ಅಂತಲ ಮುಗೇರ ಚಾವಡಿ ಅಭಿವೃದ್ಧಿಗೆ ಕೊಡ್ಯಮ್ಮೆ ಅರಮನೆಯಿಂದ ಅನುಮತಿ


ಬದಿಯಡ್ಕ:ಇತಿಹಾಸ ಪ್ರಸಿದ್ಧ ತುಳುನಾಡಿನ ಕೊಡ್ಯಮ್ಮೆ ಅರಮನೆಗೆ ಅಂತಲ ಮುಗೇರ ಚಾವಡಿಯ ಅಭಿವೃದ್ಧಿ ಹಾಗೂ ಆಡಳಿತ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ನೀರ್ಚಾಲು ಕನ್ನೆಪ್ಪಾಡಿ ಬಳಿ ಪುನರ್ ನಿರ್ಮಾಣಗೊಳ್ಳುತ್ತಿರುವ  ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ಯೋಜನೆಗೆ ಪ್ರಾಚೀನ ಪದ್ಧತಿಯಂತೆ ರಾಜ ಮನೆತನದಿಂದ ಅನುಮತಿ ಕೋರಲಾಯಿತು. 


ಈ ಸಂದರ್ಭದಲ್ಲಿ ಕೊಡ್ಯಮ್ಮೆ ಅರಮನೆಯ ರಾಜ ಕೃಷ್ಣ ರಾಜ ಬಲ್ಲಾಳ್, ಸುದರ್ಶನ ಪಾಣಿ ಬಲ್ಲಾಳ್, 
ಅಂತಲ ಮುಗೇರ ಚಾವಡಿಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಐ.ಲಕ್ಷ್ಮಣ ಪೆರಿಯಡ್ಕ, ಉಪಾಧ್ಯಕ್ಷ ಬಾಲಚಂದ್ರ , ಸೇವಾ ಸಮಿತಿ ಅಧ್ಯಕ್ಷ ಕೆ.ಕೆ.ಸ್ವಾಮಿಕೃಪಾ, ಶಂಕರ ಸ್ವಾಮಿಕೃಪಾ,ವಸಂತ ಕನ್ನೆಪಾಡಿ, ಕಿಶೋರ್ ಕುಮಾರ್ ಕೆ, ಯಜ್ಞೇಶ್ ಕನ್ನೆಪ್ಪಾಡಿ, ಕೊಡ್ಯಮ್ಮೆ ಕಾಪಾಡ ಐತ್ತಪ್ಪ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು




Post a Comment

0 Comments