ಯುಎಇ: ಮಂಗಳೂರು ಮೂಲದ ಮಣ್ಣಿನ ಮಗನೋರ್ವ ಅರಬ್ ರಾಷ್ಟ್ರದ ಜನಪ್ರಿಯ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ತುಳುನಾಡಿಗೆ ಕೀರ್ತಿ ತಂದಿದ್ದಾರೆ.
ಯುಎಇಯ ಸಿಲಿಕಾನ್ ಓಯಸಿಸ್‌ನ ರಾಡಿಸನ್ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ಪುರುಷರು ಮತ್ತು ಮಹಿಳೆಯರ ಸೌಂದರ್ಯ ಸ್ಪರ್ಧೆಯ “ಮಿಸ್ಟರ್ ಅಂಡ್ ಮಿಸೆಸ್ ಯುಎಇ ಇಂಟರ್‌ನ್ಯಾಶನಲ್ ಪದಕವನ್ನು ಮಂಗಳೂರಿನ ಗೌತಮ್ ಬಂಗೇರ ತನ್ನದಾಗಿಸಿಕೊಂಡಿದ್ದಾರೆ.
ನಟಿ ಮತ್ತು ರೂಪದರ್ಶಿ ಮೀನಾ ಅಸ್ರಾನಿ ಅವರ ನೇತೃತ್ವದ ಬೀಯಿಂಗ್ ಮುಸ್ಕಾನ್ ಸಂಸ್ಥೆಯು ಈ ಸ್ಪರ್ಧೆಯನ್ನು ಆಯೋಜಿಸಿದ್ದು ಗೌತಮ್ ಬಂಗೇರ ಇಂಟರ್‌ನ್ಯಾಶನಲ್ ಪ್ರಶಸ್ತಿ ಗಳಿಸಿದರು.
ಪ್ರತಿಷ್ಠಿತ ಸ್ಪ್ರಿಂಗ್‌ಡೇಲ್ಸ್ ದುಬೈನಲ್ಲಿ ಶಿಕ್ಷಕರಾಗಿರುವ ಗೌತಮ್ ಬಂಗೇರ ಅವರು ಒರ್ವ ಅಪ್ರತಿಮ ನೃತ್ಯ ಸಂಯೋಜಕ ಮತ್ತು ಅನುಭವಿ ನೃತ್ಯಗಾರರಾಗಿದ್ದು ಹಲವರಿಗೆ ತರಬೇತು ನೀಡುತ್ತಿದ್ದಾರೆ. ಇವರು ದುಬೈನಲ್ಲಿ ಸೋಲ್ ಮತ್ತು ಬೀಟ್ಸ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಗೌತಮ್ ಬಂಗೇರ ಯುಎಇ ಫ್ಯಾಶನ್ ಉದ್ಯಮದಲ್ಲಿ ಒರ್ವ ನಟನಾಗಿ, ರೂಪದರ್ಶಿಯಾಗಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ .
ಯುಎಇ ಡ್ಯಾನ್ಸ್ ರಿಯಾಲಿಟಿ ಶೋ "ಸ್ಟ್ರೈಕರ್ಸ್ ಡ್ಯಾನ್ಸ್ ಚಾಲೆಂಜ್" ನಲ್ಲಿ ಟಾಪ್ ಫೈನಲಿಸ್ಟ್ ಪ್ರಶಸ್ತಿ ಪಡೆದಿರುವುದು ಇವರ ಕಲಾ ರಂಗದ ಸಾಧನೆಯಾಗಿದೆ. ರಾಯಲ್ ಆಸ್ಕಾಟ್ ಎಂಟರ್‌ಪ್ರೈಸ್‌ನ ಪ್ರತಿಭಾ ಸ್ಪರ್ಧೆಯಾದ ರೂಫ್‌ಟಾಪ್‌ನಲ್ಲಿ ಅವರು ಶೋ-ಸ್ಟೀಲರ್ ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ. ದುಬೈನಲ್ಲಿ ಗೌರವಾನ್ವಿತ ಶೇಖ್ ಸುಹೇಲ್ ಮುಹಮ್ಮದ್ ಅವರಿಂದ ಸನ್ಮಾನಿತರಾಗಿರುವುದು ಹಾಗೂ ಮಂಗಳೂರಿನ ಪುರಭವನದಲ್ಲಿ ಪ್ರದರ್ಶನ ಕಲೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸಿ ಗಾಣಿಗ ಸಂಗಮದ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಪಾತ್ರರಾಗಿರುವುದು ಜೀವನದ ಅತ್ಯಂತ ಸಂತಸದ ಕ್ಷಣ ಎಂದಿದ್ದಾರೆ.
ಇದೀಗ ಇವರ ಸಾಧನೆಯನ್ನು ಗುರುತಿಸಿ ಮಂಗಳೂರು ಮೂಲದ ದುಬೈ ಉದ್ಯಮಿಯಾಗಿ ಶಾರ್ಜಾದಲ್ಲಿರುವ ಪ್ಯಾಮೀಲಿ ಫುಡ್ಸ್ ಬೇಕರಿಯಲ್ಲಿ ಗೌತಮ್ ಬಂಗೇರ ರವರನ್ನು ಹೂಗುಚ್ಛ ನೀಡಿ ಕೇಕ್ ಕತ್ತರಿಸುವ ಮೂಲಕ ಅಭಿನಂದಿಸಲಾಯಿತು.






0 Comments