ದುಬೈ: ಕನ್ನಡ ಮಿತ್ರರು ಯುಎಇ ಸಂಘಟನೆ , ನಡೆಸುತ್ತಿರುವ ವಿಶ್ವದ ಅತಿದೊಡ್ಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕನ್ನಡ ಪಾಠಶಾಲೆ , ದುಬೈ - ಇವರ 8 ನೇ ವರ್ಷದ ಶೈಕ್ಷಣಿಕ ಸಮಾರೋಪ ಸಮಾರಂಭ ಏಪ್ರಿಲ್ 24 ರ ಭಾನುವಾರ ಆನ್ಲೈನ್ ಮುಖಾಂತರ ನಡೆಯಿತು .
ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ. ಟಿ. ಎಸ್. ನಾಗಾಭರಣ , (ಮಾನ್ಯ ಅಧ್ಯಕ್ಷರು , ಕನ್ನಡ ಅಭಿವೃದ್ಧಿ ಪ್ರಾಧಿಕಾರ ) , ಗೌರವ ಅತಿಥಿಗಳಾಗಿ ಶ್ರೀ.ವಿಶ್ವೇಶ್ವರ ಭಟ್ ( ಸಂಪಾದಕರು , ವಿಶ್ವವಾಣಿ ಪತ್ರಿಕೆ ) , ವಿಶೇಷ ಅತಿಥಿಗಳಾಗಿ ಶ್ರೀ ಹಿರೇಮಗಳೂರ್ ಕಣ್ಣನ್ ( ಖ್ಯಾತ ವಾಗ್ಮಿಗಳು ) ಮತ್ತು ಶ್ರೀಮತಿ ನಾಗಶ್ರೀ ತ್ಯಾಗರಾಜ್ ( ಉಪನ್ಯಾಸಕರು ) ಪ್ರವೀಣ್ ಶೆಟ್ಟಿ ( ಮಾನ್ಯ ಅಧ್ಯಕ್ಷರು , ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ) ಹಾಗೂ ಶ್ರೀ. ಮೋಹನ್ ನರಸಿಂಹ ಮೂರ್ತಿ ( ಮಾನ್ಯ ಉಪಾಧ್ಯಕ್ಷರು , ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ) ಪಾಲ್ಗೊಂಡಿದ್ದರು .
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ. ಟಿ. ಎಸ್. ನಾಗಾಭರಣರವರು ದೂರದ ಅರಬ್ಬರ ನಾಡಿನಲ್ಲಿ ಕನ್ನಡ ಕಟ್ಟುವ ಕನ್ನಡ ಮಿತ್ರರ ಪ್ರಯತ್ನವನ್ನು ಅಭಿನಂದಿಸುತ್ತಾ , ಕನ್ನಡ ಮಿತ್ರರ ಭಾಷಾ ಕಾಳಜಿಗೆ ಸಂತಸ ವ್ಯಕ್ತ ಪಡಿಸಿದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಶ್ರೀ.ವಿಶ್ವೇಶ್ವರ ಭಟ್ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲೇ ಮಾತೃ ಭಾಷಾ ತಾತ್ಸಾರ ಮತ್ತು ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ , ಒಂದು ಸರ್ಕಾರ / ಪ್ರಾಧಿಕಾರ ಮಾಡಬೇಕಾದ ಕಾರ್ಯವನ್ನು ಕನ್ನಡ ಮಿತ್ರರು ಸಂಘಟನೆ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು . ಕನ್ನಡ ಮಿತ್ರರು ಯುಎಇ ನಡೆಸುತ್ತಿರುವ , ಕನ್ನಡ ಪಾಠಶಾಲೆ , ದುಬೈನ ಮಾದರಿಯಲ್ಲಿಯೇ ಕನ್ನಡ ಕಲಿಸುವ ಪ್ರಯತ್ನಗಳು ಕರ್ನಾಟದಲ್ಲಿಯೇ ಹೆಚ್ಛಾಗಿ ನಡೆಯಬೇಕೆಂದು ಅಭಿಪ್ರಾಯಪಟ್ಟರು.
