ಮಧೂರುದ ಮಹಿಮೆ ತುಳು ಭಕ್ತಿಗೀತೆಯ ವಿಡಿಯೋ ಹಾಡು ಬಿಡುಗಡೆ


 ಮಂಜೇಶ್ವರ: ಖ್ಯಾತ ಭಕ್ತಿಗೀತೆ ರಚನೆಗಾರ,ಸಾಹಿತಿ ಜನಾರ್ಧನ‌ ಆಚಾರ್ ಮಂಜೇಶ್ವರ ರಚಿಸಿ ನಿರ್ಮಿಸಿದ ಮಧೂರುದ ಮಹಿಮೆ ಎಂಬ ವಿಡಿಯೋ ಹಾಡು ಚತುರ್ಥಿಗೆ ಮುಂಚಿತವಾಗಿ ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದಲಿ ಬಿಡುಗಡೆಗೊಂಡಿತು.  ಕ್ಷೇತ್ರದ ಅರ್ಚಕರಾದ ತಿರುಮಲೇಶ್ ಆಚಾರ್ ಬಿಡುಗಡೆಗೊಳಿಸಿದರು.

https://youtu.be/Zgd89sp55x4

ಈ ಲಿಂಕ್ ಓಪನ್ ಮಾಡಿ ವಿಡಿಯೋ ವೀಕ್ಷಿಸಿ

 ಸಾಮಾಜಿಕ ಮುಂದಾಳು ಅವಿನಾಶ್ ಹೆಗಡೆ, ಸಾಹಿತಿ ಜನಾರ್ದನ ಆಚಾರ್ ಹಾಗೂ ಗಾಯಕ ದರ್ಶಕ್ ಭಾಸ್ಕರ್ ಉಪಸ್ಥಿತರಿದ್ದರು. ಮಂಜೇಶ್ವರ ಅಸುಪಾಸಿನ ಹಲವು ಕ್ಷೇತ್ರಗಳ ಭಕ್ತಿಗೀತೆಗಳನ್ನು ಜನಾರ್ಧನ ಆಚಾರ್ಯ ರಚಿಸಿ ಪ್ರಸರಪಡಿಸಿದ್ದಾರೆ. 

https://youtu.be/Zgd89sp55x4

ಈ ಲಿಂಕ್ ಓಪನ್ ಮಾಡಿ ವಿಡಿಯೋ ವೀಕ್ಷಿಸಿ


ಎಸ್.ಆರ್.ಜನಾರ್ಧನ ಆಚಾರ್ಯ  ಸಾಹಿತ್ಯ ರಚಿಸಿ ರಾಗ ಸಂಯೋಜನೆಗೈದ ಹಾಡನ್ನು ಯುವ ಗಾಯಕ ದರ್ಶಕ್ ಭಾಸ್ಕರ್ ಹಾಡಿದ್ದಾರೆ. ವಿರೇಂದ್ರ ಸುವರ್ಣ ಅವರ ಸುಂದರ ಛಾಯಾಗ್ರಹಣದಲ್ಲಿ ಮೂಡಿ ಬಂದಿರುವ ತುಳು ಭಕ್ತಿಗೀತೆಗೆ ಗುರು ಬಾಯಾರ್ ಸಂಗೀತ ಸಂಯೋಜನೆಗೈದಿದ್ದಾರೆ.

Post a Comment

0 Comments