ಯುಎಇ: ಕೆಸಿಎಫ್ ನಾಲ್ಕನೆ ಆವೃತ್ತಿಯ "ಪ್ರತಿಭೊತ್ಸವ- 22"ಕಾರ್ಯಕ್ರಮವು ದುಬೈ ಇಂಡಿಯನ್ ಅಕಾಡಮಿ ಸ್ಕೂಲ್ ನಲ್ಲಿ ಅದ್ದೂರಿಯಾಗಿ ಜರಗಿ ಸಮಾಪ್ತಿಯಾಯಿತು.
ಯು ಎ ಇಯ ಪ್ರತಿ ವರ್ಷ ನಡೆಸುವ ಜನಪ್ರೀಯ ಸ್ಪರ್ದೆ ಬೆಳಗ್ಗೆ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಫೈನಾನ್ಸಿಯಲ್ ಕಂಟ್ರೋಲರ್ ಹಮೀದ್ ಸಅದಿ ದುಆದೊಂದಿಗೆ ಆರಂಭಗೊಂಡಿತು.
ಸ್ಪರ್ಧಾ ವಿಜೇತರು: ಐದು ವಿವಿದ ವಲಯಗಳಿಂದ ಬಂದ ಸ್ಪರ್ದಾರ್ಥಿಗಳು ತಮ್ಮ ತಮ್ಮ ಗುಂಪಿನ ವಿಜಯಕ್ಕಾಗಿ ಜಿದ್ದಾಜಿದ್ದಿನ ಹೊರಾಟ ನಡೆಸಿದರು. ಕೂದಲೆಲೆಯ ಅಂತರದಿಂದ ಶಾರ್ಜ ಝೋನ್ ತನ್ನ ಚಾಂಪಿಯನ್ ಪಟ್ಟವನ್ನು ಸತತ ನಾಲ್ಕನೇ ಭಾರಿ ಉಳಿಸಿಕೊಂಡರು, ಅತಿಥೆಯ ದುಭೈ ಉತ್ತರ ವಲಯ ಎರಡನೆ ಸ್ಥಾನಕ್ಕೆರಿದ್ದು ಅಬುಧಾಬಿ ಮೂರನೇ ಸ್ಥಾನ ಗಿಟ್ಟಿಸಿದರೆ ಸಮೀಪದಲ್ಲೆ ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟ ದುಬೈ ದಕ್ಷಿಣ ಹಾಗು ಅಜ್ಮಾನ್ ಕಲಾ ಪ್ರೆಮಿಗಳಿಗೆ ಕಣ್ಮಣ ಸೆಳೆಯುವ ಪ್ರದರ್ಶನ ನೀಡಿದ್ದರು.
ಗಮನ ಸೆಳೆದ ಪ್ರತಿಭೋತ್ಸವ: ಪ್ರತಿಭೋತ್ಸವದ ಅಂಗವಾಗಿ ಮಹಿಳೆಯರಿಗೆ ಕಸದಿಂದ ರಸ ,ಸಿಹಿ ಹಾಗು ಖಾರ ಪದಾರ್ಥಗಳ ಪ್ರದರ್ಶನ ಸ್ಪರ್ದೆ ಏರ್ಪಡಿಸಿರುವುದು ವಿಶೇಷವಾಗಿತ್ತು.
ನಾಲ್ಕು ವೇದಿಕೆಗಳಲ್ಲಿ ನಡೆದ ಕಾರ್ಯಕ್ರಮದ ಕೊನೆಗೆ ಆವೇಶಕರವಾದ ಸಾಂಪ್ರದಾಯಿಕ ದಫ್,ಖವಾಲಿ,ಹಾಗು ಬುರ್ದಾ ಸ್ಪರ್ದೆಗಳು ಪ್ರೇಕ್ಷಕರು ಹಾಗೂ ಅತಿಥಿಗಳ ಮನಗೆಳ್ಳುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದ ಸಮಾರೊಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪದ್ಮಶ್ರಿ ಅಕ್ಷರ ಸಂತ ಹಾಜಬ್ಬರವರು ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ಸರಳ ಸ್ವಭಾವದ ಈ ಹಿರಿಯ ವ್ಯಕ್ತಿತ್ವವನ್ನು ಹತ್ತಿರದಿಂದ ಕಂಡ ಅನಿವಾಸಿ ಕನ್ನಡಿಗರ ಖುಷಿಗೆ ಪಾರವೆ ಇರಲಿಲ್ಲ.
