ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ 14ನೇ ಪಂಚ ವಾರ್ಷಿಕ ಪದ್ಧತಿಯ 2022-2023ನೇ ವರ್ಷದ ಅಭಿವೃದ್ಧಿ ಸೆಮಿನಾರ್ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತು ಅಧ್ಯಕ್ಷೆ ಶೆಮೀನಾ ಟೀಚರ್ ಸೆಮಿನಾರ್ ಉದ್ಘಾಟಿಸಿದರು. ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್ ಅಭಿವೃದ್ಧಿ ಕರಡು ಪತ್ರ ಮಂಡಿಸಿದರು.
ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್,ಜಿ.ಪಂ.ಸದಸ್ಯ ನಾರಾಯಣ ನಾಯ್ಕ, ಬ್ಲೋಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್, ವಿವಿಧ ವಾರ್ಡ್ ಸದಸ್ಯರಾದ ಮಹೇಶ್ ಭಟ್, ಶಶಿಧರ್, ರಾಮಚಂದ್ರ ಎಂ, ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ರಾಧಾಕೃಷ್ಣ ನಾಯಕ್,ಕುಸುಮಾವತಿ, ಝರಿನಾ ಎಂ, ಉಷಾ, ಆಶಾಲತ,ಇಂದಿರಾ,ರಮ್ಲ ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ.ಕಾರ್ಯದರ್ಶಿ ಅನ್ವರ್ ರಹಮಾನ್ ಸ್ವಾಗತಿಸಿ ಹೆಡ್ ಕ್ಲಾರ್ಕ್ ಪ್ರೇಮನ್ ವಂದಿಸಿದರು.
ಜಾಹೀರಾತು




0 Comments