ಗಲ್ಫ್ ದೇಶದಲ್ಲಿ ಭಾರತೀಯ ಹಬ್ಬದ ಸಂಸ್ಕೃತಿ ಶ್ಲಾಘನೀಯ |ಉಮಾನಾಥ ಕೋಟ್ಯಾನ್


ದುಬೈ : "ಮನೆಗೆ ಹೇಗೆ ಒಂದು ದೇವರ ಕೋಣೆ ಇದೆಯೋ ಹಾಗೆ ವಿಶ್ವಕ್ಕೆ ನಮ್ಮ ಭಾರತ ದೇಶ ಒಂದು ದೇವರ ಕೋಣೆ.ನಮ್ಮ ಭಾರತ ದೇಶದ ಸಂಸ್ಕಾರ ಸಂಸ್ಕೃತಿಗಳ ಆಚಾರ ವಿಚಾರಗಳನ್ನು ಈ ಮರಳು ಭೂಮಿಯಲ್ಲಿ ಆಚಾರಿಸಿ ಅದನ್ನು ಉಳಿಸಿಕೊಂಡು ಬರುತ್ತಿರುವ ಹಾಗೂ ಸಂಸ್ಕೃತಿಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತಿರುವ ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸರ್ವ ಸದಸ್ಯರ ಕಾರ್ಯ ಪ್ರಶಂಸನೀಯ" ಎಂದು ಕರ್ನಾಟಕ ಸರಕಾರದ ವಿಧಾನ ಸಭಾ ಸದಸ್ಯರಾದ ಉಮಾನಾಥ ಕೋಟ್ಯಾನ್ ನುಡಿದರು.


ಅವರು ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಸಮಿತಿ ದುಬೈ ಇದರ ವತಿಯಿಂದ  ಅಜ್ಮಾನ್ ನ ಇಂಡಿಯನ್ ಅಸೋಸಿಯೇಷನ್ ನ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತಾಡಿ ಸಮಿತಿ ವತಿಯಿಂದ ವೈಭವಯುತವಾಗಿ ಜರಗುತ್ತಿರುವ ಗಣೇಶೋತ್ಸವದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. 

ಮುಖ್ಯ ಅತಿಥಿಯಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಉಪಸ್ಥಿತರಿದ್ದರು.ಸಮಿತಿಯ ಸದಸ್ಯರಾದ ಮಹೇಶ್ ಅವಲ್ದಾರ್ ಮತ್ತು ಶಾಲಿನಿ ಅವಲ್ದಾರ್ ದಂಪತಿಗಳನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಪ್ರಾಯೋಜಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 


ಸಮಿತಿಯ ಅಧ್ಯಕ್ಷರಾದ ಸುಗಂಧರಾಜ್ ಬೇಕಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷರಾದ ಅಜಿತ್ ಕೊರಕ್ಕೋಡು,ಪ್ರ.ಕಾರ್ಯದರ್ಶಿ ಯಶವಂತ್ ಮಲ್ಲಿಗೆಮಾಡು,ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ರಾವ್,ಪ್ರಭಾಕರ ಅಂಬಲತ್ತರೆ ಸಭೆಯಲ್ಲಿಉಪಸ್ಥಿತರಿದ್ದರು.


ವಿಘ್ನೇಶ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.

✒️ವರದಿ: ವಿಜಯಕುಮಾರ್ ಶೆಟ್ಟಿ

ಗಾಣದಮೂಲೆ ಮಜಿಬೈಲ್ (ದುಬೈ)

(ಜಾಹೀರಾತಿಗಾಗಿ ಸಂಪರ್ಕಿಸಿ +971552032097)

ಜಾಹೀರಾತು


Post a Comment

0 Comments