ದುಬೈ : ಚಾರಿತ್ರಿಕ ಸಿನಿಮಾಕ್ಕೂ ಯುಎಇಯ ತುಳು ಕನ್ನಡಿಗರ ಪೋತ್ಸಾಹ ಇದೇ ಎಂಬುದಕ್ಕೆ ಅ.16 ರಂದು ಯುಎಇ ಯಲ್ಲಿ ಪ್ರಿಮಿಯರ್ ಪ್ರದರ್ಶನಗೊಂಡ ಕಾರ್ಣಿಕದ ಕಲ್ಲುರ್ಟಿ ಸಿನಿಮಾ ಸಾಕ್ಷಿ.
ಕಾಂತರ ಎಂಬ ಕನ್ನಡ ಚಿತ್ರ ಹೌಸ್ ಫುಲ್ ಪ್ರದರ್ಶನಗೊಳ್ಳುವ ಈ ಸಮಯದಲ್ಲಿ ಒಂದು ಚಾರಿತ್ರಿಕ ಚಿತ್ರ ಯುಎಇ ಯಲ್ಲಿ ಒಂದೇ ದಿನ ನಾಲ್ಕು ಕಡೆ ನಾಲ್ಕು ಪ್ರಿಮಿಯರ್ ಪ್ರದರ್ಶನ ಹೌಸ್ ಫುಲ್ ಗೊಂಡಿರುವುದನ್ನು ನೋಡಿದರೆ ತುಳುನಾಡಿನ ದೈವ ದೇವರುಗಳ ಚಾರಿತ್ರ್ಯತೆಯನ್ನು ಮೆರೆಸುವಂತಹ ಚಿತ್ರಗಳ ನಿರ್ಮಾಪಕರಿಗೆ ಇನ್ನೆರಡು ಸಿನಿಮಾ ಮಾಡುವ ಹುಮ್ಮಸ್ಸು ಮೂಡಿದೆ.
ಫೋನಿಕ್ಸ್ ಫಿಲ್ಮ್ಸ್ ಸಂಧ್ಯಾ ಕ್ರಿಯೇಷನ್ಸ್ ಓವರ್‌ಸೀಸ್ ಮೂವೀಸ್ ಮತ್ತು ಸೆಂಟ್ (ಸಂಧ್ಯಾ ಕ್ರಿಯೇಷನ್ಸ್ ಈವೆಂಟ್ ನೆಟ್‌ವರ್ಕ್ ತಂಡ) ಸಹಯೋಗದೊಂದಿಗೆ ಅ.16 ರಂದು "ಕಾರ್ಣಿಕದ ಕಲ್ಲುರ್ಟಿ" ತುಳು ಸಿನಿಮಾ ದುಬೈ ಹಯಾತ್ ಗ್ಯಾಲರಿಯಲ್ಲಿ ಎರಡು ಪ್ರಿಮಿಯರ್ ಪ್ರದರ್ಶನ ಮತ್ತು ಶಾರ್ಜಾದ ಮೇಘ ಮಾಲ್ ನ ನೋವ ಸಿನಿಮಾಸ್ ನಲ್ಲಿ ಒಂದು ಪ್ರಿಮಿಯರ್ ಪ್ರದರ್ಶನಗೊಂಡಿತು. ತಾಂತ್ರಿಕ ಕಾರಣಗಳಿಂದ ಅಬುಧಾಬಿಯ ಬಿಡುಗಡೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಚಿತ್ರದಲ್ಲಿನ ಕನ್ನಡ ಉಪ ಶೀರ್ಷಿಕೆ ಅನೇಕ ಕನ್ನಡಿಗರು ಕೂಡ ಈ ಸಿನಿಮಾವನ್ನು ನೋಡುವಂತೆ ಮಾಡಿದೆ.
