ಯುಎಇಯಲ್ಲಿ ಜನಮನ ಸೂರೆಗೊಂಡ ಗಮ್ಮತ್ ನ "ಕುಟುಂಬ"

 


ದುಬೈ : 10 ವರ್ಷಗಳ ಹಿಂದೆ ತುಳು ರಂಗಭೂಮಿಯಲ್ಲಿ ಬದಲಾವಣೆಯ ಬಿರುಗಾಳಿಯನ್ನು ಬೀಳಿಸಿದ 500 ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಕಂಡ ಕಲಾ ಸಂಗಮ ಕುಡ್ಲ ತಂಡದ "ಕುಟುಂಬ" ನಾಟಕವನ್ನು ದುಬೈಯ ಹವ್ಯಾಸಿ ಕಲಾವಿದರು ಅಭಿನಯಿಸಿ ಯುಎಇ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದರೆ.

 


ನಗರದ ಎಮಿರೇಟ್ಸ್ ಥಿಯೇಟರ್ ನ ತುಂಬಿ ತುಳುಕಿದ ಸಭಾಂಗಣದಲ್ಲಿ ಗಮ್ಮತ್ ಕಲಾವಿದರು ಯುಎಇ ಇದರ ಹವ್ಯಾಸಿ ಕಲಾವಿದರು ಅಭಿನಯದ ಕುಟುಂಬ ನಾಟಕವು ಹೌಸ್‌ ಫುಲ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ನಾಟಕದ ಎರಡು ದಿನದ ಮುಂಚೆ ಟಿಕೆಟ್ ಗಳು ಖಾಲಿಯಾಗಿದ್ದು ನಾಟಕದಂದು ಯುಎಇ ಯ ಕಲಾ ಅಭಿಮಾನಿಗಳು ನಾಟಕದ ಟಿಕೆಟ್ ಗಾಗಿ ಪರ ಸಾಹಸ ಪಡಬೇಕಾಯಿತು.   

           ಉದ್ಘಾಟನಾ ಕಾರ್ಯಕ್ರಮ


 ಗಮ್ಮತ್ ಕಲಾವಿದರು ಯುಎಇ ಇದರ ಹತ್ತನೇ ವರ್ಷದ ಕುಟುಂಬ ನಾಟಕದ ಮುಂಚೆ ಗಣ್ಯಾತಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಗಮ್ಮತ್ ಕಲಾವಿದರ ಮಹಾ ಪೋಷಕರಾದ ಹರೀಶ್ ಬಂಗೇರ,ಕನ್ನಡ ತುಳು ಚಿತ್ರ ನಿರ್ಮಾಪಕರು ಹಾಗೂ ಉದ್ಯಮಿಗಳಾದ ರೊನಾಲ್ಡೊ ಮಾರ್ಟಿಸ್,ಹರೀಶ್ ಶೇರಿಗಾರ್,ಉದ್ಯಮಿಗಳಾದ ಜೊಸೆಫ್ ಮಥಾಯಿಸ್ ಗುಣಶೀಲ್ ಶೆಟ್ಟಿ, ಅರುಣ್ ರೈ ತೋಡರ್,ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಇ. ಮೂಳೂರು,ರಾಹುಲ್ ಚಂದ್ರಶೇಖರ್, ಲವೀನಾ ಫರ್ನಾಂಡೀಸ್, ಕುವೈಟ್‌ ತುಳು ಕೂಟದ ಅಧ್ಯಕ್ಷರಾದ ಸನತ್ ಕುಮಾರ್ ಶೆಟ್ಟಿ, ಚಲನಚಿತ್ರ ನಟ ವಿನಿತ್ ಕುಮಾರ್, ವಿಜಯ ಕುಮಾರ್ ಕೊಡಿಯಲ್ ಬೈಲ್, ಫ್ರಾಂಕ್ ಫರ್ನಾಂಡೀಸ್,ಪ್ರೇಮ್ ನಾಥ್ ಶೆಟ್ಟಿ, ಗಮ್ಮತ್ ಕಲಾವಿದರ ಅಧ್ಯಕ್ಷರಾದ ರಾಜೇಶ್ ಕುತ್ತಾರ್ ಉಪಸ್ಥಿತರಿದ್ದರು. ದೀಪಕ್ ಎಸ್.ಪಿ ಕಾರ್ಯಕ್ರಮ ನಿರೂಪಿಸಿದರು.


ವಿಜಯ ಕುಮಾರ್ ಕೊಡಿಯಲ್ ಬೈಲ್ ರಚನೆಯ ಈ ನಾಟಕವನ್ನು ವಿಶ್ವನಾಥ ಶೆಟ್ಟಿ ದುಬೈಯವರು ನಿರ್ದೇಶನ ಮತ್ತು ಸಂಗೀತವನ್ನು ಎ.ಕೆ ವಿಜಯ ಕೋಕಿಲ ಮಾಡಿದ್ದಾರೆ.  ಕಲಾವಿದರಾಗಿ ಚಿದಾನಂದ ಪೂಜಾರಿ, ಗಿರೀಶ್ ನಾರಾಯಣ,ಲವೀನಾ ಫೆರ್ನಾಂಡೀಸ್, ಜೇಶ್ ಬಾಯರ್, ಡೋನಿ ಕೊರೇಯಾ,ಆಶಾ ಕೊರೇಯಾ, ಸಂದಿಪ್ ದೇವಾಡಿಗ,ಚಿತ್ರ ಶೆಟ್ಟಿ, ದೀಪ್ತಿ ದಿನರಾಜ್, ಸುನೀಲ್ ಸುವರ್ಣ,ರೂಪೇಶ್ ಶೆಟ್ಟಿ,ರಮೇಶ್ ಸುವರ್ಣ, ಪ್ರಶಾಂತ್ ನಾಯರ್,ಗೌತಮ್ ಬಂಗೇರ, ಸಮಂತ ಗಿರೀಶ್, ಸಜನಿ ಜೇಶ್ ಅಭಿನಯಿಸಿದ್ದಾರೆ. ನೈಪಥ್ಯದಲ್ಲಿ ರೋಹನ್ ಲೋಬೊ,ಸತೀಶ್ ಉಳ್ಳಾಲ್,ಅಮಿತ್ ಸಹಕರಿಸಿದರು.

ವರದಿ: ವಿಜಯ ಕುಮಾರ್ ಶೆಟ್ಟಿ

ಗಾಣದಮೂಲೆ (ದುಬೈ)



Post a Comment

0 Comments