ಯುಎಇ: ದುಬೈ ಯುಎಇ ತಂಡದ 9ನೇ ವರ್ಷದ ರಕ್ತದಾನ ಶಿಬಿರವು ದುಬೈಯ ಲತೀಫ ಆಸ್ಪತ್ರೆಯಲ್ಲಿ ನಡೆಯಿತು.
ದುಬೈ ಯ ಸಾಮಾಜಿಕ ರೂವಾರಿ ಬಾಲಕೃಷ್ಣ ಸಾಲ್ಯಾನ್ ಇವರ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ಹಿರಿಯ ಸದಸ್ಯರಾದ ಪ್ರಭಾಕರ ಶೆಟ್ಟಿ,ನೊವೆಲ್ ಅಲ್ಮೇಡಾ,ಸತೀಶ್ ಉಳ್ಳಾಲ್,ಅಜ್ಮಲ್ ದುಬೈ,ಆಶೋಕ್ ಬೈಲೂರು,ಪ್ರಮೀತ್, ರೀತು ಅಂಚನ್ ಪಾಲ್ಗೊಂಡರು.
ತಂಡದ ನೇತೃತ್ವದಲ್ಲಿ ಸುಮಾರು 70ಕ್ಕಿಂತಲೂ ಅಧಿಕ ರಕ್ತದಾನಿಗಳು ಈ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಕರ್ಮಭೂಮಿಯ ಋಣವನ್ನು ತೀರಿಸಿದ ಕೃತಾರ್ಥತೆ ಮೆರೆದರು.

0 Comments