ಉದ್ಯಮಿ ಡಾ.ಫ್ರಾಂಕ್ ಫೆರ್ನಾಂಡಿಸ್, ಬಿಲ್ಲವ ಫ್ಯಾಮಿಲಿ ದುಬೈನ ಸತೀಶ್ ಪೂಜಾರಿ ಮತ್ತು ಪ್ರಭಾಕರ ಸುವರ್ಣ, ಕುಂದಾಪುರ ದೇವಾಡಿಗ ಮಿತ್ರದ ದಿನೇಶ್ ದೇವಾಡಿಗ, ಸೌಹಾರ್ದ ಲಹರಿ ತಂಡದ ಅಶೋಕ್ ಬೈಲೂರು,ಉದ್ಯಮಿ ರಾಮಚಂದ್ರ ಹೆಗ್ಡೆ, ಅಮಚಿಗೆಲೆ ಸಮಾಜದ ಸುದರ್ಶನ ಹೆಗ್ಡೆ, ಹರೀಶ್ ಬಂಗೇರ, ಅರಾನ್ಹಾ, ಗುಣಶೀಲ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಫಾರ್ಚೂನ್ ಹೋಟೆಲ್ ಗ್ರೂಪ್‌ನ ಪ್ರವೀಣ್ ಕುಮಾರ್ ಶೆಟ್ಟಿ, ನಂಜೆ ಯಾಟ್ಸ್‌ನ ಸಂದೀಪ್ ರೈ,ಜೇಮ್ಸ್ ಮೆಂಡೋನ್ಸಾ, ಮೆರಿಟ್ ಫ್ರೈಟ್ ಮತ್ತು ಶಿಪ್ಪಿಂಗ್‌ನ ಜೋಸೆಫ್ ಮಥಿಯಾಸ್, ಶಿವಶಂಕರ್,ಗೋಲ್ಡನ್ ಟ್ಯಾಲೆಂಟ್ ಫೈನ್ ಆರ್ಟ್ಸ್‌ನ ಸುರೇಶ್ ಶೆಟ್ಟಿ, ಯುವರಾಜ್ ದೇವಾಡಿಗ, ನೋಯೆಲ್ ಡಿ. ಅಲ್ಮೇಡಾ ಮತ್ತು ಇತರ ಹಲವಾರು ವ್ಯಕ್ತಿಗಳು ಯುಎಇಯಲ್ಲಿ 'ಕಾರ್ಣಿಕದ ಕಲ್ಲುರ್ಟಿ' ತುಳು ಚಲನಚಿತ್ರದ ಪ್ರೀಮಿಯರ್ ಬಿಡುಗಡೆಯ ಯಶಸ್ಸಿಗೆ SCENT ಗುಂಪಿನೊಂದಿಗೆ ಕೈಜೋಡಿಸಿ ಬೆಂಬಲಿಸಿದ್ದಾರೆ.
ಚಿತ್ರ ನಿರ್ಮಾಪಕ ನಿರ್ದೇಶಕರಾದ ಮಹೇಂದ್ರ ಕುಮಾರ್ ಪ್ರೇಕ್ಷಕರೊಂದಿಗೆ ಕುಳಿತು ಚಿತ್ರ ವೀಕ್ಷಿಸಿದರು. ಸೆಂಟ್ ತಂಡದ ಶೋದನ್ ಪ್ರಸಾದ್ ಸ್ವಾಗತಿಸಿ ಧನ್ಯವಾದವಿತ್ತರು. ಮತ್ತು ತಂಡದ ಸರ್ವ ಸದಸ್ಯರು ಚಿತ್ರ ಪ್ರದರ್ಶನದ ಯಶಸ್ವಿಗೆ ಸಾಥ್ ನೀಡಿದರು.
ಪ್ರೇಕ್ಷಕರು ಚಿತ್ರವನ್ನು ನೋಡಿ ಚೆನ್ನಾಗಿ ಆನಂದಿಸಿದ್ದೇವೆ. ಭವಿಷ್ಯದಲ್ಲಿ ಈ ರೀತಿಯ ಚಾರಿತ್ರಿಕ ಚಲನಚಿತ್ರಗಳನ್ನು ನಿರ್ಮಿಸಬೇಕು ಮತ್ತು ಮುಂದಿನ ಯುವ ಪೀಳಿಗೆಗೆ ದೈವ ದೇವರ ಕಥೆಯನ್ನು ಸಿನಿಮಾದ ಮೂಲಕ ನೋಡುವಂತಹ ಬಾಗ್ಯ ಬರಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವುದು ಕಂಡು ಬಂತು.
✒️ವಿಜಯ ಕುಮಾರ್ ಶೆಟ್ಟಿ
ಗಾಣದಮೂಲೆ ಮಜಿಬೈಲ್ (ದುಬೈ)




0 Comments