ದುಬಾಯಿ ಗಡಿನಾಡ ಉತ್ಸವ 2022 ಪ್ರಚಾರ ಪತ್ರ ಬಿಡುಗಡೆ


 ಕಾಸರಗೋಡು: ನವಂಬರ ತಿಂಗಳ 20 ರಂದು ದುಬಾಯಿಯಲ್ಲಿ ನಡೆಯಲಿರುವ ಐತಿಹಾಸಿಕವಾದ "ದುಬಾಯಿ ಗಡಿನಾಡ ಉತ್ಸವ 2022" ರ ಪ್ರಚಾರ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಈ ತಿಂಗಳ 23 ರಂದು ಕಾಸರಗೋಡಿನ ಸರಕಾರಿ ಅತಿಥಿ ಬಂಗಲೆಯಲ್ಲಿ ಕೇರಳ ರಾಜ್ಯ ವಿಪಕ್ಷ ನಾಯಕ ವಿ.ಡಿ. ಸತೀಶನ್ ಅವರು ಬಿಡುಗಡೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಸಂಸತ್ ಸದಸ್ಯ ರಾಜಮೋಹನ್ ಉಣ್ಣಿತಾನ್, ಶಾಸಕ ಎ.ಕೆ. ಎಂ ಅಶ್ರಫ್, ಮಾಜಿ ಶಾಸಕರಾದ ಕೆ.ಪಿ. ಕುಞಕಣ್ಣನ್, ಎಂ. ಸಿ. ಖಮರುದ್ದೀನ್, ಡಿಸಿಸಿಐ ಅಧ್ಯಕ್ಷ ಪಿ.ಕೆ. ಫೈಸಲ್, ದುಬಾಯಿ ಗಡಿನಾಡ ಉತ್ಸವ ಸಮಿತಿ ಪದಾಧಿಕಾರಿಗಳಾದ ಝೆಡ್. ಎ. ಕಯ್ಯಾರ್, ಎ.ಆರ್. ಸುಬ್ಬಯ್ಯಕಟ್ಟೆ, ಸುಬೈರ್ ಕುಬನೂರು, ರವಿ ನಾಯ್ಕಾಪು, ನಿವೃತ್ತ ಪ್ರಾoಶುಪಾಲ ಪ್ರೊ. ಎ. ಶ್ರೀನಾಥ್, ವಾಮನರಾವ್ ಬೇಕಲ್, ಸಂಧ್ಯಾರಾಣಿ ಟೀಚರ್,  ಚನಿಯಪ್ಪ ನಾಯ್ಕ, ಪಂಚಾಯತ್ ಸದಸ್ಯ ಹರೀಶ ಗೋಸಾಡ, ಅಖಿಲೇಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



Post a Comment

0 Comments