ದುಬೈ: ಗಮ್ಮತ್ ಕಲಾವಿದರು ಯುಎಇ ಇದರ ದಶಮಾನೋತ್ಸವವು ವಿಜಯ ಕುಮಾರ್ ಕೊಡಿಯಲ್ ಬೈಲ್ ರಚನೆಯ ವಿಶ್ವನಾಥ ಶೆಟ್ಟಿ ದುಬೈ ನಿರ್ದೇಶನದಲ್ಲಿ "ಕುಟುಂಬ" ತುಳು ಸಾಂಸಾರಿಕ ಹಾಸ್ಯಮಯ ನಾಟಕವು ಇತ್ತೀಚೆಗೆ ನಗರದ ಎಮಿರೇಟ್ಸ್ ಥಿಯೇಟರ್ ನಲ್ಲಿ ಅದ್ದೂರಿಯಾಗಿ ಜರುಗಿತು.
ನಾಟಕದ ಮುಂಚಿತವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗಮ್ಮತ್ ಕಲಾವಿದರು ತಂಡದ ಪ್ರಬುದ್ಧ ರಂಗ ಕಲಾವಿದರಾದ ಸಂದೀಪ್ ದೇವಾಡಿಗ,ಶ್ರೀಮತಿ ಚಿತ್ರ ಪ್ರಸನ್ನ ಶೆಟ್ಟಿ ನಿರ್ದೇಶಕ ವಿಶ್ವನಾಥ ಶೆಟ್ಟಿ ಮತ್ತು ತಂಡದ ಸಾರಥಿ ಮಹಾ ಪೋಷಕ ಹರೀಶ್ ಬಂಗೇರ ದಂಪತಿಗಳನ್ನು ಸನ್ಮಾನಿಸಲಾಯಿತು. ಹಾಗೂ ವಿಶೇಷ ಅತಿಥಿಯಾಗಿ ಆಗಮಿಸಿದ ತುಳು ಕೂಟ ಕುವೈಟ್‌ನ ಅಧ್ಯಕ್ಷರಾದ ಸನತ್ ಶೆಟ್ಟಿ, ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ನ ವಿನಿತ್ ಕುಮಾರ್, ಕಲಾಸಂಗಮ ಕುಡ್ಲದ ವಿಜಯ ಕುಮಾರ್ ಕೋಡಿಯಲ್ ಬೈಲ್, ಸಂಗೀತ ನಿರ್ದೇಶಕ ಎ.ಕೆ.ವಿಜಯ ಕೋಕಿಲರವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತ್ತು.
ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಕನ್ನಡ ತುಳು ಚಿತ್ರ ನಿರ್ಮಾಪಕರು ಹಾಗೂ ಉದ್ಯಮಿಗಳಾದ ರೊನಾಲ್ಡೊ ಮಾರ್ಟಿಸ್,ಹರೀಶ್ ಶೇರಿಗಾರ್,ಉದ್ಯಮಿಗಳಾದ ಜೊಸೆಫ್ ಮಥಾಯಿಸ್ ಗುಣಶೀಲ್ ಶೆಟ್ಟಿ, ಅರುಣ್ ರೈ ತೋಡರ್,ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಈ ಮೂಳೂರು,ರಾಹುಲ್ ಚಂದ್ರಶೇಖರ್, ಲವೀನಾ ಫರ್ನಾಂಡೀಸ್, ಫ್ರಾಂಕ್ ಫರ್ನಾಂಡೀಸ್,ಪ್ರೇಮ್ ನಾಥ್ ಶೆಟ್ಟಿ, ಗಮ್ಮತ್ ಕಲಾವಿದರ ಅಧ್ಯಕ್ಷರಾದ ರಾಜೇಶ್ ಕುತ್ತಾರ್ ಉಪಸ್ಥಿತರಿದ್ದರು. ದೀಪಕ್ ಎಸ್.ಪಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಕೊನೆಗೆ ರಾಫಿಲ್ ಡ್ರಾ ನಡೆಯಿತ್ತು.ಭೀಮ ಜ್ಯುವೆಲ್ಲರಿ ವತಿಯಿಂದ ಚಿನ್ನದ ಉಂಗುರ, ಕನ್ನಡ ಪಾಠ ಶಾಲೆ ದುಬೈ ಶಶಿಧರ್ ನಾಗರಂಜಪ್ಪರವರಿಂದ ಮೈಕ್ರೊ ಓವನ್,ಗಮ್ಮತ್ ಕಲಾವಿದರ ವತಿಯಿಂದ ಸ್ಮಾರ್ಟ್ ಟಿವಿ ಅದೃಷ್ಟದಾರರಿಗೆ ಬಹುಮಾನವಾಗಿ ನೀಡಲಾಯಿತು.
ವರದಿ: ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)









0 Comments