ಮಂಜೇಶ್ವರ: ಸಾಹಿತ್ಯ,ಕಲೆ, ಸಾಂಸ್ಕೃತಿಕ ,ಸಂಗೀತ ಹಿನ್ನೆಲೆ ಯ ಪ್ರತೀಕ ಕಲಾಕುಂಚ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ದಾವಣಗೆರೆ ಯ ಸಂಯುಕ್ತ ಆಶ್ರಯದಲ್ಲಿ ಕನ್ನಡದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೊಡಮಾಡುವ 2021-22ನೇ ಕನ್ನಡ ಕೌಸ್ತುಭ ಜಿಲ್ಲಾ ಪ್ರಶಸ್ತಿಗೆ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ಕೊಂಡೆವೂರು ಇಲ್ಲಿನ ವಿದ್ಯಾರ್ಥಿಯಾದ ಕುಮಾರಿ ಶ್ರಾವ್ಯ ಆಯ್ಕೆಯಾಗಿದ್ದಾಳೆ.
ಉಪ್ಪಳ ಸಮೀಪ ಬೇಕೂರಿನ ರಾಜೇಶ್ ಮತ್ತು ವಿಜೇತ ದಂಪತಿಯ ಪುತ್ರಿ ಯಾದ ಶ್ರಾವ್ಯ ಹಲವಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲೂ ಸೈ ಎನಿಸಿದ ಪ್ರತಿಭಾನ್ವಿತೆ.
ಹಲವಾರು ವಿದ್ಯಾರ್ಥಿಗಳ ಜೊತೆ ಈಕೆಗೆ ಅತ್ಯಧಿಕ ಅಂಕ ಪಡೆದುದರಿಂದ ಈ ಪ್ರಶಸ್ತಿ ಲಭಿಸಿದೆ.ಹಲವು ವಿದ್ಯಾಪೀಠ ದ ಸಾಧನೆಯಲ್ಲಿ ಕೊಂಡೆವೂರು ತನ್ನದೇ ಪ್ರಸಿದ್ಧಿಯ ಮೂಲಕ ವಿದ್ಯಾಕ್ಷೇತ್ರಕ್ಕೂ ಹೊಸ ದಾಖಲೆಯತ್ತ ಇದೂ ಒಂದು ಇತಿಹಾಸ ಬರೆಯುವಂತಿದೆ.
ಮಂಜೇಶ್ವರ ಇದೀಗ ಉಪ್ಪಳದ ಕುವರಿ ವಿದ್ಯಾರ್ಥಿಯ ಈ ಸಾಧನೆ ದಾವಣಗೆರೆಯ ವರೆಗೂ ಪಸರಿಸಿದ್ದು
ಸದ್ದಿಲ್ಲದೆ ಸಾಧನೆ ಮಾಡುವ ಅನೇಕರಿಗೆ ಈ ವಿದ್ಯಾರ್ಥಿಯೇ ಮಾದರಿಯಾಗಲಿ ಎನ್ನುವುದೇ ಹಾರೈಕೆ.


0 Comments