ಡಾ.ತುಂಬೆ ಮೊಹಿದ್ದೀನ್ ರವರಿಗೆ ಬಿಸಿಎಫ್ ಎಕ್ಸಾಲೆನ್ಸಿ ಅವಾರ್ಡ್ ಪ್ರದಾನ


ಯುಎಇ: ತುಂಬೆ ಮೆಡಿಸಿಟಿ ಮತ್ತು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಮೂಲಕ  ಆರೋಗ್ಯ, ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಸಮಾಜಕ್ಕೆ ನೀಡುತ್ತಿರುವ ಅಗಾಧವಾದ ಸೇವೆಯನ್ನು ಗುರುತಿಸಿ ಪ್ರಖ್ಯಾತ ಅನಿವಾಸಿ ಕನ್ನಡಿಗ ಉದ್ಯಮಿ, ಜನಪ್ರಿಯ ಸಮಾಜ ಸೇವಾ ಧುರೀಣ ಮತ್ತು BCF ಇದರ ಸ್ಥಾಪಕ ಪೋಷಕ ರಾಗಿರುವ ಡಾಕ್ಟರ್ ತುಂಬೆ ಮೊಹಿದೀನ್ ರವರನ್ನು ಬ್ಯಾರೀಸ್ ಕಲ್ಚರಲ್ ಫೋರಮ್  ವತಿಯಿಂದ ಬಿಸಿಎಫ್ ಎಕ್ಸಾಲೆನ್ಸಿ ಅವಾರ್ಡ್ ನೀಡಿ ಗೌರವಿಸಲಾಯಿತು.

ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ಮತ್ತು ತುಂಬೆ ಮೆಡಿಸಿಟಿ ಅಜ್ಮಾನ್ ಸಹಭಾಗಿತ್ವದಲ್ಲಿ  ಯುಎಇ ಅಜ್ಮಾನ್ ನ ವಿಶ್ವ ವಿಖ್ಯಾತ ತುಂಬೆ ಮೆಡಿಸಿಟಿ ಪ್ರಾಂಗಣದಲ್ಲಿ ನಡೆದ ಅದ್ದೂರಿಯ ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್ 2022 ನಲ್ಲಿ ತುಂಬೆ ಮೆಡಿಸಿಟಿ ಮತ್ತು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಫೌಂಡರ್ ಚೆಯರ್ ಮೆನ್ ಆಗಿರುವ ಡಾ.ತುಂಬೆ ಮೊಹಿದ್ದೀನ್ ಅವರನ್ನು  ಹೃದಯ ಸ್ಪರ್ಶಿ ಯಾಗಿ ಗೌರವಿಸಲಾಯಿತು. 

BCF ಅಧ್ಯಕ್ಷರಾದ ಡಾ ಬಿ ಕೆ ಯೂಸುಫ್ ರವರ ಅನುಪಸ್ಥಿತಿಯಲ್ಲಿ  ಉಪಾಧ್ಯಕ್ಷರಾದ ಜನಾಬ್ ಎಂ.ಇ. ಮೂಳೂರು, ಜನಾಬ್ ಅಬ್ದುಲ್ ಲತೀಫ್ ಮುಲ್ಕಿ , ಜನಾಬ್ ಅಮೀರುದ್ದೀನ್ S I . , ಜನಾಬ್ ಅಫೀಕ್ ಹುಸೈನ್, ಪ್ರಧಾನ ಕಾರ್ಯದರ್ಶಿಯವರಾದ ಡಾ ಕಾಪು ಮೊಹಮದ್, BCF ಸ್ಪೋರ್ಟ್ಸ್ ಕಮಿಟಿ ಚೆಯರ್ ಮೆನ್ ಜನಾಬ್ ಯಾಕೂಬ್ ದೀವಾ, ಕೋಶಾಧಿಕಾರಿ ಜನಾಬ್ ಅಸ್ಲಾಂ ಕಾರಾಜೆ , BCF ಮಹಿಳಾ ಘಟಕದ ಸದಸ್ಯೆಯರು ಹಾಗೂ ಇತರ ಪದಾಧಿಕಾರಿಗಳು ಮತ್ತು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.  BCFನ ಪ್ರಧಾನ ಕಾರ್ಯದರ್ಶಿಗಳಾದ ಡಾ ಕಾಪು ಮೊಹಮ್ಮದ್ ರವರು ಡಾ ತುಂಬೆ ಮೊಹಿದೀನ್ ರವರ ವ್ಯಕ್ತಿ ವಿಶೇಷತ್ವವನ್ನು ವಿವರಿಸುತ್ತಾ ಅವರು ತಾವು ಸ್ಥಾಪಿಸಿದ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿ ರಾರಾಜಿಸುತ್ತಿರುವ  ಬಗ್ಗೆ ವಿವರಿಸಿದರು. ಉಪಾಧ್ಯಕ್ಷರಾದ ಎಂ ಈ ಮೂಳೂರು ರವರು ಡಾ ತುಂಬೆ ಮೊಹಿದ್ದೀನ್ ಮತ್ತು BCF ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿಯವರು  ವಂದಿಸಿದರು.





Post a Comment

0 Comments