ದುಬೈಯಲ್ಲಿ ಮತ ಸೌಹರ್ದತೆಗೆ ಸಾಕ್ಷಿಯಾದ ಬ್ಯಾರಿಸ್ ಕಲ್ಚರಲ್ ಫೋರಂ (ಬಿಸಿಫ್)ನ ಇಫ್ತಾರ್ ಕೂಟ


ದುಬೈ : ಬ್ಯಾರಿಸ್ ಕಲ್ಚರಲ್ ಫೋರಂ (ಬಿಸಿಫ್) ನ ವತಿಯಿಂದ ಸರ್ವಧರ್ಮ ಬಾಂಧವರ ಜೊತೆಗೆ ಇತ್ತೀಚೆಗೆ "ಬಿ.ಸಿ.ಎಫ್ ಇಫ್ತಾರ್ ಕೂಟ 2022" ಅದ್ದೂರಿಯಾಗಿ ಜರಗಿ ಮತ ಸೌಹರ್ದತೆಯ ಸಂದೇಶ ಸಾರಿತು.

 ದುಬೈ ನಗರದ ದೇರಾದ ಹೋಟೆಲ್ ಕೋರಲ್ ನ ಸಂಭಾಂಗಣದಲ್ಲಿ ಬಿ.ಸಿ.ಎಫ್.ನ ಗೌರವಾನ್ವಿತ ಅಧ್ಯಕ್ಷರಾದ ಡಾ.ಬಿ.ಕೆ. ಯುಸುಫ್ ರವರ ಘನ ಅಧ್ಯಕ್ಷತೆಯಲ್ಲಿ ಜರುಗಿತ್ತು. ಸಾಮೂಹಿಕ ನಮಾಜಿನ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ. ಬಿ.ಕೆ.ಯಾಸುಫ್ ರವರು ಉಪವಾಸದ ಮಹತ್ವವನ್ನು ವಿವರಿಸುತ್ತಾ ಎಲ್ಲರನ್ನೂ ಅಭಿನಂದಿಸಿದರು. 


"ಪವಿತ್ರ ರಂಜಾನ್ ನ ಉಪವಾಸವು ಪುಸ್ತಕಗಳಿಂದ ಹೃದಯವನ್ನು ಶುದ್ದೀಕರಿಣಗೊಳಿಸಿ ಈ ಲೋಕದಲ್ಲೂ ಹಾಗೂ ಪರಲೋಕದಲ್ಲೂ ಅಲ್ಲಾಹು ಎಲ್ಲರಿಗೂ ಒಳಿತನು ಮಾಡಲಿ" ಎಂದು ಪ್ರಾರ್ಥಿಸುತ್ತ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ವಿವಿಧ ರೀತಿಯ ಸಮಾಜಮುಖಿ ಸೇವೆಯನ್ನು ಮಾಡುತ್ತಿರುವ ಈ ಸಂಸ್ಥೆಯ ಸಹಕಾರ ನೀಡುತ್ತಿರುವ ಎಲ್ಲಾ ಸಹೃದಯ ಸಹೋದರ ಸಹೋದರಿಯರಿಗೆ ಕೃತಜ್ಞತೆ ಸಲ್ಲಿಸಿದರು.

ಇಫ್ತಾರ್ ಕೂಟ ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಲತಿಫ್ ಮುಲ್ಕಿಯವರು ಈ ಇಫ್ತಾರ್ ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಅತಿಥಿಗಳ ಸಮೇತ ಎಲ್ಲರನ್ನು ಸ್ವಾಗತಿಸುತ್ತಾ ಸರ್ವರಿಗೂ ರಂಜಾನ್ ಶುಭ ಹಾರೈಕೆಯನ್ನು ಕೋರಿದರು. 