ಕನ್ನಡದ ಪೂಜಾರಿ ಎಂದೇ ಎಲ್ಲರ ಮನೆ ಮಾತಾಗಿರುವ ಶ್ರೀ ಹಿರೇಮಗಳೂರ್ ಕಣ್ಣನ್ ಮತ್ತು ಉಪನ್ಯಾಸಕಿಯಾದ ಶ್ರೀಮತಿ ನಾಗಶ್ರೀ ತ್ಯಾಗರಾಜ್ ನಡೆಸಿಕೊಟ್ಟ ವಿಶೇಷ ಕಾರ್ಯಕ್ರಮ " ದಿನದಿನದ ಮಾತುಕತೆ ಚಂದನದ ತಂಪಂತೆ" ಎಂಬ ಎಲ್ಲರ ಗಮನ ಸೆಳೆಯಿತು .
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಮಿತ್ರರು ಸಂಘಟನೆ ಹಾಗು ಕನ್ನಡ ಪಾಠಶಾಲೆ , ದುಬೈನ ಅಧ್ಯಕ್ಷರಾದ ಶ್ರೀ. ಶಶಿಧರ್ ನಾಗರಾಜಪ್ಪರವರು , ಆನ್ ಲೈನ್ ತರಗತಿಗಳ ಮೂಲಕವೇ ಕರೋನ ನಡುವೆಯೂ ಕನ್ನಡ ಕಲಿಸುವ 17 ಶಾಲಾ ಶಿಕ್ಷಕಿಯರ ಬದ್ಧತೆಯನ್ನು ಪ್ರಶಂಶಿಸಿದರು ಈ ಕಾರ್ಯಕ್ರಮದಲ್ಲಿ ಪಾಠಶಾಲೆಯ ಎಲ್ಲ ನಿಸ್ವಾರ್ಥ ಶಿಕ್ಷಕಿಯರಿಗೆ ಗುರು ನಮನ ಸಲ್ಲಿಸಲಾಯಿತು ಹಾಗೂ ಈ ಬಾರಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು .
ಇದೆ ಸಮಾರಂಭದಲ್ಲಿ ಕನ್ನಡ ಮಿತ್ರರು ಯುಎಇ ಸಂಘಟನೆಯ ಈ ಬಾರಿಯ “ ಕನ್ನಡ ಮಿತ್ರ “ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಥಟ್ ಅಂತ ಹೇಳಿ ಖ್ಯಾತಿಯ ಶ್ರೀ . ಡಾ. ನಾ . ಸೋಮೇಶ್ವರ್ ಮತ್ತು ಪ್ರಖ್ಯಾತ ಕನ್ನಡ ಸಾಹಿತಿಗಳಾದ ಶ್ರೀ . ಬೊಳುವಾರ್ ಮಹಮದ್ ಕುಂಇ ಇವರಿಗೆ ನೀಡಿ ಪುರಸ್ಕರಿಸಲಾಯಿತು
ಈ ಬಾರಿ ಕನ್ನಡ ಮಿತ್ರರು ಯುಎಇ ಸಂಘಟನೆಯ ಕಡಲಾಚೆಯಿಂ ಕರುನಾಡಿಗೆ ಯೋಜನೆಯಡಿ ಚತುರ ಶಾಲಾ ಸಂವರ್ಧನೆಗೆ ಆಯ್ಕೆಯಾದ 3 ಸರ್ಕಾರಿ ಶಾಲೆಗಳನ್ನು ಘೋಷಿಸಲಾಯಿತು .
