ದುಬೈಯ ಗಮ್ಮತ್ ಕಲಾವಿದೆರ್ ಆಶ್ರಯದಲ್ಲಿ ಶಶಿರಾಜ್ ಕಾವೂರುರವರ "ಪುದ್ದು ಕೊಡ್ತೆರ್" ಲೋಕಾರ್ಪಣೆ


ದುಬೈ:
ಯುಎಇಯ ಮರಳುಭೂಮಿಯ ಅನಿವಾಸಿ ತುಳು ಕನ್ನಡಿಗ ಸಮ್ಮುಖದಲ್ಲಿ ನಾಟಕಕಾರ, ನ್ಯಾಯವಾದಿ ಶಶಿರಾಜ್ ರಾವ್ ಕಾವೂರುರವರ ನೂತನ ತುಳು ಕಾದಂಬರಿ 'ಪುದ್ದು ಕೊಡ್ತರ್- ಕೊರಗೆರ್ನ ಗುರಿಕಾರೆ' ನಗರದ ದೇರಾ-ದ ರೋಲೆಕ್ಸ್ ಟವರ್‌ನಲ್ಲಿ ಇದೇ ಎಪ್ರಿಲ್ 24 ರಂದು ಬಿಡುಗಡೆಗೊಂಡಿತ್ತು.

ದುಬೈನ ಗಮ್ಮತ್ತ್ ಕಲಾವಿದರ ಆಶ್ರಯದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಮಹಾ ಪೋಷಕರು, ಮಾರ್ಗದರ್ಶಕರು ಹಾಗೂ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಪುಸ್ತಕ ಬಿಡುಗಡೆಗೊಳಿಸಿ ಶುಭವನ್ನು ಹಾರೈಸಿದರು.

ಗಮ್ಮತ್ತ್ ಕಲಾವಿದೆರ್ ದುಬೈ‌ನ ಗೌರವಾಧ್ಯಕ್ಷರೂ, ಚಿತ್ರ ನಿರ್ಮಾಪಕರಾದ ಹರೀಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಎನ್.ಆರ್.ಐ. ಫೋರಮ್ ನ ಅಧ್ಯಕ್ಷರಾದ ಉದ್ಯಮಿ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉದ್ಯಮಿ,ಚಿತ್ರ ನಿರ್ಮಾಪಕರು ಶ್ರೀ ರೋನಾಲ್ಡ್ ಮಾರ್ಟಿಸ್, ಕಲಾ ನಿರ್ದೇಶಕ, ಬರಹಗಾರ ಶ್ರೀ ಬಿ.ಕೆ.ಗಣೇಶ್ ರೈ, ಶಾರ್ಜಾ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷರು,ಬಿಲ್ಲವಾಸ್ ದುಬೈಯ ಮಾಜಿ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿ, ಕವಿ ಸಾಹಿತಿ, ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಎಮ್.ಇ.ಮೂಳೂರು, ಗಮ್ಮತ್ತ್ ಕಲಾವಿದೆರ್ ದುಬೈನ ಅಧ್ಯಕ್ಷರಾದ ಶ್ರೀ ರಾಜೇಶ್ ಕುತ್ತಾರ್, ಸಮಾಜ ಸೇವಕ,ಉದ್ಯಮಿ ಸುಂದರ ಶೆಟ್ಟಿ ಅಬುಧಾಬಿ, ಸತೀಶ್ ಕುಮಾರ್ ಬಜಾಲ್ ಸೌದಿ ಅರೇಬಿಯಾ, ಹಿರಿಯ ರಂಗ ನಟ ವಿಜಿ ಪಾಲ್,ತುಳು ಚಿತ್ರ ನಾಯಕ ವಿನಿತ್ ಕುಮಾರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನ್ಯಾ.ಶಶಿರಾಜ್ ರಾವು ಕಾವೂರು ಹಾಗೂ ವಿದುಷಿ ಮಯೂರಿ ಎಸ್.ರಾವ್ ದಂಪತಿಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ಶ್ರೀಮತಿ ಆಶಾ ಕೊರೇಯ ಸನ್ಮಾನಿತರನ್ನು ಪರಿಚಯಿಸಿದರು. ಗಮ್ಮತ್ ಕಲಾವಿದೆರ್ ತಂಡದ ನಿರ್ದೇಶಕ ವಿಶ್ವನಾಥ ಶೆಟ್ಟಿ ದುಬೈ ಗಮ್ಮತ್ ಕಲಾವಿದೆರ್ ತಂಡದ ಬಗ್ಗೆ ವಿವರಣೆ ನೀಡಿದರು.

ರಾಜೇಶ್ ಕುತ್ತಾರ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಗಿರೀಶ್ ನಾರಾಯಣ ನಿರೂಪಿಸಿ ಸುನಿಲ್ ಸುವರ್ಣ ವಂದಿಸಿದರು. ಗಮ್ಮತ್ ಕಲಾವಿದೆರ್ ತಂಡದ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು.


ಜಾಹೀರಾತು







Post a Comment

0 Comments