ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಸಿ.ಎಚ್.ಸಿ ಮಂಜೇಶ್ವರ ಆಸ್ಪತ್ರೆಯಲ್ಲಿ ಅಭಿವೃದ್ಧಿ ಕಾಮಗಾರಿಯ ಸಲುವಾಗಿ ಕಡಿದ ಮರಗಳಿಗೆ ಬದಲಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಗೊವಿಂದ ಪೈ ಕಾಲೇಜ್ ಎನ್.ಎಸ್.ಎಸ್ ಯುನಿಟ್ ಹಾಗೂ ಕಾಲೇಜು ಅಧಿಕಾರಿಗಳ ಸಹಕಾರದೊಂದಿಗೆ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ 500 ಸಸಿಗಳನ್ನು ನೆಟ್ಟು ಮಾದರಿಯಾಗಿದೆ. ಬ್ಲಾಕ್ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಹನೀಫ್ ಪಿ.ಕೆ ಅವರು ಸಸಿಗಳನ್ನು ನೆಟ್ಟರು. ಎನ್‌ಎಸ್‌ಎಸ್ ತಂಡದ ಸದಸ್ಯರು ಕಾಲೇಜು ಪ್ರಾಂಶುಪಾಲರಾದ ಶ್ರೀ ಮುಹಮ್ಮದ್ ಅಲಿ, ಶಿಕ್ಷಕರಾದ ಶ್ರೀ ಗೋವಿಂದನ್‌ಕುಟ್ಟಿ, ಶ್ರೀ ಜೀವೇಶ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯೆ ಶ್ರೀಮತಿ ಶಂಸೀನಾ ಎ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಸದಸ್ಯರಾದ ಶ್ರೀ ರಾಧಾಕೃಷ್ಣನ್, ಶ್ರೀ ಅನಿಲ್ ಕುಮಾರ್, ಬ್ಲಾಕ್ ಪಂಚಾಯತ್ ಸಹ ಬಿ.ಡಿ .ಓ ಶ್ರೀ ಸುಂದರ ಕೆ ಉಪಸ್ಥಿತರಿದ್ದರು.
0 Comments