ಪವಿತ್ರ ರಂಜಾನಿನ ಮುಖ್ಯ ಉದ್ದೇಶ ದೈವ ಸಂಪ್ರೀತಿಯೊಂದಿಗೆ ಆತ್ಮ ಶುದ್ಧಿಯಾಗಿದ್ದು ಪ್ರತಿಯೊಬ್ಬರನ್ನೂ ಅಲ್ಲಾಹು ಕರುಣಿಸಲಿ ಹಾರೈಸಿದರು. ಇಫ್ತಾರ್ ಕಾರ್ಯಕ್ರಮಕ್ಕೆ ತಮಗೆ ಸಹಕರಿಸಿದ ಪ್ರತಿಯೊಬ್ಬರಿಗೆ ಧನ್ಯವಾದ ಸಲ್ಲಿಸಿದರು.

ನಂತರ ನಡೆದ ಬಿ.ಸಿ.ಎಫ್. ಸ್ಕಾಲರ್ ಶಿಪ್ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಿ.ಸಿ.ಎಫ್.ನ ಪ್ರಧಾನ ಕಾರ್ಯದರ್ಶಿ ಡಾ ಕಾಪು ಮಹಮ್ಮದ್ ರವರು ಸ್ಕಾಲರ್ ಶಿಫ್ ನ ವಿವರ ಸಲ್ಲಿಸುತ್ತಾ ಪ್ರೇಕ್ಷಕರ ಸಹಕಾರ ಯಾಚಿಸಿದರು.

ಸೇರಿದ ಗೌರವಾನ್ವಿತ ವಿಶೇಷ ಅತಿಥಿಗಳ ಸಹಿತ ಉಳಿದ ಹಲವಾರು ಸಭಿಕರು BCF ಸ್ಕಾಲರ್ ಶಿಫ್ ಗೆ ತಮ್ಮ ಸಹಾಯದ ಭರವಸೆಯನ್ನು ನೀಡುತ್ತಾ ಯಾರ್ಯಾರು ಯಾವ ಯಾವ ಕೋರ್ಸ್ ಗಳ ಎಷ್ಟೆಷ್ಟು ವಿದ್ಯಾರ್ಥಿಗಳ ಸ್ಕಾಲರ್ ಶಿಫ್ ವೆಚ್ಚಗಳನ್ನು ಭರಿಸುವುದಾಗಿ ವಾಗ್ದಾನ ಗೈದರು.


ಕರ್ನಾಟಕ ಸಂಘ ಶಾರ್ಜಾದ ಗೌರವ  ಸಲಹೆಗಾರದ ಶ್ರೀ ಆನಂದ್ ಬೈಲೂರ್ ತಮ್ಮ ಭಾಷಣದಲ್ಲಿ BCF ನ ಸ್ಕಾಲರ್ ಶಿಫ್ ಯೋಜನೆಯನ್ನು ಸ್ವಾಗತಿಸುತ್ತಾ ಮುಖ್ಯವಾಗಿ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಈ ಸ್ಕಾಲರ್ ಶಿಫ್ ನೀಡುವುದನ್ನು ಪ್ರಶಂಶಿಸುತ್ತಾ ತಮ್ಮ ಕರ್ನಾಟಕ ಸಂಘ ಶಾರ್ಜಾವೂ ಇದೆ ರೀತಿಯ ಜಾತ್ಯಾತೀತ ನಿಲುವಿನೊಂದಿಗೆ ಕಾರ್ಯ ನಿರ್ವಹಿಸುವ ಸಂಸ್ತ್ರೆಯಾಗಿದ್ದು, ಈ ಬಾರಿಯ ಅಧ್ಯಕ್ಷರಾಗಿ ಶ್ರೀ ಎಂ ಈ ಮೂಳೂರು, ಕಾರ್ಯದರ್ಶಿಯಾಗಿ ಶ್ರೀ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರಾಗಿ ಶ್ರೀ ನಾವೆಲ್ ಅಲ್ಮೇಡಾ ಆಯ್ಕೆಯಾದದ್ದು ಇದಕ್ಕೆ ನಿದರ್ಶನ ಎಂದು ಹೇಳಿದರು. 

