ಪಡ್ರೆ ಜಠಾಧಾರಿ ಕ್ಷೇತ್ರ ಪ.ಜಾತಿ ಪ್ರವೇಶ ನಿಷೇಧ - ಇಲಾಖೆಯಿಂದ ಮಾಹಿತಿ ಸಂಗ್ರಹ


ಪೆರ್ಲ: ಪಡ್ರೆ ಗ್ರಾಮದ ಬದಿಯಾರು ಶ್ರೀಜಠಾಧಾರಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವರಿಗೆ ಪ್ರವೇಶ ನಿಷೇಧಿಸಿದ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಲು ಪರಿಶಿಷ್ಟ ಜಾತಿ ಇಲಾಖಾ ಅಧಿಕಾರಿಗಳು ಶುಕ್ರವಾರ ಸ್ಥಳ ಸಂದರ್ಶಿಸಿದ್ದಾರೆ. 

ಈ ಸಂದರ್ಭ ನಿಷೇಧ ಹೇರಿದ ಕ್ಷೇತ್ರ ಆಡಳಿತ ವರ್ಗ ಹಾಗೂ ಪರಿಸರ ನಿವಾಸಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಮಹತ್ತರ ಮಾಹಿತಿ ಕಲೆ ಹಾಕಿರುವುದಾಗಿ ತಿಳಿದು ಬಂದಿದೆ. 


ಪರಿಶಿಷ್ಟ ಜಾತಿ ಜಿಲ್ಲಾ ಅಧಿಕಾರಿ ಮೀನಾರಾಣಿ,  ಜಿಲ್ಲಾ ಸಹಾಯಕ ಅಧಿಕಾರಿ ನಂದಕುಮಾರ್, ಮಂಜೇಶ್ವರ ಬ್ಲೋಕ್ ಪ.ಜಾತಿ ಅಧಿಕಾರಿ ತಿರುಮಲೇಶ್ವರ,ಜಿಲ್ಲಾ ಪ.ಜಾತಿ ಉಪದೇಶಕ ಸಮಿತಿ ಸದಸ್ಯರಾದ ಸದಾನಂದ ಶೇಣಿ,ಜಯ ಕುಮಾರ್,ಎಣ್ಮಕಜೆ ಪಂ.ಸದಸ್ಯ ಶಶಿಧರ,ಪಿಕೆಎಸ್ ಮುಂದಾಳು ಆನಂದ ಕುಕ್ಕಿಲ,ಪ.ಜಾ.ಪ್ರಮೋಟರ್ ಸುಜಾತ,

ಸ್ಥಳೀಯ ಹೋರಾಟಗಾರ ಕೃಷ್ಣ ಮೋಹನ್ ಪೊಸೊಳ್ಯ ಮೊದಲಾದವರು ಸ್ಥಳಕ್ಕೆ ತೆರಳಿದ ನಿಯೋಗದಲ್ಲಿದ್ದರು.

Post a Comment

0 Comments