ದುಬೈ: ಕನ್ನಡ ಚಿತ್ರದ ಚಿತ್ರಿಕರಣ ನಿಮಿತ್ತ ದುಬೈಗೆ ಆಗಮಿಸಿದ ತುಳು ಚಿತ್ರರಂಗದ ದಿಗ್ಗಜ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮತ್ತವರ ತಂಡ ಅಜ್ಮಾನ್ ಅಲ್ ಜರ್ಫ್ ನಲ್ಲಿರುವ ತುಂಬೆ ಯುನಿವರ್ಸಿಟಿ ಆಸ್ಪತ್ರಗೆ ಬೇಟಿ ನೀಡಿದರು. ತುಂಬೆ ಯುನಿವರ್ಸಿಟಿಯ ಸ್ಥಾಪಕಾಧ್ಯಕ್ಷರಾದ ತುಂಬೆ ಮೊಯ್ದಿನ್ ಆತ್ಮೀಯವಾಗಿ ಬರಮಾಡಿಕೊಂಡರು.
ತುಳು ಚಿತ್ರರಂಗದ ಕುರಿತು ಸುದೀರ್ಘವಾದ ಚರ್ಚೆ ನಡೆಸಿದ ತುಂಬೆ ಮೊಯ್ದಿನ್ ಶುಭ ಹಾರೈಸಿದರು. ತಾಯ್ನಾಡಿನ ಅಶಕ್ತ ಜನರಿಗೆ ಸ್ಪಂದಿಸುವ ,ತುಂಬೆ ನಾಡನ್ನು ಇನ್ನಷ್ಟು ಜನಮಾನಸಗೊಳಿಸುವ ಯೋಜನೆಯ ಬಗ್ಗೆ ಚರ್ಚಿಸಿದರು. ತುಳು ಚಿತ್ರ - ನಾಟಕ ನಟರಾದ ದೇವದಾಸ್ ಕಾಪಿಕಾಡ್, ಸಾಯಿಕೃಷ್ಣ ಕುಡ್ಲ,ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ರಶೀದ್ ವಿಟ್ಲ,ಉದ್ಯಮಿ ಅಬೂಬಕರ್ ಪುತು ಉಪ್ಪಿನಂಗಡಿ,ತುಂಬೆ ಯುನಿವರ್ಸಿಟಿಯ ಮೀಡಿಯಾ ಸಿಓಓ ವಿಘ್ನೇಶ್ ಎಸ್.ಉನದ್ಕಟ್ ಉಪಸ್ಥಿತರಿದ್ದರು.

0 Comments