ರಗತಿಗಾಗಿ ದುಡಿದ ಮಾಜಿ ಅಧ್ಯಕ್ಷ ಗಂಗು ಮೊರತ್ತಣೆ ಅವರನ್ನು ಅಭಿನಂದಿಸಲಾಯಿತು. ಮನ್ವಿತಾ ಮದಕ ಪ್ರಾರ್ಥನೆಗೈದರು. ಶಶಾಂಕ್ ಅರಿಂಗುಲ ವರದಿ ಮಂಡಿಸಿದರು. ರಾಜೇಶ್ ಮದಕ ಸ್ವಾಗತಿಸಿ ಪ್ರದೀಪ್ ಅರಿಂಗುಲ ವಂದಿಸಿದರು. ಪತ್ರಕರ್ತ ಜಯ ಮಣಿಯಂಪಾರೆ 
ಕಾರ್ಯಕ್ರಮ ನಿರೂಪಣೆಗೈದರು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಕ್ಕಳ ನೃತ್ಯ ಕಾರ್ಯಕ್ರಮ ಹಾಗೂ  ಅಮ್ಮ ಕಲಾವಿದೆರ್ ಕುಡ್ಲ ಅವರಿಂದ "ಮದಿಮೆದ ದುಂಬುನಾನಿ" ಎಂಬ ನಾಟಕ ಪ್ರದರ್ಶನಗೊಂಡು ಜನಮನ ಸೆಳೆಯಿತು.

Post a Comment

0 Comments