ಎಣ್ಮಕಜೆ ಪಂಚಾಯತಿನಲ್ಲಿ ದಾರಿದ್ರ ನಿರ್ಮೂಲನೆ,ಸ್ತ್ರೀ ಹಾಗೂ ಸಾಮಾಜಿಕ ಸುರಕ್ಷೆಗಾಗಿ ವಿಶೇಷ ಗ್ರಾಮ ಸಭೆಯ ಮೂಲಕ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ


ಪೆರ್ಲ: ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಸ್ವಾತಂತ್ರ್ಯದ 75 ವಾರ್ಷಿಕ ಆಚರಣೆಯ "ಅಜಾದಿ ಕಾ ಅಮೃತ ಮಹೋತ್ಸವ"ದ ಅಂಗವಾಗಿ ಎಣ್ಮಕಜೆ  ಗ್ರಾಮ ಪಂಚಾಯತು  ಆಶ್ರಯದಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು.ದಾರಿದ್ರ ನಿರ್ಮೂಲನೆ,ಸ್ತ್ರೀ ಹಾಗೂ ಸಾಮಾಜಿಕ ಸುರಕ್ಷೆ ಮೊದಲಾದ ಅಜೆಂಡಗಳೊಂದಿಗೆ ನಡೆದ ಗ್ರಾಮ ಸಭೆಯಲ್ಲಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್‌, ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ  ಜಯಶ್ರೀ ಎ‌.ಕುಲಾಲ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್, ಪಂ. ಸದಸ್ಯರಾದ ಮಹೇಶ್ ಭಟ್, ಇಂದಿರಾ, ರಾಮಚಂದ್ರ, ನರಸಿಂಹ ಪೂಜಾರಿ,  ರೂಪವಾಣಿ ಆರ್.ಭಟ್, ರಮ್ಲಾ ಇಬ್ರಾಹಿಂ,ರಾಧಾಕೃಷ್ಣ ನಾಯಕ್ ಶೇಣಿ, ಕುಸುಮಾವತಿ,ಉಷಾ ಗಣೇಶ್, ಆಶಾಲತಾ, ಮೊದಲಾದವರು ಉಪಸ್ಥಿತರಿದ್ದರು.

ಗ್ರಾ.ಪಂ.ಹೆಡ್ ಕ್ಲಾರ್ಕ್  ಪ್ರೇಮನ್ ಸ್ವಾಗತಿಸಿ.ಯೋಜನಾ ಸಮಿತಿಯ ಉಪಾಧ್ಯಕ್ಷೆ ಆಯಿಷಾ ಎ.ಎ. ವಂದಿಸಿದರು.ಪಂ.ಸಿಬಂದಿಗಳು,ಆಶಾ ,ಅಂಗನವಾಡಿ, ಹರಿತಕರ್ಮ ಹಾಗೂ ಮತದಾರರು ಪಾಲ್ಗೊಳ್ಳುವ ಮೂಲಕ ವಿಶೇಷ ಗ್ರಾಮ ಸಭೆ  ಯಶಸ್ವಿಗೊಳಿಸಿದರು.

ಜಾಹೀರಾತು


Post a Comment

0 Comments