ದುಬೈ : ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಮಾರ್ಚ್ 27 ರಂದು ಬೆಳಗಿನಿಂದ ಸಂಜೆಯವರೆಗೆ ಆಜ್ಮಾನ್ ನ ಅಕಾಡೆಮಿ ಸ್ಕೂಲ್ ಕ್ರೀಡಾಂಗಣದಲ್ಲಿ ಜರಗುವ ಪ್ರತಿಷ್ಠಿತ "ಮಯೂರ ಕಪ್" ಮಹಿಳೆಯರ ಮತ್ತು ಪುರುಷರ ಥ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ಪಂದ್ಯಾಟದ ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿಯು ಬುರ್ಜುಮಾನ್ ಸಮೀಪದ ಫಾರ್ಚೂನ್ ಅಟ್ರೀಯಂನ ಸಭಾಂಗಣದಲ್ಲಿ ಜರಗಿತು.
ಜೋಸೆಫ್ ಮಥಾಯಿಸ್ : ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿಯು ಮಹಾ ಪೋಷಕರಾದ ಶ್ರೀ ಜೋಸೆಫ್ ಮಥಾಯಿಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಳೆದ ಎರಡೂವರೆ ವರ್ಷಗಳಿಂದ ಕೋವಿಡ್ ನಿಂದಾಗಿ ಯಾವುದೇ ಕಾರ್ಯಕ್ರಮ ನಡೆಸಲು ಸಾದ್ಯವಾಗಿಲ್ಲ ಈಗ ನಾವು ಸ್ವಲ್ಪ ಸುಧಾರಿಸಿಕೊಂಡಿದ್ದೆವೆ.ನಾಡಿದು ಜರಗುವ ಕ್ರೀಡಾ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಶುಭಾಶಯಗಳನ್ನು ನೀಡುತ್ತಿದ್ದೆನೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ಎಂ.ಇ.ಮೂಳೂರ್ನ : ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಮರೆಯುವಂತಹ ಈ ಸಂದರ್ಭದಲ್ಲಿ ಅದನ್ನು ನೆನಪಿಸುವಂತಹ ಜ್ಯೋತಿಯನ್ನು ಉರಿಸುವಂತಹ ದೊಡ್ಡ ಪ್ರಯತ್ನವನ್ನು ಕಳೆದ 2 ದಶಕದಿಂದ ನಮ್ಮ ಸಂಘ ಮಾಡುತ ಬರುತ್ತದೆ. ನಮ್ಮ ನಾಡು ನುಡಿಗೆ ಸಂಬಂಧಿಸಿ ಬಹಳಷ್ಟು ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ "ಮಯೂರ ಪ್ರಶಸ್ತಿ" ನೀಡಿ ಗೌರವಿಸುವುದು,ವಿಹಾರ ಕೂಟ ಹಾಗೂ ರಕ್ತದಾನ ಶಿಬಿರವನ್ನು ಮಾಡುತ್ತ ಬಂದಿರುತ್ತದೆ. ಕೋವಿಡ್ ಸಂದರ್ಭದಲ್ಲಿ ಮಂಗಳೂರು, ಉಡುಪಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಷ್ಟದಲ್ಲಿರುವ ಕನ್ನಡಿಗರಿಗೆ ಹಣದ ಸಹಾಯ ಮಾಡಿರುವ ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗಳನ್ನು ಪ್ರಸ್ತಾಪಿಸಿದ ಸಂಘದ ಅಧ್ಯಕ್ಷರಾದ ಶ್ರೀ ಎಂ.ಇ.ಮೂಳೂರ್ ರವರು ಮಾರ್ಚ್ 27 ರಂದು ನಡೆಯುವ ಕ್ರೀಡಾ ಕಾರ್ಯಕ್ರಮದಲ್ಲಿ ಸೋಲು ಗೆಲುವು ನಿಶ್ಚಿತ. ಅದನ್ನು ಸಮ ಪಾಲಿನಲ್ಲಿ ಕ್ರೀಡಾ ಪಟುಗಳು ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.
ಪಾಲ್ಗೊಂಡ ಗಣ್ಯರು:
ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಲಹೆಗಾರರು ಶ್ರೀಯುತರಾದ ಸತೀಶ್ ಪೂಜಾರಿ,ಆನಂದ ಬೈಲೂರು,ಸುಗಂಧರಾಜ್ ಬೇಕಲ್,ಕ್ರೀಡಾ ಕಾರ್ಯದರ್ಶಿ ಶ್ರೀ ಜೀವನ್ ಕುಕ್ಯಾನ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀ ವಿಶ್ವನಾಥ ಶೆಟ್ಟಿ ದುಬೈ ಸ್ವಾಗತಿಸಿ ಶ್ರೀ ವಿಘ್ನೇಶ್ ವಂದಿಸಿದರು. ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
✒️ವಿಜಯಕುಮಾರ್ ಶೆಟ್ಟಿ
ಗಾಣದಮೂಲೆ (ದುಬೈ)







0 Comments