ಕುಂಬಳೆ: ಸಾಹಿತ್ಯ,ಸಂಗೀತದ ಪ್ರೇಮಿಗಳಿಬ್ಬರು ತಮ್ಮ ವಿವಾಹ ಸಂದರ್ಭದಲ್ಲಿ ವಿಡಿಯೋ ಹಾಡೊಂದನ್ನು ನಿರ್ಮಿಸಿ ಬಿಡುಗಡೆಗೊಳಿಸಿದ ವಿಶಿಷ್ಟ ಕಾರ್ಯಕ್ರಮಕ್ಕೆ ನೆರೆದ ಸಭಾಸದರು ಸಾಕ್ಷಿಯಾಗಿ ಶುಭ ಹಾರೈಸಿದರು.
ಬಾಲಕೃಷ್ಣ ಕೆ. ಪಟ್ಟತ್ತಮೊಗರು ಮತ್ತು ರಶ್ಮಿತಾ ಕೆ.ಇವರ ವಿವಾಹ ಸಮಾರಂಭವು ಮಾರ್ಚ್ 27 ರಂದು ಸೀತಾಂಗೋಳಿಯ ಎ.ಬಿ.ಎ.ಆಡಿಟೋರಿಯಂನಲ್ಲಿ ಜರುಗಿತ್ತು. ಈ ಸಂದರ್ಭದಲ್ಲಿ ವರನಾದ ಬಾಲಕೃಷ್ಣ ಕೆ.ಪಟ್ಟತ್ತಮೊಗರು ಸಾಹಿತ್ಯ ರಚಿಸಿ ವಧು ರಶ್ಮಿತಾ ಕೆ. ಹಾಡಿದ "ಮುಲ್ದೊಟುದ ಸತ್ಯೊಲು" ಎಂಬ ಭಕ್ತಿ ಪ್ರಧಾನ ಆಡಿಯೋ ವೀಡಿಯೋ ಬಿಡುಗಡೆಗೊಳಿಸಲಾಗಿತ್ತು.
👆ಮೇಲಿನ ಲಿಂಕ್ ಒತ್ತಿ ವಿಡಿಯೋ ವೀಕ್ಷಿಸಿ..
ಬ್ರಹ್ಮಶ್ರೀ ಮೊಗರ ದೈವಗಳ ಕೃಪಾಶಿರ್ವಾದದೊಂದಿಗೆ ಸಿಂಗಿಗ್ ಬ್ರದರ್ಸ್ ಪಟ್ಟತ್ತಮೊಗರು ಇವರ ಸಾರಥ್ಯದ ಈ ಹಾಡಿಗೆ ಚಿದಾನಂದ ಕಡಬ ಸಂಗಿತ ನೀಡಿದ್ದಾರೆ.
ಬಿಡುಗಡೆ ಕಾರ್ಯಕ್ರಮವನ್ನು ಬ್ರಹ್ಮಶ್ರೀ ಮೊಗೇರ ಮಾಹಾಂಕಾಳಿ ದೇವಸ್ಥಾನ ಪಚ್ಲಂಪಾರೆಯ ಧರ್ಮದರ್ಶಿಗಳಾದ ಬಾಬು ಯು.ಪಚ್ಲಂಪಾರೆ,ಕೇರಳ ರಾಜ್ಯ ಮೊಗೇರ ಸರ್ವಿಸ್ ಸೊಸೈಟಿಯ ಅಧ್ಯಕ್ಷರಾದ ಲಕ್ಷ್ಮಣ ಐ.ಪೆರಿಯಡ್ಕ,ವಿಟ್ಲ ಹೊಬಳಿಯ ಉಪ ತಹಶಿಲ್ದಾರರಾದ ವಿಜಯ ವಿಕ್ರಂ ಜಿ.ರಾಮಕುಂಜ,ಸಾಹಿತಿ ಸುರೇಶ್ ಎಂ.ಮಂಗಲ್ಪಾಡಿ,ಮೊಹನ್ ಯು.ಮಂಜೇಶ್ವರ ಹಾಗೂ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಜರುಗಿತ್ತು. ಆದರ್ಶ ಪಟ್ಟತ್ತಮೊಗರು ಕಾರ್ಯಕ್ರಮ ನಿರೂಪಣೆ ಮಾಡಿದರು.
✒️ವಿಜಯಕುಮಾರ್ ಶೆಟ್ಟಿ
ಗಾಣದಮೂಲೆ (ದುಬೈ)



0 Comments