ದುಬೈ: ತುಳು ರಂಗಭೂಮಿಯಲ್ಲಿ ಸಾಂಸಾರಿಕ ಕ್ರಾಂತಿ ಸೃಷ್ಟಿಸಿದ ವಿಜಯ ಕುಮಾರ್ ಕೊಡಿಯಲ್ ಬೈಲ್ ರಚಿಸಿದ ಕುಟುಂಬ ತುಳು ಸಾಂಸಾರಿಕ ಹಾಸ್ಯಮಯ ನಾಟಕ ದುಬೈಯಲ್ಲಿ ಪ್ರದರ್ಶನವಾಗುವ ಮೂಲಕ ಜನ ಮನ ಸೆಳೆಯಲು ಸಜ್ಜಾಗಿದೆ.
ಗಮ್ಮತ್ ಕಲಾವಿದೆರ್ ಯುಎಇ ಅವರ ಹತ್ತನೇ ವರ್ಷದ ಕಲಾ ಕಾಣಿಕೆಯಾಗಿ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಸೆ.18ರಂದು ದುಬೈಯ ಎಮಿರೆಟ್ಸ್ ಥೀಯೇಟರ್‌ನಲ್ಲಿ ಸಂಜೆ 4.30ರಿಂದ ಪ್ರದರ್ಶನ ಜರಗಲಿದೆ. ರಂಗ ಸಾರಥಿ ವಿಶ್ವನಾಥ ಶೆಟ್ಟಿ ದುಬೈ ನಿರ್ದೇಶನದಲ್ಲಿ ಮೂಡಿ ಬರಲಿರುವ ನಾಟಕಕ್ಕೆ ಎ.ಕೆ.ವಿಜಯ್ ಕೋಕಿಲ ಸಂಗೀತ ನೀಡಲಿದ್ದಾರೆ.
ಕಲಾ ಸಂಗಮ ಮಂಗಳೂರು ಸಂಪೂರ್ಣ ಸಹಕಾರದಲ್ಲಿ ಪ್ರದರ್ಶನಗೊಳ್ಳುವ ನಾಟಕದ ಟಿಕೇಟು ದರ 50 ರೂ. ಹಾಗೂ 30 ರೂ. ಆಗಿರುತ್ತದೆ.
ಹೆಚ್ಚಿನ ವಿವರಗಳಿಗೆ 0527601947,052406550,0529157825 ನಂಬ್ರವನ್ನು ಸಂಪರ್ಕಿಸಲು ಕೋರಲಾಗಿದೆ.
ದುಬೈಯಲ್ಲಿರುವ ಎಲ್ಲಾ ನಾಟಕ ಪ್ರೇಮಿಗಳು,ತುಳು ಅಭಿಮಾನಿಗಳು ನಾಟಕ ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದು ಗಮ್ಮತ್ ಕಲಾವಿದೆರ್ ಅಧ್ಯಕ್ಷ ರಾಜೇಶ್ ಕುತ್ತಾರ್ ವಿನಂತಿಸಿದ್ದಾರೆ.
ಜಾಹೀರಾತು



0 Comments