ತುಳುನಾಡ ಕಂಬಳಕ್ಕೆ ಮರಳುನಾಡಿನಲ್ಲಿ ಪ್ರೋತ್ಸಾಹ ಒದಗಿಸಿದ "ನಮ್ಮ ಕಂಬುಲ ಟೀಮ್ ದುಬೈ"


ಯುಎಇ: ತುಳುನಾಡ ಪರಂಪರೆಯ ಕ್ರೀಡೆಯಾಗಿ ಬಹು ಮನ್ನಣೆಗಳಿಸಿಕೊಂಡಿರುವ ಕಂಬಳಕ್ಕೆ ಅನಿವಾಸಿ ಭಾರತೀಯರ ಬೆಂಬಲ ದೊರಕಿಸಿಕೊಡುವಲ್ಲಿ ತುಳುನಾಡ ಕಂಬಳ ಪ್ರೇಮಿಗಳ ತಂಡವೊಂದು ಕಾರ್ಯ ನಿರತವಾಗಿ ಗಮನ ಸೆಳೆದಿದೆ. 

ತುಳುನಾಡಿನ ಕಂಬಳ ಪ್ರೇಮಿಯಾದ ಹೊಕ್ಕಾಡಿಗೋಳಿ ಹಕ್ಕೇರಿ ಸನತ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ದುಬೈಯ ಕಂಬಳ ಪ್ರೇಮಿಗಳಲ್ಲಿ ಹೊಸತೊಂದು ಸಂಚಲನ ಸೃಷ್ಠಿಸುವಲ್ಲಿ ಈ ತಂಡ ಯಶಸ್ವಿಯಾಗಿದೆ.

ವಾರ್ಷಿಕ ಕಂಬಳದ ನಿಗದಿತ ದಿನ, ಇನ್ನಿತರ ವಿವರ ಹಾಗೂ ಕಂಬಳದ ಬಗ್ಗೆ ಆಸಕ್ತಿಯುತರಿಗೆ ಸಮಗ್ರ ಮಾಹಿತಿ ನೀಡುವ ಮೂಲಕ ಅನಿವಾಸಿ ತುಳು ಕಂಬಳ ಪ್ರೇಮಿಗಳ ತಂಡ ಊರಿನ ವಿವಿದೆಡೆ ಪ್ರಾಯೋಜಕತ್ವ ಹಾಗೂ ಸಹಾಯ ಸಹಕಾರ ನೀಡುವಂತೆ ಪ್ರೇರಣೆ ತುಂಬುವಲ್ಲಿ ಈ ಟೀಮ್ ಸದ್ದಿಲ್ಲದೆ ಕಾರ್ಯವೆಸಗುತ್ತಿದೆ. 

ಈಗಾಗಲೇ ವಿದೇಶದಲ್ಲಿ ನೆಲೆಸಿರುವ  ತುಳುನಾಡಿನ ಹಾಗೂ ವಿವಿಧ ರಾಜ್ಯದ ಕಂಬಳ ಪ್ರೇಮಿಗಳಾದ ಹಲವಾರು ಉದ್ಯಮಿ ಇನ್ನಿತರ ಉದ್ಯೋಗಾರ್ಥಿಗಳಿಗೆ ಪರಂಪರಾಗತ ಕ್ರೀಡೆಯೊಂದರ ಬಗ್ಗೆ ಉತ್ಸಾಹ ಸೃಷ್ಠಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. 

ದುಬೈಯಲ್ಲಿದ್ದುಕೊಂಡು ಈಗಾಗಲೇ ತುಳುನಾಡ ಕಂಬಳ ಪ್ರೇಮಿಯಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಹೊಕ್ಕಾಡಿಗೋಳಿ ಹಕ್ಕೇರಿ ಸನತ್ ಕುಮಾರ್ ಶೆಟ್ಟಿ ಸಮಾನ ಮನಸ್ಕರಾದ ತನ್ನ ಜತೆಗೂಡಿಸಿಕೊಂಡು ಕಂಬಳಕ್ಕೆ ಬೆಂಬಲ ನೀಡುವಂತೆ ದುಬೈಯಲ್ಲೂ ತನ್ನದೇ ಕೊಡುಗೆ ನೀಡುತ್ತಿದ್ದು ಈ ಬಾರಿ 2021 -22 ರ ಸಾಲಿನ ಅಂತಿಮ ಕಂಬಳ ಕೂಟ ಬಂಟ್ವಾಳ ನಾವೂರಿನ "ಮೂಡೂರು-ಪಡೂರು" ಕಂಬಳದೊಂದಿಗೆ ಸಂಪನ್ನಗೊಂಡಿದ್ದು ಕೂಟದಲ್ಲಿ 162 ಜೊತೆ ಕೋಣಗಳು ಭಾಗವಹಿಸಿದ್ದವು.ಕನೆಹಲಗೆ ವಿಭಾಗದಲ್ಲಿ ಮೂರು ಜೊತೆ,ಅಡ್ಡಹಲಗೆ ವಿಭಾಗದಲ್ಲಿ13 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 21ಜೊತೆ,ಹಗ್ಗ ಕಿರಿಯ ವಿಭಾಗದಲ್ಲಿ ಎಂಟು ಜೊತೆ, ನೇಗಿಲು ಕಿರಿಯ ಸಬ್ ಜೂನಿಯರ್ ವಿಭಾಗದಲ್ಲಿ 47 ಜೊತೆ ಕೋಣಗಳು ಭಾಗವಹಿಸಿದ್ದವು.


ಕೂಟದಲ್ಲಿ ಅತೀ ವೇಗವಾಗಿ ಓಡಿದ ಕೋಣಗಳನ್ನು ಓಡಿಸಿದ ಓಟಗಾರನಿಗೆ ಬಹುಮಾನ ನೀಡಿದ್ದು ವಿಶೇಷವಾಗಿತ್ತು. ಸನತ್ ಕುಮಾರ್ ಶೆಟ್ಟಿ ಹೊಕ್ಕಾಡಿಗೋಳಿ ಹಕ್ಕೇರಿ (ದುಬೈ),ನಿತೇಶ್ ಕೋಟ್ಯಾನ್ ಬಜೆಗೋಳಿ ಪ್ರಾಯೋಜಕತ್ವದ ವಿಶೇಷ ಬಹುಮಾನ (15 ಸಾವಿರ ರೂ. ನಗದು) ವನ್ನು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರ ತಮ್ಮದಾಗಿಸಿಕೊಂಡರು. ಬೀಯಪಾದೆ ಕೆರೆಕೋಡಿಗುತ್ತು ಶೇಖರ ಪೂಜಾರಿಯವರ 'ಎ' ವಿಭಾಗದ ಕೋಣಗಳನ್ನು ಶ್ರೀನಿವಾಸ ಗೌಡರು 11.60  ಸೆಕೆಂಡ್ ನಲ್ಲಿ ಗುರಿ ತಲುಪಿಸಿದ್ದರು.ಅದು ಅಲ್ಲದೆ ಇದೇ ಕೂಟದಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದು ಮಿಂಚಿದ್ದರು.

ಜಾಹೀರಾತು





Post a Comment

0 Comments