ಮುಖ್ಯ ಗೌರವ ಅತಿಥಿಗಳಾಗಿದ್ದ ಜನಾಬ್ ಫತಾವುಲ್ಲಾ ಶೇಖ್ ತೋನ್ಸೆ ಯವರು ಮಾತನಾಡುತ್ತಾ "ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸುಂದರ ಜಾತ್ಯತೀತ ದೇಶವಾಗಿದ್ದು ಪ್ರಪಂಚದ ಎಲ್ಲ ದೇಶಗಳಲ್ಲಿ ಇರುವಂತೆ ಸಹಜವಾಗಿ ನಮ್ಮ ಭಾರತದಲ್ಲಿಯೂ ಕೆಲವೊಂದು ಸಾಮಾಜಿಕ ಸಮಸ್ಯೆಗಳುಗಳು ಇರುವುದು ಸಹಜ. ಈ ಎಲ್ಲಾ ಸಮಸ್ಯೆಗಳಿಗೆ ಏಕೈಕ ಪರಿಹಾರ ಸಮಾಜವನ್ನು ವಿದ್ಯಾ ಕ್ಷೇತ್ರದಲ್ಲಿ ಮುಂದೆ ಬರುವಂತೆ ಪ್ರೇರೇಪಿಸುವುದು. ಈ ನಿಟ್ಟಿನಲ್ಲಿ ಬಿ.ಸಿ.ಎಫ್. ಸಮಾಜದ ಎಲ್ಲಾ ವರ್ಗಗಳಿಗೆ ವಿದ್ಯಾ ಕ್ಷೇತ್ರದಲ್ಲಿ ಸಹಾಯ ಮಾಡುವ ಪವಿತ್ರ ಕಾರ್ಯ ಹಮ್ಮಿ ಕೊಂಡಿರುವುದು ಶ್ಲಾಘನೀಯ" ಎಂದರು.


ಬಿ.ಸಿ.ಎಫ್.ನ ಉಪಾಧ್ಯಕ್ಷರೂ ಹಾಗೂ ಬಿ.ಸಿ.ಎಫ್.ನ ಸ್ಕಾಲರ್ ಶಿಫ್ ಯೋಜನೆಯ ಅಧ್ಯಕ್ಷರಾದ ಜನಾಬ್ ಎಂ. ಈ. ಮೂಳೂರುರವರು ಪವಿತ್ರ ರಂಜಾನಿನಲ್ಲಿ ನಾವು ಮಾಡುವ ಎಲ್ಲ ಸತ್ಕರ್ಮಗಳನ್ನು ಅಲ್ಲಾಹು ಸ್ವೀಕರಿಸಲಿ ಎಂದು ಪ್ರಾರ್ಥಿಸುತ್ತಾ ಕಳೆದ 20 ವರ್ಷಗಳಿಂದ ಬಿ.ಸಿ.ಎಫ್ ಮಾಡುತ್ತಿರುವ ಸ್ಕಾಲರ್ ಶಿಫ್ ಯೋಜನೆಯ ಬಗ್ಗೆ ಉಲ್ಲೇಖಿಸುತ್ತಾ ಸಾವಿರಾರು ಸಂಖ್ಯೆಯಲ್ಲಿ ಬಿ.ಸಿ.ಎಫ್ ನಿಂದ ಸ್ಕಾಲರ್ ಶಿಫ್ ಮುಖಾಂತರ ತಮ್ಮ ಶಿಕ್ಷಣಕ್ಕೆ ಸಹಾಯ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿ ಡಾಕ್ಟರ್, ಇಂಜಿನಿಯರ್, ಟೀಚರ್, ನರ್ಸ್, ಉಲೇಮಾ ಆಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬರುವ ಬಿ.ಸಿ.ಎಫ್ ಸ್ಕಾಲರ್ ಶಿಫ್ 2022 ಗೆ ಎಲ್ಲರ ಸಹಾಯ ಸಹಕಾರವನ್ನು ಕೋರಿದರು.. 

