ಮಂಜೇಶ್ವರ: ರಾಷ್ಟೀಯ ಹೆದ್ದಾರಿ ಕಾಮಗಾರಿಯ ಅಶಾಸ್ತ್ರೀಯತೆ ಪ್ರಶ್ನಿಸಿ ಹೋರಾಟ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮಂಜೇಶ್ವರ ಮೂರನೇ ಹಂತದ ಹೊರಾಟವಾಗಿ ಕುಂಜತ್ತೂರಿನಲ್ಲಿ ನಡೆಯುತ್ತಿರುವ ರಿಲೇ ಧರಣಿ ಸತ್ಯಾಗ್ರದ ನಾಲ್ಕನೇ ದಿನ ಮಂಜೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷರು ಎರಡನೇ ವಾರ್ಡಿನ ಹಾಲಿ ಮೆಂಬರರಾದ ನುಶ್ರತ್ ಜಹಾನಿನ ನೇತೃತ್ವದಲ್ಲಿ ಊರಿನ ಮಹಿಳೆಯರು ಧರಣಿಯಲ್ಲಿ ಸಹಭಾಗಿಯಾದರು.
ನಾಲ್ಕನೇ ದಿನ ಧರಣಿ ಸತ್ಯಾಗ್ರಹ ಹೋರಾಟ ಸಮಿತಿ ಚೆಯರ್ಮಾನ್ ಸೈಫುಲ್ಲ ತಂಗಳವರ ಅಧ್ಯಕ್ಷತೆಯಲ್ಲಿ ನುಸ್ರತ್ ಜಹಾನ್ ಉದ್ಘಾಟಿಸಿದರು, ಕುಞಮೋನು ತೂಮಿನಾಡು ಸ್ವಾಗತಿಸಿ ಹಸೈನಾರ್ ಸೆವೆನ್ಸ್ಟಾರ್ ಪ್ರಾಸ್ಥಾವಿಕ ಭಾಷಣ ಮಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ಎಸ್.ಎಂ.ಬಶೀರ್, ಅಶ್ರಫ್ ಕುಂಜತ್ತೂರು, ಅಬೂಬಕ್ಕರ್ ತೂಮಿನಾಡು, ಜಬ್ಬಾರ್ ಪದವ್, ರಿಯಾಸ್ ಬಾಟಲಿಕೆ ' ಶಬೀರ್ ಹೊಸೂರು, ಹನೀಫ್ ತೂಮಿನಾಡು, ವಾರ್ಡು ಮೆಂಬರುಗಳಾದ ಉಮ್ಮು ಕುಲ್ಸುಂ, ಲಕ್ಷ್ಮಣ ಕಣ್ವತೀರ್ಥ ಉಪಸ್ಥಿತರಿದ್ದರು.
ಜಾಹೀರಾತು



0 Comments