ಕಾರ್ಯಕ್ರಮದಲ್ಲಿ ಕನ್ನಡ ಮಿತ್ರರು ಯುಎಇ ಸಂಘಟನೆಯ ಉಪಾಧ್ಯಕ್ಷರಾದ ಶ್ರೀ ಸಿದ್ದಲಿಂಗೇಶ್ ಚತುರ ಶಾಲಾ ಯೋಜನೆ ಬಗ್ಗೆ ವಿವರಣೆ ನೀಡಿದರೆ , ಕಾರ್ಯದರ್ಶಿಗಳಾದ ಶ್ರೀ ಸುನಿಲ್ ಗವಾಸ್ಕರ್ ಅವರು ತಂಡದ ತಂತ್ರಜ್ಞಾನ ವಿಭಾಗದ ಸೇವೆಯನ್ನು ಶ್ಲಾಘಿಸಿದರು ... ಮತ್ತು ಖಜಾಂಚಿಗಳಾದ ಶ್ರೀ ನಾಗರಾಜ ರಾವ್ ರವರು ಸಂಘಟನೆಯವರು ಕೈಗೊಂಡ ಉಡುಪಿಯ ಕನ್ನಡ ಪಾಠಶಾಲೆಯ ದುರಸ್ತಿ ಕಾರ್ಯದ ವಿವರಣೆ ನೀಡಿದರು .
ಕಾರ್ಯಕ್ರಮದಲ್ಲಿ ಯು.ಎ.ಇಯಲ್ಲಿರುವ ಎಲ್ಲ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳಾದ ಎಂ.ಇ. ಮೂಳೂರು , ಗೋವಿಂದ ನಾಯ್ಕ್ , ಇದಾಯತ್ ಅಡ್ಡುರ್, ಮಲ್ಲಿಕಾರ್ಜುನ ಗೌಡ , ಗೋಪಾಲಕೃಷ್ಣ ಸಾಲಿಯಾನ್ , ಡಾ. ರಶ್ಮಿ ನಂದಕಿಶೋರ್ , ಮಲ್ಲಿಕಾರ್ಜುನ ಅವಲ್ದಾರ್ , ಸುದೀಪ್ ಹಾಗೂ ಯಮುನಾ ಮನೋಜ್ ಸೇರಿದಂತೆ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು .ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೆಳೆದವು .
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಕಾವ್ಯ ಯುವರಾಜ್ ನಡೆಸಿ ಕೊಟ್ಟರು . ಎಲ್ಲ ಅತಿಥಿಗಳನ್ನು ಕನ್ನಡ ಮಿತ್ರರು ಸಂಘಟನೆಯ ಸಂಘಟನಾ ಕಾರ್ಯದರ್ಶಿ ಶ್ರೀ. ವಿನಯ್ ಕುಮಾರ್ ಸ್ವಾಗತಿಸಿದರೆ , ಮಾಧ್ಯಮ ಸಂಚಾಲಕರಾದ ಶ್ರೀ. ಬಾನುಕುಮಾರ್ ವಂದನಾರ್ಪಣೆ ಮಾಡಿದರು .
ಆನ್ಲೈನ್ನಲ್ಲಿ ನಡೆದ ಈ ಕಾರ್ಯಕ್ರಮದ ನೇರ ಪ್ರಸಾರ ಕನ್ನಡ ಮಿತ್ರರು ಯುಎಇ ರವರ ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಕೆಲ ಡಿಜಿಟಲ್ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕ ಪ್ರಪಂಚದಾದ್ಯಂತ ಕನ್ನಡಿಗರು ಈ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು.
ಈ ಕರೋನ ಮಹಾಮಾರಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಧಕ್ಕೆಯಾಗಿರುವ ಈ ಸಂದರ್ಭದಲ್ಲಿ“ ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು “ಎಂಬ ಘೋಷಣೆಯೊಂದಿಗೆ ಉಚಿತವಾಗಿ ದೂರದ ದುಬೈನಲ್ಲಿ , ಕನ್ನಡ ಕಲಿಸುತ್ತಿರುವ ಕನ್ನಡ ಮಿತ್ರರು ಸಂಘಟನೆ ಎಲ್ಲರಿಗೂ ಮಾದರಿ.







0 Comments