ಬೆಂಗಳೂರು: ಬಂಟರ ಸಂಘದಿಂದ ಆಯೋಜಿಸಿದ್ದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸ್ಮಾರಕ ಕ್ರೀಡಾ ಮತ್ತು ಸಾಂಸ್ಕೃತಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಯುಎಇಯ ಅಬುಧಾಬಿಯ ಹಿರಿಯ ಉದ್ಯಮಿ,ಸಾಂಸ್ಕೃತಿಕ ,ಸಾಮಾಜಿಕ, ಮುಂದಾಳು ಸರ್ವೋತ್ತಮ ಶೆಟ್ಟಿ ಅವರಿಗೆ ದಿ. ಡಾ.ಡಿ.ಕೆ. ಚೌಟ ಸ್ಮಾರಕ ಸಾಂಸ್ಕೃತಿಕ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತನ್ನ ಶೈಕ್ಷಣಿಕ ಅವಧಿಯಲ್ಲಿಯೇ ನಾಟಕಕಾರರಾಗಿ ರಂಗಾಭಿನಯದ ಆಸಕ್ತಿ ಬೆಳೆಸಿದ್ದ ಸರ್ವೋತ್ತಮ ಶೆಟ್ಟಿ ಅವರು ಅನಿವಾಸಿ ಭಾರತೀಯರಾಗಿ ಅಬುಧಾಬಿಯಲ್ಲಿ ಉದ್ಯಮ ಕಂಡುಕೊಂಡಿದ್ದರು. ಈ ನಡುವೆ ತುಳು-ಕನ್ನಡ ಸಂಘ ಸಂಸ್ಥೆಗಳ ಸ್ಥಾಪನೆಯ ರೂವಾರಿಯಾಗಿ,ಮಾರ್ಗದರ್ಶಕರಾಗಿ ಹಲವಾರು ಸಮಾಜೋನ್ಮುಖಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಬಂಟರ ಸಂಘ ಸಹಿತ ವಿವಿಧ ತುಳು ಕನ್ನಡ ಸಂಘ ಸಂಸ್ಥೆಗಳ, ಸಾಂಸ್ಕೃತಿಕ ಸಾಹಿತ್ತಿಕ ಕಾರ್ಯಕ್ರಮಗಳ ಪ್ರೋತ್ಸಾಹಕರಾಗಿರುವ ಸರ್ವೋತ್ತಮ ಶೆಟ್ಟಿಯವರ ನೇತೃತ್ವದಲ್ಲಿ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದ ವಿಶ್ವ ತುಳುವೆರೆ ಆಯನೋ, ಯುಎಇಯಲ್ಲಿ ಏರ್ಪಡಿಸಿದ ತುಳು ಉತ್ಸವಗಳು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
ತುಳುನಾಡಿನ ವಿವಿಧ ನಾಟಕ ತಂಡ ಸಹಿತ ಸಾಂಸ್ಕೃತಿಕ ಸಂಸ್ಥೆಗಳ ಪ್ರತಿಭಾ ಪ್ರದರ್ಶನಕ್ಕೆ ವಿದೇಶದಲ್ಲೂ ಅವಕಾಶ ಕಲ್ಪಿಸುತ್ತಿರುವ ಸರ್ವೊತ್ತಮ ಶೆಟ್ಟಿಯವರನ್ನು ಖ್ಯಾತ ನಾಟಕಕಾರರಾಗಿದ್ದ ಡಾ.ಡಿ.ಕೆ. ಚೌಟ ಸ್ಮಾರಕ ಸಾಂಸ್ಕೃತಿಕ ಸಾಧಕ ಪ್ರಶಸ್ತಿ ನೀಡಿ ಗೌರವಿಸಿರುವುದು ಇವರ ಕೀರ್ತಿಯ ಮುಕುಟಕ್ಕೆ ಇನ್ನೊಂದು ಗರಿಮೆಯಾಗಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟರ ಸಂಘದ ವತಿಯಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ, ಕ್ರೀಡಾ ಸಾಧನಾ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಲಾಗಿತ್ತು
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ನಾರಾಯಣ ಸ್ವಾಮಿ,ಮಾಜಿ ಸಚಿವ ರಾಮನಾಥ ರೈ, ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಯ ಅಧ್ಯಕ್ಷರಾದ ಕೆ.ಸಿ. ಶೆಟ್ಟಿ, ಮುಂಬೈ ಬಂಟರ ಸಂಘದ ಉಪಾಧ್ಯಕ್ಷರಾದ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಆರ್. ಉಪೇಂದ್ರ ಶೆಟ್ಟಿ, ಕಾರ್ಯದರ್ಶಿ ಎಮ್. ಮಧುಕರ ಶೆಟ್ಟಿ, ಕ್ರೀಡಾ ಸಮಿತಿಯ ಚೇರ್ ಪರ್ಸನ್ ರಾಧಾಕೃಷ್ಣ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಚೇರ್ ಪರ್ಸನ್ ವಿಜಯ್ ಜೆ. ಶೆಟ್ಟಿ ಹಾಲಾಡಿ ಮೊದಲಾದವರು ಉಪಸ್ಥಿತರಿದ್ದರು.
(ನಮ್ಮ ಜಾಹೀರಾತುದಾರರನ್ನು ಪ್ರೋತ್ಸಾಹಿಸಿರಿ..)






0 Comments