ಪೆರ್ಲ: ನೇತಾಜಿ ಸಾರ್ವಜನಿಕ ಗ್ರಂಥಾಲಯದ ನೇತೃತ್ವದಲ್ಲಿ ಆಜಾದಿಕ ಅಮೃತ್ ವರ್ಷಚಾರಣೆ ಅಂಗವಾಗಿ "ರಾಷ್ಟ್ರೀಯ ಭಾವೈಕ್ಯತಾ ಕಾವ್ಯ ಲಹರಿ -2022"ಎಂಬ ಅಂತರ್ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ಏಣ್ಮಕಜೆ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಜರಗಿತು.ಪ್ರಸಿದ್ಧ ಬಹುಭಾಷ ಸಾಹಿತಿ, ಉಪನ್ಯಾಸಕ ಶ್ರೀ ರಘು ಇಡ್ಕಿದು ಅವರ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಎಣ್ಮಕಜೆ ಗ್ರಾಮಪಂಚಾಯತ್ ಅಧ್ಯಕ್ಷ ಸೋಮಶೇಖರ, ಜೆ, ಯಸ್, ಭಾಗವಹಿಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ನ ಉದಯ ಸಾರಂಗ್ ,ನೇತಾಜಿ ಗ್ರಂಥಾಲಯದ ಅಧ್ಯಕ್ಷ ರಾಮಕೃಷ್ಣ ರೈ ಕುದ್ವ, ಉಪಾಧ್ಯಕ್ಷ ಸಂಜೀವ ಸಿ,ಯಚ್, ಉಪಸ್ಥಿತರಿದ್ದರು. ಕಾರ್ಯದರ್ಶಿ,ಕವಯಿತ್ರಿ ವನಜಾಕ್ಷಿ ಚೇಂಬ್ರಕಾನ ಸ್ವಾಗತಿಸಿ ಜತೆ ಕಾರ್ಯದರ್ಶಿ ವಿಶ್ವರಾಜ್ ವಂದಿಸಿದರು.



0 Comments