ಸಮಾರೊಪ ಸಮಾರಂಭದಲ್ಲಿ ಮೂಸ ಹಾಜಿ ಬಸರ ರವರು ಸ್ವಾಗತಿಸಿದರು, ಕಾರ್ಯಕ್ರಮಕ್ಕಾಗಿ ವಿಶಿಷ್ಟ ಅತಿಥಿಗಳಾಗಿ ಆಗಮಿಸಿದ ಪದ್ಮಶ್ರೀ ಹರೆಕಳಹಾಜಬ್ಬ ರವರನ್ನು ಕೆ ಸಿ ಎಫ್ ಯುಎಇ ಸಮಿತಿ ನೆರೆದ ಜನೊಸ್ತಮ ಹಾಗೂ ಬೃಹತ್ ಅಭಿಮಾನಿ ಬಳಗ , ಗಣ್ಯರ ಸಮಕ್ಷಮದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು.
ಹಾಜಬ್ಬರವರ ಪದ್ಮಶ್ರೀ ಬಿರುದಿನ ನಂತರ ಅವರ ಪ್ರಥಮ ವಿದೇಶಯಾತ್ರೆಯನ್ನು ಕೆ ಸಿ ಎಫ್ ಯುಎಇ ಆಯೋಜಿಸಿತ್ತು, ನೆರೆದ ಜನೊಸ್ತಮ ಹಾಗು ಗಣ್ಯರನ್ನುಉದ್ದೆಶಿಸಿ ಮಾತನಾಡಿದ ಪದ್ಮಶ್ರೀ ಹಾಜಬ್ಬ ಅವರು ಕನ್ನಡಿಗರ ಪ್ರತಿಭೊತ್ಸವ ಸ್ಪರ್ಧಾಕಾರ್ಯಕ್ರಮವನ್ನು ಶ್ಲಾಘಿಸಿ ಪ್ರತಿಭೊತ್ಸವದ ಚಾಂಪಿಯನ್ ಟ್ರೊಪಿಯನ್ನು ಶಾರ್ಜ ವಲಯಕ್ಕೆ ವಿತರಿಸಿದರು.
"ನಮ್ಮ ಕನ್ನಡ ಕಲಿಕೆ ಕಾರ್ಯಕ್ರಮ ಉದ್ಘಾಟನೆ"
ಗಲ್ಫ್ ರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಮಕ್ಕಳಿಗೆ ಕನ್ನಡ ಮರೀಚಿಕೆಯಾಗುವ ಸನ್ನೀವೇಶದಲ್ಲಿ ಕೆ ಸಿ ಎಫ್ ಹಮ್ಮಿಕೊಂಡ ಕನ್ನಡ ಕಲಿಯುವ ವಿಷೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಕರ್ನಾಟಕ ಮುಸ್ಲಿಂ ಜಮಾತ್ ಪ್ರತಿನಿಧಿ ಮುಂಮ್ತಾಜ್ ಅಲಿ ಕ್ರಷ್ಣಾಪುರ ರವರು ಪದ್ಮಶ್ರಿ ಹಾಜಬ್ಬರವರ ಯುಎಇ ಪ್ರವಾಸದಲ್ಲಿ ಮಂಗಳೂರಿಂದಲೇ ಜತೆಗಿದ್ದು ಹಿಂದಿರುಗುವ ವರೆಗೂ ಸಹಕರಿಸಿದರು,
ವೇದಿಕೆಯಲ್ಲಿ ಅಸಯ್ಯದ್ ತ್ವಾಹ ಬಾಫಕಿ ತಂಙಳ್ ದುಆ ನೆರವೇರಿಸಿದರು, ಶಾರ್ಜ ಅಲ್ಖಾಸಿಮಿಯ್ಯ ವಿಶ್ವವಿದ್ಯಾಲಯದಲ್ಲಿ ಅರಬಿಕ್ ಬಾಷೆಯಲ್ಲಿ ಪ್ರಥಮ ಸ್ಥಾನಗಳಿಸಿದ ಅಹ್ಮದ್ ಮುಷ್ತಾಕ್ ಅವರನ್ನು ಸನ್ಮಾನಿಸಲಾಯಿತು ,ಗಣ್ಯ ಅತಿಥಿಗಳಾಗಿ ಬಂದ ಹಲವಾರು ಅನಿವಾಸಿ ಉದ್ಯಮಿಗಳು, ಶಿಕ್ಷಣ ತಜ್ಞರು ವೇದಿಕೆಯಲ್ಲಿ ಮಾತನಾಡಿದರು,
ಯು ಟಿ ಖಾದರ್ ಸಂದೇಶ: ಕಾರ್ಯಕ್ರಮದ ಅತಿಥಿಯಾಗಿ ಬರಬೇಕಿದ್ದ ಶಾಸಕ ಯು ಟಿ ಖಾದರ್ ರವರು ವಿದಾನ ಸೌದದಿಂದಲೇ ಕಾರ್ಯಕ್ರಮಕ್ಕೆ ವೀಡಿಯೊ ಕಾಲ್ ಮೂಲಕ ಶುಭಹಾರೈಸಿದರು
