ಕರ್ನಾಟಕ ಕಲ್ಚರಲ್ ಫೌಂಡೇಶನ್ UAE KCF ಅಬು ಧಾಬಿ ಝೋನ್ ಮಹಾ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ


ಯು ಎ ಇ : KCF ಯು ಎ ಇ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಬು ಧಾಬಿ ಝೋನ್ ನ ವಾರ್ಷಿಕ ಮಹಾ ಸಭೆಯು  ಅಲ್ ಬವಾಬ ರೆಸ್ಟೋರೆಂಟ್ ನಲ್ಲಿ  ಜರಗಿತು. ಮಹಾಸಭೆಯ ಅಧ್ಯಕ್ಷತೆ ಯನ್ನು ಹಸೈನಾರ್ ಅಮಾನಿ ಯವರು ವಹಿಸಿಕೊಂಡಿದ್ದು, ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷ ಇಬ್ರಾಹಿಂ ಸಖಾಫಿ ಕೆದುಂಬಾಡಿ ದುಃವಾ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಮಹಾಸಭೆಯ ಚುನಾವಣಾ ವೀಕ್ಷಕರಾಗಿ ರಾಷ್ಟ್ರೀಯ ಸಮಿತಿಯಿಂದ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಮಿ ಮತ್ತು ಇಕ್ಬಾಲ್ ಕಾಜೂರ್ ರವರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ INC  ಕೋಶಾಧಿಖಾರಿ ಅಬ್ದುಲ್ ಹಮೀದ್ ಸಅದಿ ಮತ್ತು ಇಹ್ಸಾನ್ ರಾಷ್ಟ್ರೀಯ ಕಾರ್ಯದರ್ಶಿ  ಶರೀಫ್ ಸಾಲೆತ್ತೂರು  ಆಗಮಿಸಿದ್ದರು.

ಝೋನ್ ಮುಖ್ಯ ಕಾರ್ಯದರ್ಶಿ NK ಸಿದ್ದಿಕ್ ಅಳಿಕೆ ವಾರ್ಷಿಕ ವರದಿಯನ್ನು ಮಂಡಿಸಿದ್ದು, ಝೋನ್ ಕೋಶಾಧಿಕಾರಿ ಮುಹಮ್ಮದಲಿ ಬ್ರೈಟ್ ಮಾರ್ಬಲ್ ಅವರ ಅನುಪಸ್ಥಿತಿಯಲ್ಲಿ ಇಬ್ರಾಹಿಂ ಬ್ರೈಟ್ ಮಾರ್ಬಲ್ ಲೆಕ್ಕ ಪತ್ರವನ್ನು ಮಂಡಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳಿಗೆ ಸಭೆಯಲ್ಲಿ ಅವಿರೋಧವಾದ ಅನುಮೋದನೆಯು ದೊರಕಿತು.

ಝೋನ್ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಚುನಾವಣಾ ವೀಕ್ಷಕರು 2022-2024ರ ನೂತನ ಸಮಿತಿಯನ್ನು ಅವಿರೋಧವಾಗಿ ಆರಿಸಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಹಸೈನಾರ್ ಅಮಾನಿಯವರು ಮರು ಆಯ್ಕೆಗೊಂಡರು.ಪ್ರಧಾನ ಕಾರ್ಯದರ್ಶಿಯಾಗಿ ಕಬೀರ್ ಬಾಯಂಬಾಡಿ ಕೋಶಾಧಿಕಾರಿಯಾಗಿ ನವಾಜ್ ಹಾಜಿ ಕೋಟೆಕಾರ್ ರವರು ಅರ್ಹವಾಗಿಯೇ ಆಯ್ಕೆಯಾದರು.

ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಹಾಫಿಲ್ ಸಯೀದ್ ಹನೀಫಿ , ಕಾರ್ಯದರ್ಶಿಯಾಗಿ ಉಮ್ಮರ್ ಈಶ್ವರಮಂಗಲ,ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಮೂಸ ಮದನಿ ಸಂಪ್ಯ , ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಜ್ ಕೆದಿಲ ,  ಸಾಂತ್ವನ ವಿಭಾಗದ ಅಧ್ಯಕ್ಷರಾಗಿ NK ಸಿದ್ದಿಕ್ ಅಳಿಕೆ, ಕಾರ್ಯದರ್ಶಿಯಾಗಿ ಹಾರಿಸ್ ಸಅದಿ ಮುರ,  ಪ್ರಕಾಶನ ಮತ್ತು ಪ್ರಚಾರ ವಿಭಾಗ ಅಧ್ಯಕ್ಷರಾಗಿ ಹಸ್ಸನ್ ಹಾಜಿ ಚಿಕ್ಕಮಂಗಳೂರು, ಕಾರ್ಯದರ್ಶಿಯಾಗಿ ರಝಕ್ ಸಅದಿ,    ಆಡಳಿತ ಮತ್ತು ಸಾರ್ವಜನಿಕ ಸಂಪರ್ಕ ಅಧ್ಯಕ್ಷರಾಗಿ ಲತೀಫ್ ಕನ್ನಡ್ಕ, ಕಾರ್ಯದರ್ಶಿಯಾಗಿ ಅಶ್ರಫ್ ಸರಳೀಕಟ್ಟೆ ಹಾಗೂ  ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಅಬೂಬಕ್ಕರ್ ಕಂಬಳಬೆಟ್ಟು, ಕಾರ್ಯದರ್ಶಿಯಾಗಿ ಇಮ್ರಾನ್ ಕೆ ಸಿ ರೋಡು ಆಯ್ಕೆಗೊಂಡರು.

ನಂತರ ಅಬ್ದುಲ್ ಹಮೀದ್ PMH ಮತ್ತು ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ರವರು ನೂತನ ಸಮಿತಿಯ ಜವಾಬ್ದಾರಿಯುತ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಅಬ್ದುಲ್ ಜಲೀಲ್ ನಿಝಮಿ  ಮತ್ತು ಅಬ್ದುಲ್ ಕರೀಂ ಮುಸ್ಲಿಯಾರ್ ಕನ್ಯಾರಕೋಡಿ ಯವರು ಪ್ರಾಸ್ತಾವಿಕ ವಾಗಿ ಮಾತನಾಡಿದರೆ, ಮಿಸ್ಬಾಹ್ ತಂಗಳ್,  ಮುಹಮ್ಮದ್ kunji  ಸಖಾಫಿ, ಹಕೀಮ್ ತುರ್ಕಳಿಕೆ  ನೂತನ ಸಮಿತಿಗೆ ಶುಭ ಕೋರಿ ಮಾತನಾಡಿದರು. ಸರ್ವರ ಸಮ್ಮುಖದಲ್ಲಿ ಹಳೆ ಸಮಿತಿಯಿಂದ ನೂತನ  ಸಮಿತಿಗೆ ದಾಖಲೆ ಹಾಗೂ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ NK ಸಿದ್ದಿಕ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿಯಾದ ಕಬೀರ್ ಬಾಯಂಬಾಡಿ ಧನ್ಯವಾದ ಸಮರ್ಪಣೆ ನಡೆಸಿದರು. ಕೊನೆಯಲ್ಲಿ ಮಿಸ್ಬಾಹ್ ತಂಗಳ್ ರವರ ದುಆ ದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.

ಜಾಹೀರಾತು




Post a Comment

0 Comments