ಮಂಜೇಶ್ವರ : ಮಂಜೇಶ್ವರ ಪಂಚಾಯತ್ ಮುಸ್ಲಿಂ ಯೂತ್ ಲೀಗ್ ಸಮಿತಿಯ ನೇತೃತ್ವದಲ್ಲಿ ಸೀದಿ ಸಾಹಿಬ್ ಅಕಾಡೆಮಿ ಪಾಠಶಾಲೆ ಪ್ರಾರಂಭವಾಯಿತು.
ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮಿತಿಯ ಕರೆಯಂತೆ ಕಾರ್ಯಕರ್ತರಿಗೆ ಪಕ್ಷದ ತರಗತಿಗಳನ್ನು ನೀಡುವ ಅಂಗವಾಗಿ ಸೀದಿ ಸಾಹಿಬ್ ಅಕಾಡೆಮಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತು.
ಮಂಜೇಶ್ವರ ಪಂಚಾಯತ್‌ನ ಎಪ್ಪತ್ತೈದು ವಿದ್ಯಾರ್ಥಿಗಳು ಪ್ರಸ್ತುತ ನೋಂದಾಯಿಸಿಕೊಂಡಿದ್ದಾರೆ. ಕೋರ್ಸ್ ಆರು ತಿಂಗಳ ಅವಧಿಯದ್ದಾಗಿರುತ್ತದೆ.
ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಿತಿ ಸಾಹಿಬ್ ಅಕಾಡೆಮಿಯು ಪ್ರಮಾಣಪತ್ರವನ್ನು ನೀಡುತ್ತದೆ.
ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಉಪಾಧ್ಯಕ್ಷ ಮುಕ್ತಾರ್ ಧ್ವಜಾರೋಹಣ ನೆರವೇರಿಸಿ ವಿದ್ಯಾಸಂಸ್ಥೆಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಮಂಜೇಶ್ವರ ಪಂಚಾಯತ್ ಮುಸ್ಲಿಂ ಲೀಗ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಗಳ್ ಉದ್ಘಾಟಿಸಿದರು. ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಹನೀಫ್ ಕುಚಿಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಾಪಕರಾದ ಝುಬೈರ್ ಮಾಸ್ಟರ್ ಮತ್ತು ಇಲ್ಯಾಸ್ ಹುದವಿ ತರಗತಿಗಳನ್ನು ನಡೆಸಿಕೊಟ್ಟರು. ಮುಸ್ಲಿಂ ಲೀಗ್ ಪಂಚಾಯತ್ ಪ್ರ: ಕಾರ್ಯದರ್ಶಿ ಅಬ್ದುಲ್ಲಾ ಕಜೆ, ಕೋಶಾಧಿಕಾರಿ ಮೊಯ್ದು ಪ್ರಿಯಾ, ಯೂತ್ ಲೀಗ್ ಪದಾಧಿಕಾರಿಗಳಾದ ನಾಸಿರ್ ಇಡಿಯಾ, ಫಾರೂಕ್ ಚೆಕ್ ಪೋಸ್ಟ್, ರಿಯಾಜ್ ಬಾಚಲಿಕ, ಸಮದ್ ಅರಿಮಲ ಮಾತನಾಡಿದರು.
ಮುಬಾರಕ್ ಗುಡ್ಡಕೇರಿ ಸ್ವಾಗತಿಸಿ, ರಿಯಾಝ್ ಮೌಲಾನಾ ರೋಡ್ ಧನ್ಯವಾದವಿತ್ತರು.




0 Comments