ದುಬೈ: ತೀಯಾ ಕುಟುಂಬ ಯುಎಇ ಇದರ ವತಿಯಿಂದ "ಶ್ರೀ ದುರ್ಗಾ ಪೂಜೆ 2022" ವು ದುಬೈನ ಫಾರ್ಚೂನ್ ಪ್ಲಾಜಾ ಹೋಟೆಲ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಕ್ತಿಶ್ರದ್ಧಾಪೂರ್ವಕವಾಗಿ ಜರುಗಿತು.
ತೀಯಾ ಸಮಾಜದ ಸುಮಂಗಲಿಯರಿಂದ ದೀಪ ಬೆಳಗಿಸುವ ಮೂಲಕ ಪೂಜೆ ಆರಂಭವಾಯಿತು. ಪುರೋಹಿತ ರಘು ಭಟ್ ಅವರ ಮಾರ್ಗದರ್ಶನದಂತೆ ತೀಯಾ ಸಮುದಾಯದ ಶ್ರೀಮತಿ ಗೀತಾ ರಾಜೇಶ್ ಪಳ್ಳಿಕೆರೆ ಮತ್ತು ರಾಜೇಶ್ ಪಳ್ಳಿಕೆರೆ ದಂಪತಿಗಳು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ರಾಜರಾಜೇಶ್ವರಿ ಭಜನಾ ಮಂಡಳಿ ದುಬೈ ಇವರಿಂದ ಭಜನೆ ಮತ್ತು ಶ್ರೀಮತಿ ಜಸ್ಮಿತಾ ವಿವೇಕ್ ಅವರ ಮಾರ್ಗದರ್ಶನದಲ್ಲಿ ಸುಮಂಗಲಿಯರು ಪ್ರಸ್ತುತಪಡಿಸುದ ನೃತ್ಯ ಭಜನೆ ಪೂಜೆಗೆ ಇನ್ನಷ್ಟು ರಂಗು ನೀಡಿತು.
ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ದುರ್ಗಾ ಮಾತೆಯ ಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ರೂವಾರಿ ಶ್ರೀನಿವಾಸ್ ಕೋಟ್ಯಾನ್ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಉಡುಗೊರೆಗಳನ್ನು ವಿತರಿಸಿದರು.
ಮಹಾ ಮಂಗಳಾರತಿಯ ನಂತರ ಎಲ್ಲಾ ಭಕ್ತರಿಗೆ ಪ್ರಸಾದ ಮತ್ತು ಮಹಾಪ್ರಸಾದ ವಿತರಿಸಲಾಯಿತು.ತೀಯಾ ಸಮಾಜದ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆಯವರು ಪೂಜೆಗೆ ಸೇರಿದ ಎಲ್ಲಾ ಭಕ್ತಾಧಿಗಳನ್ನು ಸ್ವಾಗತಿಸಿ ಧನ್ಯವಾದವಿತ್ತರು. ಅಮರ್ ಉಮೇಶ್ ನಂತೂರು ದ್ವನಿ ವ್ಯವಸ್ಥೆಗೆ ರೂವರಿಯಾಗಿ ಸಾಥ್ ನೀಡಿದರು.ಧರ್ಮೆಂದ್ರ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ವರದಿ: ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ,ಮಂಜೇಶ್ವರ
(ವಿಶೇಷ ಚಾನೆಲ್ ಯುಎಇ)

0 Comments