ಕಾಸರಗೋಡು: ಧಾರ್ಮಿಕ-ಸಾಂಸ್ಕೃತಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ “ಭಜನಾ ಸಾಧಕ ಪುರಸ್ಕಾರ”ವನ್ನು ಶುಕ್ರವಾರ ಪ್ರದಾನಿಸಲಾಗಿದೆ. ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಭಜನಾ ಪರಿಷತ್ ನ ನೇತೃತ್ವದಲ್ಲಿ ಅಮೃತ ವರ್ಷಿಣಿ ಸಭಾ ಭವನದಲ್ಲಿ ಜರಗಿದ 24ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ವೆಂಕಟ್ರಮಣ ಹೊಳ್ಳರ ಗಣನೀಯ ಸೇವೆಯನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಿದ್ದಾರೆ. ಸಭೆಯಲ್ಲಿ ಪೇಜಾವರ ಮಠದ ಶ್ರೀಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಇಸ್ಕಾನ್ ಬೆಂಗಳೂರುನ ಶ್ರೀರಾಮ ಪ್ರಭು ಚಂದ್ರದಾಸ ಸ್ವಾಮೀಜಿ,ಮಾತೃಶ್ರೀ ಡಾ.ಹೇಮಾವತೀ ಹೆಗ್ಗಡೆ ಮೊದಲಾದವರು ಉಪಸ್ಥಿತರಿದ್ದರು.
ಕೆ.ಎನ್. ವೆಂಕಟ್ರಮಣ ಹೊಳ್ಳ ಅವರು ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಭಜನಾ ಪರಿಷತ್ ನ ಕಾಸರಗೋಡು ವಲಯ ಅಧ್ಯಕ್ಷರಾಗಿ ಖ್ಯಾತ ಭಜನೆ ಸಂಕೀರ್ತನಗಾರರಾದ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರೊಡನೆ "ಭಜನೆ ಅಭಿಮಾನ -ಅಭಿಯಾನ "ವನ್ನು ವಿವಿಧ ಕ್ಷೇತ್ರ ಹಾಗೂ ಮನೆಗಳಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಜಿಲ್ಲೆಯ ಹಲವಾರು ದೈವ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಗಳಲ್ಲಿ ಸಕ್ರಿಯರಾಗಿ ಸೇವೆಗೈಯುತ್ತಿದ್ದಾರೆ.
ಜಾಹೀರಾತು




0 Comments