ದುಬೈಯಲ್ಲಿ ವೈವಿಧ್ಯತೆ ಮೆರೆದ ತೀಯಾ ಕುಟುಂಬ ದಿನ 2022

 


ದುಬೈ:  ತೀಯಾ ಸಮಾಜ ಯುಎಇ ಇದರ ವತಿಯಿಂದ "ತೀಯಾ ಕುಟುಂಬ ದಿನ 2022" ಇತ್ತೀಚಿಗೆ ನಗರದ ಪರ್ಲ್ಸ್ ವಿಸ್ಡಮ್ ಸ್ಕೂಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತ್ತು.

      ಬಿಲ್ಲವ ಫ್ಯಾಮಿಲಿ ದುಬೈಯ ಮಾಜಿ ಅಧ್ಯಕ್ಷರಾದ ಸತೀಶ್ ಪೂಜಾರಿ, ಶ್ರೀಮತಿ ಸುವರ್ಣ ಸತೀಶ್ ಪೂಜಾರಿ, ಸಂಸ್ಥೆಯ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆಯರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ವೇಳೆ ಸಮಾಜಕ್ಕೆ ನಿಸ್ವಾರ್ಥ ನಿರಂತರ ಕೊಡುಗೆ ನೀಡುತ್ತಿರುವ ಸತೀಶ್ ಪೂಜಾರಿ ಮತ್ತು ಸುರ್ವರ್ಣ ಸತೀಶ್ ಪೂಜಾರಿ ಅವರನ್ನು ತೀಯಾ ಸಮಾಜದ ಪರವಾಗಿ ಸನ್ಮಾನಿಸಲಾಯಿತು.

"ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿಗಳ ಉಪದೇಶದಂತೆ ತೀಯಾ ಮತ್ತು ಬಿಲ್ಲವರು ಒಂದೇ, ನಮ್ಮ ಸಮುದಾಯವನ್ನು ಬಲಪಡಿಸಲು ನಾವು ಒಂದಾಗಬೇಕು ಮತ್ತು ಉತ್ತಮ ಸಮಾಜಕ್ಕಾಗಿ ಪರಸ್ಪರ ಸಹಾಯ ಮಾಡುವ ಅಗತ್ಯವಿದೆ" ಎಂದು ಸತೀಶ್ ಪೂಜಾರಿ ಹೇಳಿದರು.









ಮಾಸ್ಟರ್ ದಕ್ಷಿತ್ ಪ್ರೇಮ್ಜಿತ್ ಮತ್ತು ಬ್ರಾಹ್ಮಿ ಶ್ರೀನಿವಾಸ್ ಕೋಟ್ಯಾನ್ ಅವರು ಶ್ಲೋಕಗಳನ್ನು ನಿರೂಪಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು, ನಂತರ ವೈವಿಧ್ಯಮಯ ನೃತ್ಯಗಳು, ತುಳು ಸ್ಟ್ಯಾಂಡ್-ಅಪ್ ಕಾಮಿಡಿ, ಗಾಯನ ಪ್ರದರ್ಶನ,ಹುಲಿ ವೇಷ ಕುಣಿತ ಪ್ರೇಕ್ಷಕರನ್ನು ಆಕರ್ಷಿಸಿದವು.ಸೌಮ್ಯ ಸಂದೀಪ್ ಮತ್ತು ಗೀತಾ ರಾಜೇಶ್ ಅವರು ತಮ್ಮ ವೈವಿಧ್ಯಮಯ ವರ್ಣಚಿತ್ರಗಳನ್ನು ಪ್ರದರ್ಶಿಸಿದರು.ಹಿರಿಯ ಸದಸ್ಯರಾದ ಧರ್ಮೇಂದ್ರ ಬಂಗೇರ ಮತ್ತು ರಚನಾ ರಾಜೀವ ಇವರು ರಸಪ್ರಶ್ನೆ ಕಾರ್ಯಕ್ರಮವನ್ನು ಸಂಯೋಜಿಸಿದರು. ಅಮರ್ ಉಮೇಶ್ ನಂತೂರು ಮತ್ತು ಮಹೇಶ್ ರಾಜ್ ಸಂಗಿತ ಮತ್ತು ಆಡಿಯೋ ವ್ಯವಸ್ಥೆಯಲ್ಲಿ ಸಹಕರಿಸಿದರು. 

ತೀಯಾ ಸಮಾಜದ ಅಧ್ಯಕ್ಷರಾದ  ರಾಜೇಶ್ ಪಳ್ಳಿಕೆರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರು.ಜಸ್ಮಿತಾ ವಿವೇಕ್ ವಂದಿಸಿದರು.

ವರದಿ : ವಿಜಯ ಕುಮಾರ್ ಶೆಟ್ಟಿ ಮಂಜೇಶ್ವರ (ಯುಎಇ)

Post a Comment

0 Comments