ವಿವಾನ್ ಪ್ರೊಡಕ್ಷನ್ ನಿಂದ "ಐಸಬಾಸ್" ತುಳು ಅಲ್ಬಂ ಬಿಡುಗಡೆಗೆ ಸಿದ್ಧತೆ


 ಕುಂಬಳೆ: ವಿವಾನ್ ಪ್ರೊಡಕ್ಷನ್‌ನ ವತಿಯಿಂದ "ಐಸಬಾಸ್" ಎಂಬ ತುಳು ವಿಭಿನ್ನ ಅಲ್ಬಂ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ವಿದ್ಯಾ ವೇಣುಗೋಪಾಲ ಆಚಾರ್ಯ ನಿರ್ಮಾಪಕರಾಗಿರುವ ಈ ಅಲ್ಬಮ್ ನ ಸಾಹಿತ್ಯ,ಕಥೆ,ಚಿತ್ರಕಥೆ,ಸಂಭಾಷಣೆ ಹಾಗೂ ನಿರ್ದೇಶನವನ್ನು ಚೇತನ್ ಕೆ. ವಿಟ್ಲ ನಡೆಸಿದ್ದಾರೆ. ಅಚಲ್ ವಿಟ್ಲ ಸಹಾಯಕ ನಿರ್ದೇಶನ,ಅಂತರಾಷ್ಟ್ರೀಯ ಮಟ್ಟದ ಖ್ಯಾತ ಚಿತ್ರ ಕಲಾವಿದ ದಿ.ಎಂಜಿಕೆ ಆಚಾರ್ಯ ಅವರ ಕನಸಿನ ಕೂಸಾದ ಟೀಮ್ ಎಂಜಿಕೆ ಶಿಲ್ಪಕಲಾ ಕುಂಬಳೆ ಇವರ ಕಲಾ ನಿದೇಶನದಲ್ಲಿ ಐಸಬಾತ್ ಮೂಡಿ ಬರಲಿದೆ. ಭವಾನಿ ಶಂಕರ್ ಗಾಯನ,ಬಾತು ಕುಲಾಲ್ ಡಿಒಪಿ ಹಾಗೂ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಆಶ್ವಿನ್ ಬಾಬಣ್ಣ ಪುತ್ತೂರು ಮಾಸ್ಟರಿಂಗ್ ನಡೆಸಿದ ಐಸಬಾತ್ ನಲ್ಲಿ ವೇಣುಗೋಪಾಲ ಆಚಾರ್ಯ, ಸುನಿಲ್ ಕುಮಾರ್, ಲಿಂಗಪ್ಪ ಕುಬಣೂರು, ಚರಣ್ ಮುಳ್ಳೇರಿಯ,ಸಂಜು ಮೈಸೂರು,ಅಚಲ್ ವಿಟ್ಲ,ಬಾಭು ಬದಿಯಡ್ಕ,ಚೇತನ್ ಕೆ. ವಿಟ್ಲ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಜ್ಜೆ ಡಿಸೈನ್ಸ್ ನ ಶಶಿ ಆಚಾರ್ ಕನ್ಯಾನ ಪ್ರಚಾರ ವಿನ್ಯಾಸ ನಿರ್ವಹಿಸಿದ್ದಾರೆ. 

ಇದರ ಶೀರ್ಷೀಕೆಯನ್ನು ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಬಿಡುಗಡೆ ಮಾಡಿದ್ದಾರೆ.


 V4 vaishu ಯೂಟ್ಯೂಬ್ ಚಾನೆಲ್ ನಲ್ಲಿ ಐಸಬಾಸ್
ಅಲ್ಬಂ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಜಾಹೀರಾತು


Post a Comment

0 Comments