ಮುಖ್ಯ ಅತಿಥಿಗಳಾಗಿ ಅಲ್ ಹಾಜಿ ತಾಹಾ ಬಾಫಖಿ ತಂಗಳ್, ಹಾಜಿ ಹೈದ್ರೋಸ್ ತಂಗಳ್, ಜನಾಬ್ ಫತಾವುಲ್ಲಾ ಶೇಖ್ ತೋನ್ಸೆ, ಜನಾಬ್ ಅಬೂಸಾಲಿಹ್ , ಜನಾಬ್ ಇಬ್ರಾಹಿಂ ಗಡಿಯಾರ್, ಜನಾಬ್  ಫೈಝಲ್ ತುಂಬೆ ಗ್ರೂಪ್, ಶ್ರೀ ಆನಂದ್ ಬೈಲೂರ್, ಶ್ರೀ ನಾವೆಲ್ ಅಲ್ಮೇಡಾ, ಜನಾಬ್ ಸಾದಿಕ್  ಜನಾಬ್ ಅಹ್ಮದ್  ಅಬ್ರಾರ್, ಜನಾಬ್ ಯೂಸುಫ್ ಅರ್ಲಪದವು,  ಜನಾಬ್ ಮುಇಜ್ ಮುಅಲ್ಲಿಂ, ಜನಾಬ್ ಯೂಸುಫ್ ಬರ್ಮಾವರ್, ಜನಾಬ್ ಶಾರ್ಫ್ರಾಜ್ ಜುಕಾಕೋ, ಜನಾಬ್ ಬಶೀರ್ ಬೊಳುವಾರ್,  ಜನಾಬ್ ಅಶ್ರಫ್ ಹುಸೈನ್  ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಬಿ.ಸಿ.ಎಫ್ ನ ಉಪಾಧ್ಯಕ್ಷರುಗಳಾದ ಜನಾಬ್ ಅಮೀರುದ್ದೀನ್  S I,ಜನಾಬ್ ಅಫೀಕ್ ಹುಸೈನ್,ಕೋಶಾಧಿಕಾರಿ ಜನಾಬ್ ಅಸ್ಲಾಂ ಕಾರಾಜೆ, ಜನಾಬ್ ಯಾಕೂಬ್ DEWA , ಜನಾಬ್ ಉಸ್ಮಾನ್ ಮೂಳೂರು  ಜನಾಬ್ ಸುಲೇಮಾನ್ ಮೂಳೂರು, ಜನಾಬ್ ಇಕ್ಬಾಲ್ ಮೇಫ,  ಜನಾಬ್ ರಿಯಾಜ್ ಸುರತ್ಕಲ್, ಜನಾಬ್ ಅಮೀರ್ ಹಳೆಅಂಗಡಿ, ಜನಾಬ್ ಅಶ್ರಫ್ ಸತ್ತಿಕಲ್, ಜನಾಬ್, ಜನಾಬ್ ರಿಯಸ್ ಸುರತ್ಕಲ್,ಬಿ.ಸಿ.ಎಫ್ ಮಾಧ್ಯಮ ಸಂಚಾಲಕರಾದ ಜನಾಬ್ ನಿಯಾಜ್, ಜನಾಬ್ ಅಶ್ರಫ್ ಜೋಕಟ್ಟೆ, BCF ಲೇಡೀಸ್ ವಿಂಗ್ ಇದರ ರೂವಾರಿ ಮತ್ತು ಇತರ ಎಲ್ಲ ಲೇಡೀಸ್ ವಿಂಗ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.DKSC ಯುಎಇ ಯಾ ಗೌರವಾಧ್ಯಕ್ಷರಾದ ಬಹು:ಅಸ್ಸಯ್ಯದ್ ತಾಹಾ ಬಾಫಳಿ ತಂಗಳ್ ರವರ ಪ್ರಾರ್ಥನೆಯೊಂದಿಗೆ  ಆರಂಭಗೊಂಡ ಕಾರ್ಯಕ್ರಮವನ್ನು ಬಿ.ಸಿ.ಎಫ್ ನ ಉಪಾಧ್ಯಕ್ಷರಾದ ಜನಾಬ್ ಅಫಿಕ್ ಹುಸೈನ್ ರವರು ಧನ್ಯವಾದ ಸಮರ್ಪಣೆ ಸಲ್ಲಿಸಿದರು.


ಜಾಹೀರಾತುಗಳು


Post a Comment

0 Comments