ಮಂಜೇಶ್ವರ: ಮಂಗಳೂರಿನಲ್ಲಿ ಹತ್ಯೆಗೀಡಾದ ಮಸೂದ್ ಮತ್ತು ಫಾಝಿಲ್ ಅವರ ಕುಟುಂಬಗಳಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ತಲಾ 30 ಲಕ್ಷ ಪರಿಹಾರ ಘೋಷಿಸಿರುವುದು ತುಂಬಾ ಪ್ರಶಂಸಿಸಬೇಕಾದ ಹಾಗೂ ಅಭಿನಂಧಿಸಬೇಕಾದ ಕಾರ್ಯವೆಂದು ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯತ್ ಅಧ್ಯಕ್ಷ, ಹಾಗೂ ಉದಯವರ ಸಾವಿರ ಜಮಾತ್ ಅಧ್ಯಕ್ಷರಾದ ಸೈಯದ್ ಯು.ಕೆ.ಸೈಫುಲ್ಲಾ ತಂಗಳವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೊಲೆಗಳ ನಂತರ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ತಮ್ಮ ಪಕ್ಷದ ಬಿಜೆಪಿ ಕಾರ್ಯಕರ್ತರ ಮನೆಗೆ ಮಾತ್ರ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ರೂ 25 ಲಕ್ಷ ಧನ ಸಹಾಯ ಘೋಷಿಸಿದರು. ಆದರೆ ಇದುವರೆಗೂ ಯಾವುದೇ ರಾಜಕೀಯ ಪಕ್ಷದಲ್ಲಿ ದುಡಿಯದ ಅಮಾಯಕರಾದ ಮಶೂದ್' ಫಾಝಿಲ್ ರವರ ಮನೆಗೆ ಬೇಟಿ ನೀಡದ್ದು ಮತ್ತು ಕುಟುಂಬಕ್ಕೆ ಧನ ಸಹಾಯ ಘೋಷಿಸದಿರುವುದು ಕರ್ನಾಟಕ ಮುಖ್ಯಮಂತ್ರಿಯ ಮಲತಾಯಿ ಧೋರಣೆಯಾಗಿದೆ.ಈ ಪಕ್ಷಪಾತಿ ಕೃತ್ಯ ರಾಜ ಧರ್ಮವಲ್ಲ. ಈ ಹಿಂದೆಯೂ ಬಿ.ಜೆ.ಪಿ ಆಡಳಿತಾರೂಢ ಕರ್ನಾಟಕ ಸರ್ಕಾರದಿಂದ ಇಂತಹ ಕ್ರಮಗಳು ನಡೆದಿವೆ.ಕಳೆದ ಕೊರೋನಾ ಅವಧಿಯಲ್ಲಿ ಕೇರಳ-ಕರ್ನಾಟಕ ಗಡಿಭಾಗವಾದ ತಲಪ್ಪಾಡಿಯಲ್ಲಿ ಕೇರಳದ ನಿವಾಸಿಗಳು ಮಂಗಳೂರು ಕಡೆ ಪ್ರವೇಶಿಸದಂತೆ ಈ ರೀತಿಯ ಪಕ್ಷಪಾತದ ಕ್ರಮವೇ ಕಾರಣವಾಗಿತ್ತು. ಎನ್.ಆರ್.ಸಿ, ಮತ್ತು ಸಿ.ಎ.ಎ ವಿರುದ್ಧ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅನ್ಯಾಯವಾಗಿ ಗುಂಡು ಹಾರಿಸಿ ನಂತರ ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬವನ್ನು ಕಡೆಗಣಿಸಿದ್ದು ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ಸ್ವಭಾವ ಎಂದು ಸೈಫುಲ್ಲಾ ತಂಗಳ್ ಆರೋಪಿಸಿದರು.
ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಅಮಾಯಕರಾದ ಮಶೂದ್, ಫಾಝಿಲ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ನಡೆಸುತ್ತಿರುವ ನಿಧಿ ಸಂಗ್ರಹ ಅಭಿಯಾನವನ್ನು ವಿಜಯಗೊಳಿಸಬೇಕೆಂದು ಯು.ಕೆ. ಸೈಫುಲ್ಲಾ ತಂಗಲ್ ಕೇಳಿಕೊಂಡರು.
ಜಾಹೀರಾತು



0 Comments