"ಅಬ್ದುಲ್ಲ ಮದುಮೂಲೆಯವರಿಗೆ ಅತ್ಯುತ್ತಮ ಶೈಕ್ಷಣಿಕ ಸಹಕಾರಿ ಪ್ರಶಸ್ತಿ ಪ್ರದಾನ"
ಕೆಸಿಎಫ್ ವತಿಯಿಂದ ಹಿರಿಯ ಆರ್ಥಿಕ ತಜ್ಞ ಹಾಗೂ ವಿದ್ಯಾಬ್ಯಾಸದ ಬಗ್ಗೆ ವಿಷೇಶ ಕಾಳಜಿ ವಹಿಸುವ ಅಬ್ದುಲ್ಲ ಮದುಮೂಲೆಯವರಿಗೆ ನೀಡಿ ಗೌರವಿಸಲಾಯಿತು, ಊರಿನ ವಿದ್ಯಾಭ್ಯಾಸ ಸಂಸ್ಥೆಗಳೊಂದಿಗಿರುವ ಸಂಬಂಧ ಹಾಗೂ ವರ್ಷಗಳಿಂದೀಚೆಗಿರುವ ಸೇವೆಯನ್ನು ಗುರುತಿಸಿ ಅವರನ್ನು ಬಾಫಕಿ ತಂಙಳ್ ಹಾಗೂ ಪದ್ಮಶ್ರೀ ಹಾಜಬ್ಬರ ಸಮಕ್ಷಮದಲ್ಲಿ ಗೌರವಿಸಲಾಯಿತು,
ವೇದಿಕೆಯಲ್ಲಿ ಶೈಕ್ ಸಲಾಹ್ ಹಸನ್ ಅಲ್ ಮದನಿ ದುಬೈ, ಡಾ ಕಾಪು ಮುಹಮ್ಮದ್ ಲಂಡನ್ ಅಮೇರಿಕನ್ ವಿದ್ಯಾಲಯ , ಡಾ ಯುಸುಫ್ ದುಬೈ ಬ್ಯಾರಿಸ್ ಕಲ್ಚರಲ್ ಫೊರಮ್ , ಎಮ್. ಇ ಮೂಲೂರ್ ಶಾರ್ಜ ಕನ್ನಡ ಸಂಘ , ಮುಹಮ್ಮದ್ ಅಲಿಉಚ್ಚಿಲ , ಶೆಕ್ ಮಕ್ದೂಮ್ , ರೊನಾಲ್ಡ್ ಮಾರ್ಟಿಸ್ ,ಅಶ್ರಫ್ ಮಾಂತೂರ್ ,ಅಶ್ರಫ್ ಹಾಜಿ ಅಡ್ಯಾರ್ , ಕೆದುಂಬಾಡಿ ಸಖಾಫಿ , ಲತೀಪ್ ತಿಂಗಳಾಡಿ ಅಲ್ ಮದಿನಾ ಗ್ರೂಪ್ ,ಇಕ್ಬಾಲ್ ಕಾಜೂರ್ , ಹಾಗು ಹಲವಾರು ಹಿರಿಯರು ಭಾಗವಹಿಸಿದರು,ಖಾದರ್ ಸಾಲೆತ್ತೂರ್ ವಂದಿಸಿದರು,
ಸ್ಪರ್ಧಾ ಕಾರ್ಯಕ್ರಮವನ್ನು ಹಕೀಂ ತುರ್ಕಳಿಕೆ ಹಾಗು ಕಬೀರ್ ಬಾಯಂಬಾಡಿ ನಿರ್ವಹಿಸಿದರು , ಸ್ಪರ್ದಾರ್ಥಿಗಳ ಜಡ್ಜ್ ಗಳ ನಿಯಂತ್ರಣ ವನ್ನು ಕೆ ಎಚ್ ಸಖಾಪಿ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದರು. ಪ್ರತ್ಯೇಕ ಪ್ರಶಸ್ತಿ ವಿತರಣಾ ವೇದಿಕೆಯಲ್ಲಿ ಸುಮಾರು ಎಂಬತ್ತಕ್ಕೂ ಮಿಕ್ಕ ಸ್ಪರ್ಧೆಗಳ ವಿಜಯಿಗಳಿಗೆ ನವಾಜ್ ಕೊಟೆಕಾರ್ ಸುಪರ್ದಿಯಲ್ಲಿ ಟ್ರೊಪಿ ವಿತರಿಸಲಾಯಿತು. ಹಾಫಿಲ್ ಸಯೀದ್ ಹಾಗು ರಿಯಾಜ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಊಟೊಪಹಾರಗಳ ತಂಪುಪಾನೀಯ ಚಹಾ ವ್ಯವಸ್ಥೆ ಮಾಡಲಾಗಿತ್ತು.
ಜಾಹೀರಾತು

0 Comments