"ಮಕ್ಕಳು ಭೀತಿಮುಕ್ತರಾಗಿ ಜ್ಞಾನರ್ಜನೆಗೈಯಬೇಕು":- ಸೋಮಶೇಖರ್ ಜೆ.ಎಸ್.
ಪೆರ್ಲ : "ಮಕ್ಕಳು ಭೀತಿ ಮುಕ್ತರಾಗಿ ಜ್ಞಾನರ್ಜನೆಗೈಯುವಂತಹ ಪೂರಕ ವಾತಾವರಣ ರೂಫಿಸಿಕೊಳ್ಳಲು ಎಲ್ಲರೂ ಸಹಕಾರಿಗಳಾಗಬೇಕು ಎಂದು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಭಿಪ್ರಾಯಪಟ್ಟರು. ಅವರು ಶೇಣಿ ಶ್ರೀಶಾರದಾಂಬ ಎಯುಪಿ ಶಾಲೆಯಲ್ಲಿ ಜರಗಿದ ಎಣ್ಮಕಜೆ ಗ್ರಾ.ಪಂ.ಮಟ್ಟದ 2022-23ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವನ್ನು ಉದ್ಘಾಟಿಸಿ ಮಾತನಾಡುತ್ತಾ ಕಳೆದ ಎರಡು ವರ್ಷಗಳಿಂದ ಕೋರೋನ ರೋಗ ವ್ಯಾಪಕತೆಯ ಭೀತಿಯಲ್ಲಿ ನಲುಗಿದ ಮಕ್ಕಳ ಮನಸ್ಸಿಗೆ ನೂತನ ಶೈಕ್ಷಣಿಕ ವರ್ಷ ಹರುಷ ತರಲೆಂದು ಶುಭ ಹಾರೈಸಿದರು.
ಗ್ರಾ.ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್ ಹಾಗೂ ಪಂ. ಸದಸ್ಯ, ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್,ಶಾಲಾ ಪ್ರಬಂಧಕಿ ಶಾರದ ವೈ,ಬಿಆರ್ ಸಿ ಕುಂಬಳೆಯ ಸುಮಲತಾ ಎಂ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿ.ಸೋಜ,ಮಾತೃ ಸಂಘದ ಅಧ್ಯಕ್ಷೆ ಶಶಿಪ್ರಭಾ ಮೊದಲಾದವರು ಮಾತನಾಡಿದರು.ಈ ಸಂದರ್ಭದಲ್ಲಿ ಸಿಟಿ ಜ್ಯುವೆಲ್ಲರಿ ಪ್ರಾಯೋಜಿಸಿದ ಉಚಿತ ನೋಟ್ ಪುಸ್ತಕಗಳನ್ನು ಒಂದನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಯಿತು.
ವಿದ್ಯಾರ್ಥಿ ಫಾತಿಮತ್ ಹಸ್ವ ಸ್ವಾಗತಿಸಿ ಪ್ರಸೀದಾ ಎ.ನಾಯಕ್ ವಂದಿಸಿದರು. ಆಯಿಷಾತ್ ನಾಫೀಯ ಕಾರ್ಯಕ್ರಮ ನಿರೂಪಿಸಿದರು.



0 Comments