ಪೇಟೆ ಶ್ರೀವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟದ ಪೂರ್ವಭಾವಿ ಸಭೆ


ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 16ರಿಂದ 23ರವರೆಗೆ ನಡೆಯಲಿರುವ ಭಜನಾ ಕಮ್ಮಟದ ಪೂರ್ವಭಾವಿ ಸಭೆಯು ಪೇಟೆ ಶ್ರೀವೆಂಕಟ್ರಮಣ ದೇವಸ್ಥಾನದಲ್ಲಿ ಜರಗಿತು. 


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ , ಧರ್ಮಸ್ಥಳದ ಕಾರ್ಯದರ್ಶಿಯವರಾದ  ಪುರುಷೋತ್ತಮ ಪಿ.ಕೆ. ರವರು ದೀಪ ಬೆಳಗಿಸಿ ಭಜನಾ ಕಮ್ಮಟದ ಬಗ್ಗೆ ಮಾರ್ಗದರ್ಶನ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡು ಭಜನಾ ಪರಿಷತ್ ನ ಅಧ್ಯಕ್ಷರಾದ  ವೆಂಕಟರಮಣ ಹೊಳ್ಳರವರು ವಹಿಸಿದ್ದು ಮಂಜೇಶ್ವರ ಭಜನಾ ಪರಿಷತ್ ನ ಅಧ್ಯಕ್ಷರಾದ  ದಿನೇಶ್ ಚೆರುಗೋಳಿಯವರು, ತಾಲೂಕುಗಳ ಪರಿಷತ್ ಕಾರ್ಯದರ್ಶಿಗಳಾದ  ರಾಮಕೃಷ್ಣ ಸಂತಡ್ಕ, ಪದ್ಮನಾಭ ಆಚಾರ್ಯ, ಕೇಂದ್ರ ಕಛೇರಿ ಯೋಜನಾಧಿಕಾರಿ ಶ್ರೀ ದೀನ್ ರಾಜ್ ರವರು ಹಾಗೂ ಎರಡು ತಾಲೂಕುಗಳ  ಸುಮಾರು 15 ಭಜನಾಮಂಡಳಿಗಳ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಾಹೀರಾತು



Post a Comment

0 Comments