ಕರಂದಕ್ಕಾಡಿನ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಶ್ರೀ ರಾಮ ಕಥಾ ಸತ್ಸಂಗ


 ಕಾಸರಗೋಡು:  ಶಿವಾಜಿ ನಗರ ಕರಂದಕ್ಕಾಡಿನ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ರಾಮಾಯಣ ಮಾಸಾಚರಣೆಯ ಅಂಗವಾಗಿ ಮೂರು ದಿನಗಳ ಕಾಲ ಸಂಜೆ ಭಜನೆಯೊಂದಿಗೆ "ಶ್ರೀ ರಾಮ ಕಥಾ ಸತ್ಸಂಗ" ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಇವರು  ರಮಾಯಣದ ತತ್ವಾದರ್ಶವನ್ನು ಶ್ಲೋಕ, ಸಂಕೀರ್ತನೆಯೊಂದಿಗೆ ರಾಮಾಯಣ ಪ್ರವಚನದ ಮೂಲಕ ಸೇರಿದ ಜನ ಸಮೂಹವನ್ನು ಭಕ್ತಿಯಲ್ಲಿ ತಲ್ಲೀನಗೊಳಿಸಿದರು. 


ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ(ರಿ) ಶ್ರೀ ವಿಶ್ವಕರ್ಮ ಯುವಕ ಸಂಘ ಮತ್ತು ಶ್ರೀ ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಪ್ರತೀ ದಿನ ಪ್ರಸಾದ ಹಾಗೂ ಉಪಹಾರದ ವ್ಯವಸ್ಥೆಯನ್ನು ಉಪ ಸಮಿತಿ ಮತ್ತು ವ್ಯಕ್ತಿಗಳ ಪ್ರಾಯೋಜಕತ್ವದಲ್ಲಿ ಮಾಡಲಾಯಿತು.

ಜಾಹೀರಾತು


Post a Comment

0 Comments