ಮಂಜೇಶ್ವರ: ರಾಷ್ಟೀಯ ಹೆದ್ದಾರಿ ಕಾಮಗಾರಿಯ ಅಶಾಸ್ತ್ರೀಯತೆ ಪ್ರಶ್ನಿಸಿ ಹೋರಾಟ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮಂಜೇಶ್ವರ ಮೂರನೇ ಹಂತದ ಹೋರಾಟವಾಗಿ ಕುಂಜತ್ತೂರಿನಲ್ಲಿ ರಿಲೇ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದೆ. ಗುರುವಾರದಂದು ಹೋರಾಟ ಸಮಿತಿಯ ಚೆಯರ್ಮಾನ್ ಸೈಫುಲ್ಲ ತ೦ಗಳವರ ಅಧ್ಯಕ್ಷತೆಯಲ್ಲಿ ಹಿರಿಯ ಪಧಾದಿಕಾರಿ ಸಂಜೀವ ಶೆಟ್ಟಿ ಮಾಡ ಉದ್ವಾಟಿಸಿದರು.
ಬಳಿಕ ಪದಾಧಿಕಾರಿಗಳಾದ ಅಶ್ರಫ್ ಬಡಾಜೆ, ದಯಾಕರ ಮಾಡ, ಕೇರಳ ವ್ಯಾಪಾರಿ ವ್ಯವಸಾಯ ಸಮಿತಿ ಅಧ್ಯಕ್ಷ ಬಶೀರ್ ಕನಿಲ ಉ.ಎ.ಖಾದರ್, ಅಶ್ರಫ್ ಕುಂಜತ್ತೂರು, ಕೆ.ಎಂ.ಖಾದರ್, ಎಸ್.ಎಂ.ಬಶೀರ್, ಅಶ್ರಫ್ ಬಾಚಾಲಿಕೆ, ಮೆಂಬರ್ ರಹಿಮಾನ್, ಜಬ್ಬಾರ್ ಬಹರೈನ್, ಮಾತನಾಡಿದರು.
ಸಮದ್ ಕುಂಜತ್ತೂರು, ಹಸೈನಾರ್ ಸೆವೆನ್ಸ್ಟಾರ್, ಆಲಿಕುಟ್ಟಿ ನ್ಯಾಶನಲ್ , ಅಶ್ರಫ್ ನ್ಯಾಶನಲ್', ಅಬೂಬಕ್ಕರ್ ತೂಮಿನಾಡು, ಕುಞಮೋನು ಕುಂಜತ್ತೂರು ಉಪಸ್ಥಿತರಿದ್ದರು.
ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ ರವರ ನೇತೃತ್ವದಲ್ಲಿ ಉಪಾಧ್ಯಕ್ಷ ಕ್ಷರಾದ ಮೊಹಮ್ಮದ್ ರಫೀಕ್, ಸದಸ್ಯರಾದ ರುಬೀನ, ಮುಂತಾಸ್ ಶಮೀರ ಮೊದಲಾದವರು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ತಮ್ಮ ಪಂಚಾಯತಿಗೆ ಒಳಪಟ್ಟ ಪ್ರದೇಶವಾದ ಹೊಸಂಗಡಿ ಭಾಗದಲ್ಲಿರುವ ಜನರು ಆವಶ್ಯಕತೆಗಾಗಿ ಸಮರ ಮಾಡುವ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಅಧ್ಯಕ್ಷ ಜೀನ್ ಲವಿನ ಮಂತೇರೊ ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಷಯದಲ್ಲಿ ಹೋರಾಟ ಮಾಡುವ ಎಲ್ಲಾ ಜನರಿಗೂ ನಮ್ಮ ಬೆಂಬಲವಿದೆಯೆಂದು ಧರಣಿ ಸಮರ ನಾಯಕರ ಸಮ್ಮುಖದಲ್ಲಿ ಚೆಯರ್ಮಾನ್ ಸೈಫುಲ್ಲ ತಿಂಗಳವರು ಪಂಚಾಯತ್ ಅಧ್ಯಕ್ಷರಿಗೆ ಭರವಸೆ ನೀಡಿದರು. ಹೋರಾಟ ಸಮಿತಿ ಸಂಚಾಲಕ ಕುಞಮೋನು ಸ್ವಾಗತಿಸಿ ಹನೀಫ್ ಕುಚ್ಚಿಕಾಡ್ ವಂದಿಸಿದರು.


0 Comments