ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಲೆತಾಯಿ ಧೋರಣೆಕ್ಕೆದುರಾಗಿ ಮಂಜೇಶ್ವರದಲ್ಲಿ ನ.1ಕ್ಕೆ ಯು.ಡಿ.ಎಫ್. ಧರಣಿ


 ಮಂಜೇಶ್ವರ: ತಲಪ್ಪಾಡಿ ಸುಂಕ ವಸೂಲಿ ಕೇಂದ್ರದ ಸಮೀಪವಾಸಿಗಳಾದ ತಲಪ್ಪಾಡಿಯವರಿಗೆ  ಸುಂಕ ವಿನಾಯಿತಿ ನೀಡಿರುವಾಗ ಗಡಿಪ್ರದೇಶದಲ್ಲಿ ವಾಸಿಸುವ ಗಡಿನಾಡಿಗರಾದ ಮಂಜೇಶ್ವರ ಗ್ರಾಮ ಪಂಚಾಯಿತಿಯಲ್ಲಿ ವಾಸಿಸುವವರಿಗೆ ವಿನಾಯಿತಿ ನಿಷೇದಿಸುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ  ಮಲೆತಾಯಿ ಧೊರಣೆಯೆಂದು ಆರೋಪಿಸಿ ಮಂಜೇಶ್ವರ ಪಂಚಾಯತ್ ಯು.ಡಿ.ಎಫ್. ಸಮಿತಿಯು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದಕ್ಕಿಂತ ಮುಂಚೆ ಯು.ಡಿ.ವೈ.ಎಫ್ ನೇತೃತ್ವದಲ್ಲಿ ತಲಪ್ಪಾಡಿ ಟೋಲ್ ಗೇಟಿಗೆ ನಡೆಸಿದ ಮಾರ್ಚ್ ಸಮೇತ ತುಂಬಾ ಹೋರಾಟ ನಡೆಸಿ ಗಳಿಸಿದ ಸುಂಕ ರಿಯಾಯಿತಿ ಕೊರೋನ ಮಿತಿಮೀರಿದ ಸಂದರ್ಭದಲ್ಲಿ ಪಾಸ್ಟ್ ಟಾಗ್ ಅಳವಡಿಸಿ ಸುಂಕ ವಿನಾಯಿತಿ ಮಂಜೀಶ್ವರ ನಿವಾಸಿಗಳಿಗೆ ಏಕಾಏಕಿ ನಿಲ್ಲಿಸಿದರು. ನಂತರದ ದಿನಗಳಲ್ಲಿ ಕ್ರಮೇಣ ತಲಪ್ಪಾಡಿ ನಿವಾಸಿಗಳಿಗೆ ಸುಂಕ ರಿಯಾಯಿತಿ ಅಳವಡಿಸಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಕ್ಷಪಾತ ಧೋರಣೆ ಇದನ್ನು ಖಂಡಿಸಿ ಕೇರಳ ಹುಟ್ಟು ದಿನವಾದ ನವಂಬರ್ ಒಂದನೇ ಸಾಯಂಕಾಲ 4 ಗಂಟೆಗೆ ಮಂಜೇಶ್ವರ ಯು.ಡಿ.ಎಫ್ ಸಮಿತಿಯು ಸಾಯಾಹ್ನ ಸತ್ಯಾಗ್ರಹ ಆಯೋಜಿಸಿದೆ. ಸತ್ರಾಗ್ರಹವು ಯು.ಡಿ.ಎಫ್ ಚಯರ್ಮಾನ್ ಜನಾಬ್ ಸೈಫುಲ್ಲ ತ೦ಗಳವರ ಅಧ್ಯಕ್ಷತೆಯಲ್ಲಿ ಶಾಸಕರಾದ ಜನಾಬ್ ಎ.ಕೆ.ಎಂ ಅಶ್ರಫ್ ಉದ್ಫಾಟಿಸುವರು ಎಂದು ಪ್ರಕಟಣೆ ತಿಳಿಸಿದೆ

Post a Comment

0 Comments