ದುಬೈಯಲ್ಲಿ ಕರಮಾ ಫ್ರೆಂಡ್ಸ್ ನಿಂದ 9ನೇ ವರ್ಷದ ಗಣೇಶೋತ್ಸವ ಆಚರಣೆ ಸಂಪನ್ನ


ದುಬೈ: ನಮ್ಮ ಕಂಬಳ ಟೀಮ್ ದುಬೈ ಇದರ ಸಂಚಾಲಕರಾದ ಸನತ್ ಕುಮಾರ್ ಶೆಟ್ಟಿ, ಸಂತೋಷ್ ರೈ,ವಿವೇಕ್ ಶೆಟ್ಟಿ, ವಿಶು ಕುಮಾರ್, ಪ್ರಶಾಂತ್ ಶೆಟ್ಟಿಯವರ ನೇತೃತ್ವದಲ್ಲಿ ಕರಾಮ ಫ್ರೆಂಡ್ಸ್ ನ 9 ನೇ ವರ್ಷದ ಗಣೇಶೋತ್ಸವವು  ವಿವಿಧ ಕಾರ್ಯಕ್ರಮಗಳೊಂದಿಗೆ ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಜರಗಿತು.


ನಗರದ ಅಲ್ ಗಿಸಾಸ್ ನ ಸನತ್ ಕುಮಾರ್ ಶೆಟ್ಟಿಯವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಗೆ ಗಣಪತಿ ದೇವರ ಪ್ರತಿಷ್ಠಾಪನೆ ಮಾಡಿ ಸಾಯಂಕಾಲ 5 ಗಂಟೆಗೆ ದುಬೈಯ ಮಮ್ಜಾರ್ ಸಮುದ್ರದಲ್ಲಿ ವಿಸರ್ಜಿಸಲಾಯಿತ್ತು. ಮಧ್ಯಾಹ್ನ ದೇವರಿಗೆ ಮಹಾಪೂಜೆ ಹಾಗೂ  ಭಕ್ತಾದಿಗಳಿಗೆ ಅನ್ನದಾನ ಜರಗಿತು.





ಹಿಂದೂ ಧಾರ್ಮಿಕ ಸಂಸ್ಕೃತಿಯ ಆಚರಣೆಯನ್ನು ಅರಬ್ ರಾಷ್ಟ್ರದಲ್ಲಿ ಯಥಾವತ್ ಆಚರಿಸಿಕೊಂಡು ಬರುತ್ತಿರುವ ಕರಾಮ ಫ್ರೆಂಡ್ಸ್ ನ ಚಟುವಟಿಕೆಗೆ ಎಲ್ಲೆಡೆಯೂ ಪ್ರಶಂಸನೆ ಮೂಡಿ ಬಂದಿದೆ.

ಮುಂದಿನ ವರ್ಷದ 10 ನೇ ವರ್ಷದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗುವುದು ಎಂದು ಸಮಾಜ ಸೇವಕ,ಕಂಬಳ ಪ್ರೇಮಿ,ಸಂಘಟಕ ಸನತ್ ಕುಮಾರ್ ಶೆಟ್ಟಿ ವಿಶೇಷ ಚಾನೆಲ್ ಗೆ ತಿಳಿಸಿದ್ದಾರೆ.

ವರದಿ : ವಿಜಯ ಕುಮಾರ್ ಶೆಟ್ಟಿ ಮಂಜೇಶ್ವರ (ಯುಎಇ)

ಜಾಹೀರಾತು


Post a Comment

0 Comments