ಯುಎಇ: "ನಮ್ಮವರು ನಮ್ಮೊಂದಿಗೆ" ಎಂಬ ಸಂಕಲ್ಪದೊಂದಿಗೆ ಹೆಮ್ಮೆಯ ದುಬೈ ಕನ್ನಡ ಸಂಘವು ಕಳೆದ ಶನಿವಾರದಂದು ದುಬೈಯ ಅಲ್ ಕೂಸಿನಲ್ಲಿರುವ ಲೇಬರ್ ಕ್ಯಾಂಪಿನಲ್ಲಿ ಅಲ್ಲಿನ ಕಾರ್ಮಿಕರೊಂದಿಗೆ ಸರ್ವ ಧರ್ಮ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು.
ಭಾರತೀಯರು ಸೇರಿ ನೂರಾರು ಜನ ವಿದೇಶಿ ಕಾರ್ಮಿಕರಿಗೂ ಇಫ್ತಾರ್ ಕಿಟ್ ವಿತರಿಸಿದರು.
ಕಳೆದ ಹಲವು ವರ್ಷಗಳಿಂದ ನಡೆಸಿ ಬರುತ್ತಿದ್ದ ಸರ್ವ ಧರ್ಮ ಇಫ್ತಾರ್ ಕಾರ್ಯಕ್ರಮವನ್ನು ಈ ವರ್ಷ ವಿಶಿಷ್ಟವಾಗಿ ಕಾರ್ಮಿಕರೊಂದಿಗೆ ಆಯೋಜಿಸಿದ್ದು ವಿಶೇಷವಾಗಿತ್ತು.
ಇಫ್ತಾರ್ ಕಿಟ್ ವಿತರಣಾ ಕಾರ್ಯದಲ್ಲಿ ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಸುದೀಪ್ ದಾವಣಗೆರೆ,
ಮಾಜಿ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು, ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಮಾಂಬೋಲ್, ತಂಡದ ಮುಖ್ಯ ಕಾರ್ಯದರ್ಶಿ ಶಂಕರ್ ಬೆಳಗಾವಿ,ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಸಮಿತಿ ಸದಸ್ಯರಾದ ಮೊಹೀನುದ್ದೀನ್ ಹುಬ್ಬಳ್ಳಿ, ಅಬ್ದುಲ್ ಹಾದಿ ಕುಂದಾಪುರ, ನಜೀರ ಮಂಡ್ಯ, ಶಿಹಾಬ್ ಮಂಗಳೂರು ಮತ್ತು ಅಸ್ಲಮ್ ಕೊಡಗು ಹಾಗೂ ಪತ್ರಕರ್ತರಾದ ವಿಜಯಕುಮಾರ್ ಶೆಟ್ಟಿ ಹಾಜರಿದ್ದು ಇಫ್ತಾರ್ ಕಿಟ್ ವಿತರಿಸಿದರು.
ಕಳೆದ ವರ್ಷಗಳಲ್ಲಿ ಎಲ್ಲಾ ಧರ್ಮದ ಧರ್ಮ ಗುರುಗಳನ್ನು ಕರೆಸಿ ಸಾಮೂಹಿಕ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.
ಜಾಹೀರಾತುಗಳು









0 Comments